ಬೆಂಗಳೂರು: ಕರ್ಣ ಸೀರಿಯಲ್ ಮೂಲಕ ಕನ್ನಡಿಗರ ಮನೆಮಗನಾಗಿ ಗುರುತಿಸಿಕೊಂಡಿರುವ ಕಿರಣ್ ರಾಜ್ ಅವರಿಗೆ ರಾಜ್ಯದಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ಕಿರಣ್ ರಾಜ್ ತಮ್ಮ ಸೆಲಿಬ್ರಿಟಿ ಕ್ರಶ್ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ. ಕಿರಣ್ ರಾಜ್ ಈ ಬಗ್ಗೆ ಹೇಳಿದ್ದೇನು?

ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ಇದೀಗ ರೋಚಕ ಘಟ್ಟ ತಲುಪಿದ್ದು, ಕರ್ಣ ತನ್ನ ಆಸ್ತಿಯನ್ನು ನಿತ್ಯಾ ಹೆಸರಿಗೆ ರಿಜಿಸ್ಟರ್ ಮಾಡಲು ಮುಂದಾಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ. ಮುಂದೇನಾಗಲಿದ ಎನ್ನುವ ಕುತೂಹಲ ಜೋರಾಗಿದೆ.

ಇನ್ನು ಇದೆಲ್ಲದರ ನಡುವೆ ಆನ್ ಸ್ಕ್ರೀನ್ ನಟನೆಯ ಜತೆಜತೆಗೆ ಆಫ್ ಸ್ಕ್ರೀನ್‌ನಲ್ಲಿ ಅವರ ಸಂದರ್ಶನಗಳು, ಆಡುವ ಮಾತುಗಳು, ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುವ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಕೇಳಲು ಅವರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ.

2025ರ ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಿರಣ್ ರಾಜ್ ಅವರಿಗೆ, ಕನ್ನಡ ಚಿತ್ರರಂಗದಲ್ಲಿ ನಿಮ್ಮ ಸೆಲಿಬ್ರಿಟಿ ಕ್ರಶ್ ಯಾರು ಎಂದು ಕೇಳುತ್ತಾರೆ. ಆಗ ಕಿರಣ್ ರಾಜ್ ಮತ್ತೊಮ್ಮೆ ಸ್ಮಾರ್ಟ್ ಉತ್ತರದ ಮೂಲಕ ಗಮನ ಸೆಳೆದಿದ್ದಾರೆ.

ಒಂದು ವೇಳೆ ನನಗೆ ಕ್ರಶ್ ಇದ್ದಿದ್ದರೇ ಬಹುಶಃ ಇಷ್ಟರೊಳಗೆ ಅವರಿಗೆ ಪ್ರಪೋಸ್ ಮಾಡಿ ಡೇಟಿಂಗ್ ಮಾಡುತ್ತಾ ಇರ್ತಿದ್ದೆ. ನನಗೆ ಕನ್ನಡ ಚಿತ್ರರಂಗವೇ ಕ್ರಶ್ ಎಂದು ಕಿರಣ್ ರಾಜ್ ಜಾಣ್ಮೆಯ ಉತ್ತರ ನೀಡಿದ್ದಾರೆ.

ಇನ್ನು ಕಿರಣ್ ರಾಜ್ ಅವರಿಗೆ ಲೇಡಿಸ್ ಫ್ಯಾನ್ಸ್ ಸಿಕ್ಕಾಪಟ್ಟೆಯಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಂದರ್ಶನವೊಂದರಲ್ಲಿ ಕಿರಣ್ ರಾಜ್ ಅವರಿಗೆ ನೀವು ರಿಲೇಷನ್‌ಶಿಪ್ ಹೇಗೆ ಹ್ಯಾಂಡಲ್ ಮಾಡ್ತೀರಾ? ಎನ್ನುವ ಪ್ರಶ್ನೆಗೂ ಸ್ಮಾರ್ಟ್ ಉತ್ತರ ಕೊಟ್ಟಿದ್ದರು.

ಅದರಲ್ಲಿ ಹ್ಯಾಂಡಲ್ ಮಾಡುವಂತದ್ದು ಏನೂ ಇಲ್ಲ, ರೆಸ್ಪಾನ್ಸ್ ಮಾಡದೇ ಇದ್ರೆ ಮುಗೀತು. ಕೆಲವು ಮೆಸೇಜ್ ಪಾಪ್ ಅಪ್ ಆಗೋವನ್ನು ನೋಡ್ತೀನಿ, ಸ್ಮೈಲ್ ಮಾಡ್ತೀನಿ. ಸುಮ್ಮನಾಗುತ್ತೇನೆ ಎಂದು ಕಿರಣ್ ರಾಜ್ ಹೇಳಿದ್ದರು.

Source link
ಕಿರಣ್ ರಾಜ್ ಅವರ ಸೆಲಿಬ್ರಿಟಿ ಕ್ರಶ್ ಯಾರು? ಕೊನೆಗೂ ಇಂಟ್ರೆಸ್ಟಿಂಗ್ ಡೀಟೈಲ್ಸ್ ಬಿಚ್ಚಿಟ್ಟ 'ಕರ್ಣ'