Karna Serial: ಈ ವಾರದ ಕಿಚ್ಚನ ಚಪ್ಪಾಳೆ ವಿಲನ್​ ಸಂಜಯ್​ಗೆ ಕೊಟ್ಟ ವೀಕ್ಷಕರು! ಯಾಕೆ ಅಂತೀರಾ?

Karna Serial: ಈ ವಾರದ ಕಿಚ್ಚನ ಚಪ್ಪಾಳೆ ವಿಲನ್​ ಸಂಜಯ್​ಗೆ ಕೊಟ್ಟ ವೀಕ್ಷಕರು! ಯಾಕೆ ಅಂತೀರಾ?

Karna Serial: ಈ ವಾರದ ಕಿಚ್ಚನ ಚಪ್ಪಾಳೆ ವಿಲನ್​ ಸಂಜಯ್​ಗೆ ಕೊಟ್ಟ ವೀಕ್ಷಕರು! ಯಾಕೆ ಅಂತೀರಾ?
ಕರ್ಣ ಮತ್ತು ನಿಧಿ ತಮ್ಮ ಪ್ರೀತಿಯನ್ನು ನಿತ್ಯಾಳಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದರೆ, ಸಂಜಯ್ ಈ ರಹಸ್ಯವನ್ನು ಬ್ಲ್ಯಾಕ್‌ಮೇಲ್‌ಗೆ ಬಳಸಿಕೊಳ್ಳುತ್ತಿದ್ದಾನೆ. ಇದೀಗ ನಿತ್ಯಾಳ ಮುಂದೆಯೇ, ನಿಧಿ ಪ್ರೀತಿಸುತ್ತಿರುವುದು ಕರ್ಣನನ್ನೇ ಎಂದು ಸಂಜಯ್ ಬಾಯ್ಬಿಟ್ಟಿದ್ದು, ಕಥೆಗೆ ಹೊಸ ತಿರುವು ಸಿಕ್ಕಿದೆ.
ಕರ್ಣ ಸೀರಿಯಲ್​ (Karna Serial) ನಲ್ಲಿ, ನಿತ್ಯಾ ಮತ್ತು ತೇಜಸ್​ ಒಂದಾಗ್ತಾರೆ ಎನ್ನುವ ಹೊತ್ತಿನಲ್ಲಿ ರಮೇಶ್​ ಕುತಂತ್ರದಿಂದ ಈ ಕಿಡ್​ನ್ಯಾಪ್​ ಮಾಡಿಸಿರೋದು ತೇಜಸ್​ ಅಪ್ಪ- ಅಮ್ಮ ಎಂದೇ ತಿಳಿದುಕೊಂಡು ಎಲ್ಲರೂ ಶಾಕ್​ಗೆ ಒಳಗಾಗಿದ್ದಾರೆ.

ಎಲ್ಲವೂ ಸರಿಯಾಗುತ್ತದೆ, ತಮ್ಮಿಬ್ಬರ ಹಾದಿ ಸುಗಮ ಆಗ್ತದೆ ಎಂದುಕೊಂಡಿದ್ದ ಕರ್ಣ ಮತ್ತು ನಿಧಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ. ಯಾವುದೇ ಕಾರಣಕ್ಕೂ ಸದ್ಯ ತಮ್ಮಿಬ್ಬರ ವಿಷಯ ನಿತ್ಯಾ ಕಿವಿಗೆ ಬೀಳದಂತೆ ಅವರು ಎಚ್ಚರ ವಹಿಸುತ್ತಿದ್ದಾರೆ.

ಆದರೆ, ಇದನ್ನೇ ಇಟ್ಟುಕೊಂಡು ಸಂಜಯ್​ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾನೆ. ಇದೀಗ ನಿಧಿ ಮತ್ತು ಕರ್ಣ ಸುತ್ತಾಡಲು ಹೋಗಿದ್ದರ ಬಗ್ಗೆ ನಿತ್ಯಾ ಬಳಿ ಟಾಂಟ್​ ಕೊಟ್ಟಿದ್ದಾನೆ ಸಂಜಯ್​.

ಇದನ್ನು ಕೇಳಿಸಿಕೊಂಡ ನಿತ್ಯಾ, ಸಂಜಯ್​ಗೆ ಛೀಮಾರಿ ಹಾಕಿದ್ದಾಳೆ. ತನ್ನ ತಂಗಿಯ ಬಗ್ಗೆ ಕೆಟ್ಟದ್ದು ಮಾತನಾಡಬೇಡ ಎಂದಿದ್ದಾಳೆ.

ಆದರೆ ಸುಮ್ಮನಾಗದ ಸಂಜಯ್​, ಅಸಲಿ ವಿಷಯ ಗೊತ್ತಾ? ನಿಮ್ಮ ತಂಗಿ ಯಾರ ಜೊತೆಗೆ ಸುತ್ತುತ್ತಾ ಇದ್ದಾಳೆ ಎನ್ನೋದು ಗೊತ್ತಾ ಎನ್ನುತ್ತಲೇ ಅವರು ಬೇರೆ ಯಾರೂ ಅಲ್ಲ ಕರ್ಣ ಎಂದಿದ್ದಾನೆ.

ಹಾಗಿದ್ದರೆ ಸತ್ಯ ಗೊತ್ತಾಗತ್ತಾ, ಅಥವಾ ಸಂಜಯ್​ ಅಲ್ಲಿಯೇ ಶಾಕ್​ ಕೊಟ್ಟು ತನ್ನಮಾತನ್ನು ಬದಲಿಸಿ, ತಾನು ಹೇಳಿದ್ದು ಸುಳ್ಳು ಎನ್ನುತ್ತಾನಾ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ವೀಕ್ಷಕರು ಮಾತ್ರ ಇದು ನಿಜವಾಗಲಿ, ನಿತ್ಯಾ-ಕರ್ಣನ ವಿಷ್ಯ ನಿಧಿಗೆ ಬೇಗ ತಿಳಿಯಲಿ ಎನ್ನುತ್ತಿದ್ದಾರೆ. ಸಂಜಯ್​ ಸತ್ಯ ಹೇಳಿದ್ರೆ ಈ ವಾರದ ಕಿಚ್ಚನ ಚಪ್ಪಾಳೆ ಸಂಜಯ್​ಗೆ ಎನ್ನುತ್ತಿದ್ದಾರೆ!

Source link

Leave a Reply

Your email address will not be published. Required fields are marked *