Headlines

Karna Serial: ವಿಲನ್​ ಕುತಂತ್ರಕ್ಕೆ ನಿಧಿ ಇದ್ದ ಕಾರು ಧಗಧಗ- ಕುಸಿದು ಬಿದ್ದ ಕರ್ಣ! ಮುಂದಾಗಿದ್ದು ಊಹಿಸದ ತಿರುವು

Karna Serial:  ವಿಲನ್​ ಕುತಂತ್ರಕ್ಕೆ ನಿಧಿ ಇದ್ದ ಕಾರು ಧಗಧಗ- ಕುಸಿದು ಬಿದ್ದ ಕರ್ಣ! ಮುಂದಾಗಿದ್ದು ಊಹಿಸದ ತಿರುವು

Karna Serial:  ವಿಲನ್​ ಕುತಂತ್ರಕ್ಕೆ ನಿಧಿ ಇದ್ದ ಕಾರು ಧಗಧಗ- ಕುಸಿದು ಬಿದ್ದ ಕರ್ಣ! ಮುಂದಾಗಿದ್ದು ಊಹಿಸದ ತಿರುವು

ಕರ್ಣ ಧಾರಾವಾಹಿಯಲ್ಲಿ, ನಿಧಿಯಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ನಿಧಿ ಸತ್ತೇ ಹೋದಳೆಂದು ಕರ್ಣ ಆಘಾತಕ್ಕೆ ಒಳಗಾಗುತ್ತಾನೆ. ಆದರೆ, ಅಲ್ಲಾಗಿದ್ದೇ ಬೇರೆ. ನಿಧಿ ಏನಾದಳು? ರೋಚಕ ತಿರುವು ಇಲ್ಲಿದೆ!

ಕರ್ಣ ಸೀರಿಯಲ್​ (Karna Serial) ಇದೀಗ ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ಅತ್ತ ನಿತ್ಯಾ, ನಿಧಿ, ತೇಜಸ್​ ಅಥವಾ ಕರ್ಣ ಯಾರನ್ನಾದರೂ ಮುಗಿಸಲು ವಿಲನ್​ಗಳು ಸ್ಕೆಚ್​ ಹಾಕುತ್ತಲೇ ಇದ್ದಾರೆ.

ಅದೇ ಇನ್ನೊಂದೆಡೆ, ಈ ನಾಲ್ವರೂ ಬೇರೆ ಊರಿಗೆ ಹೋದಾಗ ಒಂದರ ಮೇಲೊಂದರಂತೆ ಅವಘಡಗಳು ಸಂಭವಿಸುತ್ತಿವೆ. ನಯನತಾರಾ ಮೊದಲು ನಿತ್ಯಾಳನ್ನು ಕೊಲ್ಲಲು ಪ್ಲ್ಯಾನ್​ ಮಾಡಿದ್ದಳು. ಆದರೆ ಕರ್ಣ ಬಂದು ರಕ್ಷಿಸಿದ್ದ.

ಇದೀಗ ನಿತ್ಯಾಳಿಗೆ ಐಸ್​ಕ್ರೀಮ್​ ತಿನ್ನುವ ಆಸೆಯಾಗಿತ್ತು. ಅದನ್ನು ತರಲು ಕರ್ಣ ಮತ್ತು ನಿಧಿ ಹೋಗಿದ್ದರು. ಸುಪಾರಿ ಪಡೆದುಕೊಂಡಿರುವ ವಿಲನ್​ ಇದನ್ನೇ ಬಂಡವಾಳ ಮಾಡಿಕೊಂಡ.

ನಿಧಿ ಕಾರಿನಲ್ಲಿ ಇದ್ದಳು. ಕರ್ಣ ಇಳಿದು ಐಸ್​ಕ್ರೀಮ್​ ತರಲು ಹೋದಾಗ, ಲಾರಿಯಿಂದ ನಿಧಿ ಇರುವ ಕಾರಿಗೆ ಗುದ್ದಿಸಿದ್ದಾನೆ. ಕಾರು ಧಗಧಗ ಹೊತ್ತಿ ಉರಿದಿದೆ.

ಇದನ್ನು ನೋಡಿದ ಕರ್ಣನ ನೆಲವೇ ಅಲುಗಾಡಿ ಹೋಗಿದೆ. ಓಡೋಡಿ ಬಂದು ಕಾರಿನಲ್ಲಿ ನೋಡಿದಾಗ ಅಲ್ಲಿಂದ ಸೌಂಡ್​ ಬರಲಿಲ್ಲ. ತನ್ನ ಪ್ರಾಣವನ್ನೂ ಲೆಕ್ಕಿಸದೇ ಆತ ಗ್ಲಾಸ್​​ ಒಡೆಯಲು ಮುಂದಾದಾಗ ಗಾಜಿನ ಚೂರುಗಳೆಲ್ಲಾ ಕೈಹೊಕ್ಕಿದೆ.

ಆದರೆ, ಅದೇ ಇನ್ನೊಂದೆಡೆ, ಅದಾಗಲೇ ಕಾರಿನಿಂದ ಇಳಿದುಹೋಗಿದ್ದ ನಿಧಿ ಬಂದಾಗ, ಕರ್ಣನಿಗೆ ಮಾತೇ ಹೊರಳದೆ ಆಕೆಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ನಿಮ್ಮನ್ನು ಮತ್ತೊಮ್ಮೆ ಕಳೆದುಕೊಳ್ಳಲು ನಾನು ತಯಾರಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ, ಕ್ಷಣ ಕ್ಷಣಕ್ಕೂ ಈ ಜೋಡಿಗೆ ಆತಂಕ ಎದುರಾಗಿದೆ. ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ಭಯವಿದೆ. ಅದೇ ಇನ್ನೊಂದೆಡೆ, ಕರ್ಣ ನಿತ್ಯಾಳ ಮೇಲೆ ತೋರಿಸುತ್ತಿರುವ ಪ್ರೀತಿ ತೇಜಸ್​ಗೆ ಹೊಟ್ಟೆ ಉರಿ ತರಿಸುತ್ತಿರುವುದು ಕೂಡ ಮುಂದೇನಾಗತ್ತೆ ಎಂದು ನೋಡಬೇಕಿದೆ.

Source link

Leave a Reply

Your email address will not be published. Required fields are marked *