ರಮೇಶ್ನ ಕುತಂತ್ರದಿಂದ ‘ಕರ್ಣ’ ಧಾರಾವಾಹಿಯ ನಾಯಕ ಕರ್ಣ ಜೈಲು ಸೇರಿದ್ದಾನೆ. ಆದರೆ ಅದಕ್ಕೂ ಮುನ್ನ, ನಿತ್ಯಾ ತನ್ನ ಕೈಯಾರೆ ಮಾಡಿದ ಮೊದಲ ಕಾಫಿಯನ್ನು ಕರ್ಣ ಮನಸಾರೆ ಹೊಗಳಿದ್ದ. ಆ ರುಚಿಕರ ಕಾಫಿಯ ಹಿಂದಿದ್ದ, ಕೆಲಸದವಳು ಹೇಳಿಕೊಟ್ಟ ಸರಳ ತಂತ್ರವನ್ನು ಇಲ್ಲಿ ಬಹಿರಂಗಪಡಿಸಲಾಗಿದೆ.
ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ ರಮೇಶ್ನ ಕುತಂತ್ರಕ್ಕೆ ಕರ್ಣ ಜೈಲುಪಾಲಾಗಿದ್ದಾನೆ. ಡೇಟ್ ಬಾರ್ ಆಗಿರೋ ಮೆಡಿಸಿನ್ ಕೊಟ್ಟ ಕಾರಣ, ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕರ್ಣ ಬಲಿಪಶುವಾಗಿದ್ದಾನೆ.

ಆದರೆ, ಇದಕ್ಕೂ ಮುನ್ನ ನಿತ್ಯಾ ತನ್ನ ಕೈಯಾರೇ ಕರ್ಣನಿಂದ ಕಾಫಿ ಮಾಡಿಕೊಟ್ಟಿದ್ದಳು. ಇದು ಅವಳ ಜೀವನದಲ್ಲಿ ಮಾಡಿರೋ ಮೊದಲ ಕಾಫಿಯಾಗಿತ್ತು. ಇದನ್ನು ಕುಡಿದು ಕರ್ಣ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದ.

ಕರ್ಣ ಏನಂದುಕೊಳ್ಳುತ್ತಾನೋ ಎಂದುಕೊಂಡಿದ್ದ ನಿತ್ಯಾಳಿಗೆ ಅವಳು ಮೊದಲ ಬಾರಿಗೆ ಮಾಡಿದ ಕಾಫಿಯನ್ನು ಕರ್ಣ ಹೊಗಳಿದ್ದನ್ನು ನೋಡಿ ಎಲ್ಲೋ ಕಳೆದುಹೋದಳು ನಿತ್ಯಾ.

ಹಾಗಿದ್ದರೆ ನಿತ್ಯಾ ಕಾಫಿ ಮಾಡುವಾಗ ಏನು ಮಾಡಿದ್ಲು? ಮೊದಲ ಸಲವೇ ಇಷ್ಟೊಂದು ಟೇಸ್ಟಿಯಾಗಿ ಮಾಡಿದ್ದು ಹೇಗೆ ಎನ್ನುವ ಬಗ್ಗೆ ಜೀ ವಾಹಿನಿಯೇ ಕಾಫಿ ಟ್ರಿಕ್ಸ್ ಹೇಳಿಕೊಟ್ಟಿರೋ ಪ್ರೊಮೋ ಶೇರ್ ಮಾಡಿಕೊಂಡಿದೆ.

ನಿತ್ಯಾಳಿಗೆ ಕಾಫಿ ಮಾಡಲು ಬರದೇ ಇರುವ ಕಾರಣದಿಂದ ಮನೆಯ ಕೆಲಸದಾಕೆ ಹೇಳಿಕೊಟ್ಟಿರುವ ಸಿಂಪಲ್ ಟ್ರಿಕ್ಸ್ ಇದಾಗಿದೆ.

ಮೊದಲು ಹಾಲು ಫುಲ್ ಬಿಸಿ ಇರುವಾಗಲೇ ಡಿಕಾಕ್ಷನ್ ಹಾಕಬೇಕು. ಆಮೇಲೆ ಕಾಫಿಯನ್ನು ಎತ್ತಿ ಎತ್ತಿ ಲೋಟದಿಂದ ಲೋಟಕ್ಕೆ ಬದಲಾಯಿಸಬೇಕು. ಹೀಗೆ ಎತ್ತಿ ಹಾಕಿದಾಗ ನೊರೆ ಬರತ್ತೆ. ಆಗಲೇ ಕಾಫಿ ತುಂಬಾ ಟೇಸ್ಟಿಯಾಗಿರೋದು ಎನ್ನುವ ಟಿಪ್ಸ್ ಹೇಳಿದ್ದಾಳೆ.

Source link
'ಘಂ' ಎನ್ನೋ ಟೇಸ್ಟಿ ಟೇಸ್ಟಿ ಕಾಫಿ ಮಾಡೋ ಸಿಂಪಲ್ ಟ್ರಿಕ್ಸ್ ಹೇಳಿದ Karna Serial- ನಿತ್ಯಾ ಕೈಯಿಂದ ರೆಡಿ!