Karna Serial Twist: ಡಾ.ನಿಧಿ ಈಗ ಲಾಯರ್​ ನಿಧಿ! Law ಪದವಿ ಬಗ್ಗೆ ಬಿಸಿಬಿಸಿ ಚರ್ಚೆ- ಏನ್ ಹೇಳತ್ತೆ ಕಾನೂನು?

Karna Serial Twist: ಡಾ.ನಿಧಿ ಈಗ ಲಾಯರ್​ ನಿಧಿ!  Law ಪದವಿ ಬಗ್ಗೆ ಬಿಸಿಬಿಸಿ ಚರ್ಚೆ- ಏನ್ ಹೇಳತ್ತೆ ಕಾನೂನು?

Karna Serial Twist: ಡಾ.ನಿಧಿ ಈಗ ಲಾಯರ್​ ನಿಧಿ!  Law ಪದವಿ ಬಗ್ಗೆ ಬಿಸಿಬಿಸಿ ಚರ್ಚೆ- ಏನ್ ಹೇಳತ್ತೆ ಕಾನೂನು?

ಕರ್ಣ ಸೀರಿಯಲ್​ನಲ್ಲಿ, ರಮೇಶ್‌ನ ಸಂಚಿನಿಂದ ಕರ್ಣ ಜೈಲಿನಲ್ಲಿದ್ದಾನೆ. ಸರಿಯಾದ ಸಮಯಕ್ಕೆ ಲಾಯರ್ ಕೈಕೊಟ್ಟಾಗ,  ಲಾಯರ್ ಆಗಿ ಕೋರ್ಟ್‌ಗೆ ಪ್ರವೇಶಿಸಿ ಎಲ್ಲರಿಗೂ ಆಘಾತ ನೀಡಿದ್ದಾಳೆ. ಕಾನೂನು ಪದವಿ ಇಲ್ಲದೆ  ವಾದಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಈ ಲೇಖನ ಚರ್ಚಿಸುತ್ತದೆ.

ಕರ್ಣ ಸೀರಿಯಲ್​ನಲ್ಲಿ (Karna Serial)ನಲ್ಲಿ ಈಗ ಭಾರಿ ಅಂದ್ರೆ ಭಾರಿ ಟ್ವಿಸ್ಟ್​ ಸಿಕ್ಕಿದೆ. ಕರ್ಣನನ್ನು ಪರ್ಮನೆಂಟ್​ ಆಗಿ ಜೈಲಿನಲ್ಲಿಯೇ ಉಳಿಸುವ ಸಲುವಾಗಿ ಭ್ರಷ್ಟ ಆರೋಗ್ಯ ಸಚಿವನಿಗೂ ಲಂಚ ಕೊಟ್ಟು, ಕರ್ಣ ಪರವಾಗಿ ವಾದಿಸ್ತಿರೋ ಲೇಡಿ ಲಾಯರ್​ಗೂ ಲಂಚ ಕೊಟ್ಟ ರಮೇಶ್​, ಬಹುತೇಕ ಸಕ್ಸಸ್​ ಆಗಿ ಹೋಗಿದ್ದ.

ಇತ್ತ ಕರ್ಣನನ್ನು ಕಾಪಾಡಲು ಸಾಕ್ಷಿ ಸಹಿತ ಬಂದಿದ್ದ ವಿವಿಧ ಸೀರಿಯಲ್​ ನಟಿಮಣಿಗಳ ಕಾರನ್ನು ಅಪಘಾತ ಮಾಡಿಸಿದ್ದಾನೆ ರಮೇಶ್​. ನಿತ್ಯಾ ಅಪಘಾತದಲ್ಲಿ ಗಾಯಗೊಂಡಿದ್ದಾಳೆ. ಉಳಿದವರು ಕೂಡ ಅಪಘಾತಕ್ಕೆ ಸಿಲುಕಿದ್ದಾರೆ. ರಮೇಶ್​ನಿಂದ ಲಂಚದ ರುಚಿ ಕಂಡ ಲಾಯರ್​ ಸರಿ ಟೈಮ್​ಗೆ ಕೈಕೊಟ್ಟಿದ್ದಾಳೆ. ಕೋರ್ಟ್​ಗೆ ಹಾಜರು ಆಗಲಿಲ್ಲ. ಮತ್ತೆ ಯಾವುದೇ ಲಾಯರ್​ ಕರ್ಣನ ಪರವಾಗಿ ವಾದ ಮಂಡಿಸುವುದಕ್ಕೂ ಅಡ್ಡಿ ಪಡಿಸಿದ್ದಾನೆ ರಮೇಶ್​. ಇನ್ನೇನು ಕೇಸ್​ ಆರಂಭವಾಗ್ತಿದ್ದಂತೆಯೇ ಲಾಯರ್​ ಬರದ ಕಾರಣ, ಕೇಸ್​ ಅನ್ನು ಮುಂದಕ್ಕೆ ಹಾಕುವುದಾಗಿ ಜಡ್ಜ್​ ಹೇಳುತ್ತಿದ್ದಂತೆಯೇ ನಾನು ವಾದ ಮಾಡ್ತೇನೆ ಎಂದು ನಿಧಿ ಲಾಯರ್​ ಆಗಿ ಬಂದಿದ್ದಾಳೆ.

ನಿಧಿಯ ಎಂಟ್ರಿ ಏನಾದರೂ ಸಿನಿಮಾದಲ್ಲಿ ಆಗಿದ್ರೆ ಅಭಿಮಾನಿಗಳು ಶಿಳ್ಳೆ ಹೊಡೆಯುತ್ತಿದ್ದರು. ಆದರೆ ಸೀರಿಯಲ್​ನ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಬಿಸಿಬಿಸಿ ಚರ್ಚೆ ಶುರುವಾಗಿದೆ. ನಿಧಿ ಲಾ ಡಿಗ್ರಿ ಪಡೆದದ್ದು ಯಾವಾಗ, ಅವಳು ಮಾಡಿದ್ದು ಎಂಬಿಬಿಎಸ್​ ಅಲ್ವಾ? ಅಯ್ಯಬ್ಬಾ ಈ ಸೀರಿಯಲ್​ಗಳಲ್ಲಿ ಏನ್​ ಬೇಕಾದ್ರೂ ಆಗತ್ತೆ, ಸ್ವಲ್ಪವೂ ಸೆನ್ಸ್​ ಅನ್ನೋದೇ ಇರಲ್ಲ ಎಂದೆಲ್ಲಾ ಹೇಳಲಾಗುತ್ತಿದೆ.

ಹಾಗಿದ್ರೆ ಕಾನೂನು ಏನ್ ಹೇಳತ್ತೆ ನೋಡೋಣ. ಈ ಸೀರಿಯಲ್​ನಲ್ಲಿ ನಿಧಿ ಕೂಡ ಎಂಬಿಬಿಎಸ್​ ಮಾಡುವ ಮೊದಲು ಲಾ ಓದಿದ್ದಳು ಅಂತೇನೋ ಒಂದಿಷ್ಟು ಕಥೆ ಕಟ್ಟಿದರೂ ಅಚ್ಚರಿಯಿಲ್ಲ. ಈ ಹಿಂದೆ ಕೆಲವು ಸೀರಿಯಲ್​​ಗಳಲ್ಲಿಯೂ ಇದೇ ಆಗಿದ್ದು. ಆದರೆ ಕಾನೂನು ಪದವಿ ಪಡೆಯದೇ ಕೋರ್ಟ್​ಗೆ ಹೋಗಬಹುದಾ ಎನ್ನುವ ಪ್ರಶ್ನೆ ಕಾಡುವುದು ಸಹಜ. ಅದೂ ಕಪ್ಪು ಕೋಟ್ ಧರಿಸಿ ಈ ನಿಧಿಯಂತೆ ಹೋಗಬಹುದಾ?

ಕಾನೂನಿನ ಪ್ರಕಾರ, ನಮ್ಮ ಕೇಸ್​ ನಲ್ಲಿ ನಾವೇ ವಾದ ಮಾಡಬಹುದು. (ನೆನಪಿರಲಿ… ಸ್ವಂತ ಕೇಸ್ ಮಾತ್ರ​-ಬೇರೆಯವರ ಪರ ಅಲ್ಲ​) ಅದಕ್ಕೆ ಕೋರ್ಟ್​ ಭಾಷೆಯಲ್ಲಿ (Party in Person) ಎನ್ನುತ್ತಾರೆ. ಅದಕ್ಕೆ ಯಾವುದೇ ಪದವಿ, ಲಾ ಡಿಗ್ರಿ ಏನೂ ಬೇಕೆಂದೇನೂ ಇಲ್ಲ. ಯಾರು ಬೇಕಾದರೂ ವಾದಿಸಬಹುದು. ವಕೀಲರ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ. ಆ ಸಂದರ್ಭದಲ್ಲಿ ವಕೀಲರ ಕೋಟ್​ ಅಲ್ಲ, ಮಾಮೂಲಿ ಬಟ್ಟೆ ಧರಿಸಿಯೇ ಕೋರ್ಟ್​ನಲ್ಲಿ ವಾದ ಮಾಡುವ ಅವಕಾಶವಿದೆ. ವಾದ ಮಾಡುವಾಗ, ನಮ್ಮ ಕೇಸ್​ಗೆ ಸಂಬಂಧಿಸಿದ ಒಂದಿಷ್ಟು ಕಾನೂನು ವಿಷಯಗಳನ್ನು ತಿಳಿದುಕೊಂಡರೆ, ವಾದ ಮಂಡಿಸಲು ಅನುಕೂಲ ಆಗುತ್ತದೆ ಅಷ್ಟೇ.

ಆದರೆ ಬೇರೆಯವರ ಪರವಾಗಿ ವಕೀಲಿ ವೃತ್ತಿಯಲ್ಲಿ ಎನ್​ರೋಲ್​ ಆದವರು ಬಿಟ್ಟರೆ ಯಾರೂ ವಾದಿಸುವಂತಿಲ್ಲ. ಇದಕ್ಕೆ ಅವಕಾಶ ಇಲ್ಲ. ಹಾಗೊಂದು ವೇಳೆ ಆಗಿದ್ದರೆ ಯಾರು ಬೇಕಾದರೂ ವಾದ ಮಾಡಬಹುದಿಲ್ಲ. ಲಾ ಡಿಗ್ರಿ ಎನ್ನುವುದು ಬೇಕೆಂದೇ ಇರಲಿಲ್ಲವಲ್ಲ! ಆದರೆ ಈಗ ನಿಧಿ ಬಂದಿದ್ದಾಳೆ. ಸೀರಿಯಲ್​ ಸಕತ್​ ಟ್ವಿಸ್ಟ್​ ಪಡೆದುಕೊಂಡಿದೆ ಅಷ್ಟೇ.

Source link

Leave a Reply

Your email address will not be published. Required fields are marked *