Karna Serial ಭರ್ಜರಿ ಟ್ವಿಸ್ಟ್​! ಬಾತ್​ರೂಮ್​ನಲ್ಲಿ ಕರ್ಣ- ನಿಧಿ ಸರಸ: ಎಣ್ಣೆ ಸ್ನಾನ ಮಾಡಿಸಲು ಬಂದ ನಿತ್ಯಾ

Karna Serial ಭರ್ಜರಿ ಟ್ವಿಸ್ಟ್​! ಬಾತ್​ರೂಮ್​ನಲ್ಲಿ ಕರ್ಣ- ನಿಧಿ ಸರಸ: ಎಣ್ಣೆ ಸ್ನಾನ ಮಾಡಿಸಲು ಬಂದ ನಿತ್ಯಾ

Karna Serial ಭರ್ಜರಿ ಟ್ವಿಸ್ಟ್​! ಬಾತ್​ರೂಮ್​ನಲ್ಲಿ ಕರ್ಣ- ನಿಧಿ ಸರಸ: ಎಣ್ಣೆ ಸ್ನಾನ ಮಾಡಿಸಲು ಬಂದ ನಿತ್ಯಾ
ರಮೇಶ್ ಕುತಂತ್ರದಿಂದಾಗಿ ನಿತ್ಯಾಳು ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸುವ ನಾಟಕವಾಡುತ್ತಾಳೆ. ನಂತರ, ನಿಜವಾಗಿಯೂ ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸಲು ಹೋದ ನಿಧಿಯು, ಅವನೊಂದಿಗೆ ರೊಮ್ಯಾನ್ಸ್ ಮಾಡುವಾಗ ನಿತ್ಯಾಳ ಕೈಗೆ ಸಿಕ್ಕಿಬೀಳುತ್ತಾಳೆ.
ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಕರ್ಣ ಮತ್ತು ನಿಧಿಯನ್ನು ದೂರ ದೂರ ಮಾಡಲು ರಮೇಶ್​ ಸಾಕಷ್ಟು ಪ್ರಯತ್ನ ಪಟ್ಟು ಒಂದು ಹಂತಕ್ಕೆ ಯಶಸ್ವಿಯನ್ನೂ ಆಗಿದ್ದಾರೆ. ಇದರ ಹೊರತಾಗಿಯೂ ಅವನಿಗೆ ಇನ್ನಷ್ಟು ಹಿಂಸೆ ನೀಡಬೇಕು ಎನ್ನುವ ಆಸೆ.

ಇದೇ ಕಾರಣಕ್ಕೆ ನಿಧಿಯ ಎದುರು ನಿತ್ಯಾಳಿಗೆ, ಯುಗಾದಿ ಹಬ್ಬದ ಸಂಪ್ರದಾಯ ಮುರಿಯಬಾರದು. ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸು ಎಂದಿದ್ದಾನೆ ರಮೇಶ. ನಿತ್ಯಾ ಬೇಡ ಎಂದರೂ ಕೇಳದೇ ನಿಧಿಗೆ ಹೊಟ್ಟೆ ಉರಿ ಆಗಲಿ ಎಂದು ಹೀಗೆ ಮಾಡಿಸಿದ್ದಾನೆ.

ಅತ್ತ ಬಾತ್​ರೂಮ್​ಗೆ ಹೋದ ನಿತ್ಯಾ, ಕರ್ಣನಿಗೆ ಸನ್ನೆ ಮಾಡುವ ಮೂಲಕ ಸುಮ್ಮನೇ ಇರುವಂತೆ ಹೇಳಿ, ಎಣ್ಣೆ ಹಚ್ಚಿ ಸ್ನಾನ ಮಾಡಿಸೋ ರೀತಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇದನ್ನು ಅರೆ ಕ್ಷಣ ನಿಧಿ ಕೂಡ ನಿಜ ಎಂದು ನಂಬಿದ್ದಾಳೆ.

ಕೊನೆಗೆ ಕರ್ಣನ ಸತ್ಯ ನಿಧಿಗೆ ಗೊತ್ತಾಗಿದೆ. ನಿತ್ಯಾ ಹೊರಕ್ಕೆ ಬರುತ್ತಲೇ ತಾನು ಹೋಗಿ ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸಲು ಮುಂದಾಗಿದ್ದಾಳೆ.

ಅಲ್ಲಿಗೆ ನಿತ್ಯಾ ಬಂದು ಬಿಟ್ಟಿದ್ದಾಳೆ. ಕರ್ಣ ಮತ್ತು ನಿಧಿ ರೊಮಾನ್ಸ್​ ಮಾಡಲು ಹತ್ತಿರ ಬರುತ್ತಿರುವುದನ್ನು ಅವಳು ನೋಡಿದ್ದಾಳೆ.

ಹಾಗಿದ್ರೆ ನಿತ್ಯಾಳಿಗೆ ಈಗಾದ್ರೂ ಸತ್ಯ ಗೊತ್ತಾಗತ್ತಾ ಎನ್ನುವ ಪ್ರಶ್ನೆ ಇದೆ. ಬೇಗ ಗೊತ್ತಾಗಲಿ ಎಂದು ಫ್ಯಾನ್ಸ್​ ಹೇಳ್ತಿದ್ರೆ, ಇಬ್ಬರ ಕೈಯಿಂದ ಎಣ್ಣೆ ಹಚ್ಚಿಕೊಳ್ಳುವ ಸೌಭಾಗ್ಯ ಅಲ್ವಾ ಎಂದು ನಟನ ಕಾಲೆಳೆಯುತ್ತಿದ್ದಾರೆ ಅಭಿಮಾನಿಗಳು.

Source link

Leave a Reply

Your email address will not be published. Required fields are marked *