Karna Serial ಯಾರೂ ಊಹಿಸದ ತಿರುವು! ಮ್ಯಾರೇಜ್​ ಸರ್ಟಿಫಿಕೇಟ್​ಗೆ ಕರ್ಣ- ನಿಧಿ ಸಹಿ: ರಮೇಶ್​ ಕಕ್ಕಾಬಿಕ್ಕಿ

Karna Serial ಯಾರೂ ಊಹಿಸದ ತಿರುವು! ಮ್ಯಾರೇಜ್​ ಸರ್ಟಿಫಿಕೇಟ್​ಗೆ ಕರ್ಣ- ನಿಧಿ ಸಹಿ: ರಮೇಶ್​ ಕಕ್ಕಾಬಿಕ್ಕಿ

Karna Serial ಯಾರೂ ಊಹಿಸದ ತಿರುವು! ಮ್ಯಾರೇಜ್​ ಸರ್ಟಿಫಿಕೇಟ್​ಗೆ ಕರ್ಣ- ನಿಧಿ ಸಹಿ: ರಮೇಶ್​ ಕಕ್ಕಾಬಿಕ್ಕಿ

ಆಸ್ತಿಗಾಗಿ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಲು ಹೊರಟ ರಮೇಶ್‌ನ ಕುತಂತ್ರಕ್ಕೆ ಕರ್ಣ ತಿರುಗೇಟು ನೀಡಿದ್ದಾನೆ. ನಿತ್ಯಾಳಿಂದ ಸಹಿ ಹಾಕಿಸಿ ರಮೇಶ್‌ಗೆ ಶಾಕ್ ಕೊಟ್ಟಿದ್ದು, ಈ ಅನಿರೀಕ್ಷಿತ ನಡೆಯಿಂದ ರಮೇಶ್ ಕಕ್ಕಾಬಿಕ್ಕಿಯಾಗಿದ್ದಾನೆ. ಆದರೆ ಆಗಿದ್ದೇನು?

ಕರ್ಣ ಸೀರಿಯಲ್​ (Karna Serial) ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ. ಯಾರೂ ಊಹಿಸದ ತಿರುವು ಇದಕ್ಕೆ ಸಿಕ್ಕಿದೆ. ಕರ್ಣ ತನ್ನ ಇನ್ನೊಂದು ಮುಖವನ್ನು ರಮೇಶ್​ಗೆ ತೋರಿಸುತ್ತಾ ಆತನನ್ನು ಆಟವಾಡಿಸುತ್ತಿದ್ದರೆ, ಕುತಂತ್ರಿ ರಮೇಶ್​ ಕೂಡ ಇನ್ನೊಂದು ಪ್ಲ್ಯಾನ್​ ಮಾಡುತ್ತಲೇ ಇದ್ದಾನೆ.

ಇದಾಗಲೇ ಪೂಜೆಯ ನೆಪದಲ್ಲಿ ರಮೇಶ್​ನನ್ನು ಉಪವಾಸ ಇಟ್ಟು, ತಲೆ ಸುತ್ತುವಂತೆ ಮಾಡಿ, ಅಮ್ಮನ ಕಾಲಿಗೆ ಬೀಳುವಂತೆ ಮಾಡಿದ್ದಾನೆ ಕರ್ಣ. ಇದನ್ನೆಲ್ಲಾ ನೋಡಿ ರಮೇಶ್​ಗೆ ಮೈ ಉರಿದು ಹೋಗಿದೆ.

ಹೇಗಾದರೂ ಮಾಡಿ ಕರ್ಣ, ನಿಧಿ ಮತ್ತು ನಿತ್ಯಾರ ಲೈಫ್​ ಹಾಳು ಮಾಡಲೇಬೇಕು ಎನ್ನುವ ಪಣ ತೊಟ್ಟಿದ್ದಾನೆ ಆತ. ಹೇಗಿದ್ದರೂ ಅವನಿಗೆ ಕರ್ಣ ಮತ್ತು ನಿಧಿ ಮದುವೆಯಾಗಿಲ್ಲ ಎನ್ನುವ ಸತ್ಯ ಗೊತ್ತಿರುವ ಕಾರಣದಿಂದ ಅದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾನೆ.

ಇದೀಗ, ಅವರಿಬ್ಬರ ಮ್ಯಾರೇಜ್​ ಸರ್ಟಿಫಿಕೇಟ್​ ಮಾಡಿಸಿಬಿಟ್ಟರೆ ಅವರು ಏನೂ ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ, ಆಸ್ತಿಯನ್ನು ಇಬ್ಬರ ಹೆಸರಿಗೆ ಮಾಡಬೇಕಿದೆ. ಅದಕ್ಕಾಗಿ ಮ್ಯಾರೇಜ್​ ಸರ್ಟಿಫಿಕೇಟ್​ ಬೇಕು ಎನ್ನುವ ಕುತಂತ್ರ ಬುದ್ಧಿಯನ್ನು ಉಪಯೋಗಿಸಿದ್ದಾನೆ ರಮೇಶ್​.

ಕರ್ಣನೂ ಅದಕ್ಕೆ ಒಪ್ಪಿದ್ದಾನೆ. ಮ್ಯಾರೇಜ್​ ಸರ್ಟಿಫಿಕೇಟ್​ ಸಿದ್ಧವಾಗಿದೆ. ಇಬ್ಬರ ಸಹಿಯೂ ಬಿದ್ದಾಗಿದೆ. ಅಬ್ಬಬ್ಬಾ ಹಾಗಿದ್ದರೆ ಅವರಿಬ್ಬರ ಮದುವೆ ಆದಂತೆನಾ ಎಂದು ಪ್ರಶ್ನಿಸಿದರೆ, ಇಲ್ಲ… ಇಲ್ಲ… ತಡೆದುಕೊಳ್ಳಿ. ಅಲ್ಲೇ ಇರೋದು ಟ್ವಿಸ್ಟ್​.

ಕರ್ಣ ಮೊದಲೇ ನಿತ್ಯಾ ಬಳಿ ಈ ವಿಷಯವನ್ನು ಹೇಳಿ ನಕಲಿ ಸಹಿ ಹಾಕುವಂತೆ ಹೇಳಿದ್ದ. ಇದರಿಂದ ನಿತ್ಯಾ ಕೂಡ ಆ ಪ್ರಮಾಣ ಪತ್ರದ ಮೇಲೆ ನಕಲಿ ಸಹಿ ಹಾಕಿದ್ದಾಳೆ. ಇಷ್ಟು ಈಸಿಯಾಗಿ ಸಹಿ ಹಾಕಿದ್ದನ್ನು ನೋಡಿ ರಮೇಶ್​ ಕೂಡ ಕಕ್ಕಾಬಿಕ್ಕಿಯಾಗಿದ್ದಾನೆ. ಎಲ್ಲೋ ಮಿಸ್​ ಹೊಡೀತಾ ಇದೆ ಎನ್ನಿಸುತ್ತಾ ಇದ್ದರೂ ಏನೂ ಅಂತ ತಿಳಿಯದೇ ಗೋಜಿಗೆ ಸಿಲುಕಿದ್ದಾನೆ!

Source link

Leave a Reply

Your email address will not be published. Required fields are marked *