Karna Serial ರೋಚಕ ಟ್ವಿಸ್ಟ್​: ಫೇಲ್​ ಆಗಿದ್ದ ನಿಧಿ ಈಗ ಸರ್ಜನ್​! ಬಯಲಾಗತ್ತಾ ಲವ್​ ಸೀಕ್ರೆಟ್​?

Karna Serial ರೋಚಕ ಟ್ವಿಸ್ಟ್​: ಫೇಲ್​ ಆಗಿದ್ದ ನಿಧಿ ಈಗ ಸರ್ಜನ್​! ಬಯಲಾಗತ್ತಾ ಲವ್​ ಸೀಕ್ರೆಟ್​?

Karna Serial ರೋಚಕ ಟ್ವಿಸ್ಟ್​: ಫೇಲ್​ ಆಗಿದ್ದ ನಿಧಿ ಈಗ ಸರ್ಜನ್​! ಬಯಲಾಗತ್ತಾ ಲವ್​ ಸೀಕ್ರೆಟ್​?
ಸಂಜಯ್‌ನ ಸಂಚಿನಿಂದ ತಾನು ಫೇಲ್ ಆಗಿದ್ದೇನೆಂದು ಕುಸಿದು ಹೋಗಿದ್ದ ನಿಧಿಗೆ ಈಗ ನ್ಯಾಯ ಸಿಕ್ಕಿದೆ. ಎಲ್ಲರ ಮುಂದೆ ಸತ್ಯವನ್ನು ಬಯಲು ಮಾಡಿದ ಕರ್ಣ, ನಿಧಿಯೇ ಕಾಲೇಜಿನ ಟಾಪರ್ ಎಂದು ಸಾಬೀತುಪಡಿಸಿದ್ದಾನೆ. ಇದರಿಂದ ಸಂತಸಗೊಂಡ ನಿಧಿ, ಸರ್ಜನ್ ಆಗಿ ಹೊಸ ಜೀವನ ಆರಂಭಿಸಲಿದ್ದಾಳೆ.
ಕರ್ಣ ಸೀರಿಯಲ್​ನಲ್ಲಿ (Karna Serial) ನಿಧಿ ಫೇಲ್​ ಆಗಿರುವಂತೆ ಬಿಂಬಿಸಿದ್ದ ಸಂಜಯ್​, ತಾನೇ ಕಾಲೇಜಿನ ಟಾಪರ್​ ಎಂದು ಹೇಳಿದ್ದ. ಇದರಿಂದ ನಿಧಿ ಕುಸಿದು ಹೋಗಿದ್ದಳು. ಸಾಲದು ಎನ್ನುವುದಕ್ಕೆ ಸಂಜಯ್ ಆಕೆಯನ್ನು ಅವಮಾನ ಮಾಡುತ್ತಿದ್ದ.

ಇದೀಗ ಕರ್ಣ ಎಲ್ಲವನ್ನೂ ಬಹಿರಂಗ ಮಾಡಿದ್ದಾನೆ. ಅವನಿಗೆ ಅಸಲಿಯತ್ತು ಗೊತ್ತಾಗಿದೆ. ಎಲ್ಲರನ್ನೂ ಹಾಲ್​ಗೆ ಕರೆದಿದ್ದ ಕರ್ಣ. ಎಲ್ಲರ ಎದುರೇ ಸತ್ಯವನ್ನು ಹೇಳಿದ್ದಾನೆ.

ನಿಧಿ ಕಾಲೇಜಿನ ಟಾಪರ್​ ಆಗಿದ್ದಾರೆ. ಯಾರೋ ಮಾಡಿದ ಸಂಚಿಗೆ ಅವರು ಬಲಿಯಾಗಿದ್ದರು ಎಂದಾಗ ಸಂಜಯ್​ ಮತ್ತು ನಯನತಾರಾ ಮುಖ ಇಂಗು ತಿಂದ ಮಂಗನಂತಾಗಿದೆ.

ಬಳಿಕ, ಕರ್ಣ ನಿಧಿಯ ಬಳಿ ಬಂದು, ನೀವು ನಾಳೆಯಿಂದ ಸರ್ಜನ್​ ಆಗಿ ಜಾಯಿನ್​ ಆಗಬಹುದು ಎಂದಿದ್ದಾನೆ. ಇದರಿಂದ ನಿಧಿ ಉಬ್ಬಿ ಹೋಗಿದ್ದಾಳೆ.

ಕಾಲೇಜಿನ ಟಾಪರ್​ ಆಗಿರೋ ಕಾರಣ, ನನಗೆ ಮೆರವಣಿಗೆ ಮಾಡಬೇಕು ಎಂದಾಗ, ಕರ್ಣ ಆಕೆಯನ್ನು ಎತ್ತಿ ಮುದ್ದಾಡಿದ್ದಾನೆ.

ಈಗಲಾದರೂ ಇವರಿಬ್ಬರ ಲವ್​ ಸ್ಟೋರಿ ಬಯಲಾಗುತ್ತಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಇಷ್ಟೆಲ್ಲಾ ಆದ ಮೇಲೂ ನಿತ್ಯಾಗೆ ಸ್ವಲ್ಪವೂ ಡೌಟ್​ ಬರಲ್ಲ ಎಂದರೆ ಇದು ಸ್ವಲ್ಪ ವಿಚಿತ್ರ ಎನ್ನಿಸಿದರೂ ಸದ್ಯದ ಮಟ್ಟಿಗೆ ಒಪ್ಪಿಕೊಳ್ಳಲೇಬೇಕು.

Source link

Leave a Reply

Your email address will not be published. Required fields are marked *