Headlines

Karna Serial: ಯಾರೂ ಊಹಿಸದ ತೀರ್ಮಾನ ತೆಗೆದುಕೊಂಡುಬಿಟ್ಟಳು ನಿತ್ಯಾ! ಮುಂದಾಗೋದು ಘೋರ ದುರಂತ?

Karna Serial:  ಯಾರೂ ಊಹಿಸದ ತೀರ್ಮಾನ ತೆಗೆದುಕೊಂಡುಬಿಟ್ಟಳು ನಿತ್ಯಾ! ಮುಂದಾಗೋದು ಘೋರ ದುರಂತ?

Karna Serial:  ಯಾರೂ ಊಹಿಸದ ತೀರ್ಮಾನ ತೆಗೆದುಕೊಂಡುಬಿಟ್ಟಳು ನಿತ್ಯಾ! ಮುಂದಾಗೋದು ಘೋರ ದುರಂತ?

ಕರ್ಣ ಧಾರಾವಾಹಿಯಲ್ಲಿ, ರಮೇಶ್ ಕುತಂತ್ರದಿಂದ ತೇಜಸ್ ಮತ್ತು ನಿತ್ಯಾ ಮದುವೆ ಮುರಿದುಬಿದ್ದಿದೆ. ತನ್ನಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ ಎಂದು ಭಾವಿಸಿದ ನಿಧಿ, ತಾನು ಗರ್ಭಿಣಿ ಎಂಬ ಸತ್ಯವನ್ನು ಎಲ್ಲರ ಮುಂದೆ ಹೇಳಿದ್ದಾಳೆ. ಆದರೆ, ಆಗಿದ್ದೇನು?

ಕರ್ಣ ಸೀರಿಯಲ್​ನಲ್ಲಿ (Karna Serial) ಸದ್ಯ ತೇಜಸ್​ ಮತ್ತು ನಿತ್ಯಾ ಮದುವೆ ಮುರಿದುಬಿದ್ದಿದೆ. ರಮೇಶ್​ ಕುತಂತ್ರದಿಂದ ನಿತ್ಯಾ ಹೊಟ್ಟೆಯಲ್ಲಿ ಇರುವ ಮಗು ಕರ್ಣನದ್ದೇ ಎಂದು ತೇಜಸ್​ ತಿಳಿದುಕೊಂಡು ಮದುವೆಯಾಗದೇ ಶಾಪ ಹಾಕಿ ಹೋಗಿದ್ದಾನೆ.

ಅದೇ ಇನ್ನೊಂದೆಡೆ, ನಿತ್ಯಾ ಮತ್ತು ತೇಜಸ್​ ಮದುವೆಯಾಗುತ್ತದೆ ಎಂದು ನಂಬಿದ್ದ ಕರ್ಣ, ತನ್ನ ಮತ್ತು ನಿಧಿಯ ಪ್ರೀತಿಯ ವಿಷಯವನ್ನು ಮನೆಯಲ್ಲಿ ಹೇಳುವುದಕ್ಕಾಗಿ ಭರ್ಜರಿ ಪಾರ್ಟಿ ಅರೇಂಜ್​ ಮಾಡಿದ್ದ. ಎಲ್ಲರೂ ಅದರ ಖುಷಿಯಲ್ಲಿ ಇದ್ದಾರೆ. ಕರ್ಣ ಮತ್ತು ನಿತ್ಯಾ ಬರುತ್ತಿದ್ದಂತೆಯೇ ಎಲ್ಲರೂ ಏನು ಖುಷಿಯ ವಿಷಯ ಎಂದು ಕೇಳಿದ್ದಾರೆ.

ತನ್ನಿಂದ ಎಲ್ಲರ ಲೈಫ್​ ಹಾಳಾಗುತ್ತಿದೆ ಎಂದುಕೊಂಡ ನಿಧಿ, ತಾನು ಗರ್ಭಿಣಿ ಎನ್ನುವ ಸತ್ಯವನ್ನು ಹೇಳುವ ಮೂಲಕ ಎಲ್ಲ ವಿಷಯಕ್ಕೂ ತೆರೆ ಎಳೆಯುವ ನಿರ್ಧಾರಕ್ಕೆ ಬಂದಿದ್ದಾಳೆ.

ಇದೇ ಕಾರಣಕ್ಕೆ ಮೈಕ್​ ಹಿಡಿದು ಎಲ್ಲರ ಎದುರೂ ನಾನು ಗರ್ಭಿಣಿ ಎಂದು ತಿಳಿಸಿದ್ದಾಳೆ. ಇದನ್ನು ಕೇಳಿದ ಎಲ್ಲರೂ ಖುಷಿಯಿಂದ ನಲಿದಾಡಿದ್ದಾರೆ. ಕರ್ಣ ಮತ್ತು ನಿತ್ಯಾ ಮಗು ಅದು ಎಂದುಕೊಂಡಿದ್ದಾರೆ. ಆದರೆ ನಿತ್ಯಾ ತನ್ನ ಅಸಲಿಯತ್ತನ್ನು ಹೇಳಲು ಹೋಗಿದ್ದಳು.

ಹಾಗಿದ್ದರೆ ಸತ್ಯ ಎಲ್ಲರಿಗೂ ಗೊತ್ತಾಗತ್ತಾ ಎಂದು ವೀಕ್ಷಕರು ಖುಷಿಪಟ್ಟುಕೊಳ್ಳಬಹುದು, ನಿಧಿ ಮತ್ತು ಕರ್ಣದ ಹಾದಿ ಸುಗಮವಾಯಿತೆಂದು ಅಂದುಕೊಂಡರೆ ಬಹುಶಃ ಅದು ಸಾಧ್ಯವಿಲ್ಲ. ಏಕೆಂದರೆ, ಅಲ್ಲಿಯೇ ಇರುವ ಕರ್ಣ, ನಿತ್ಯಾಳಿಗೆ ಸತ್ಯವನ್ನು ಹೇಳಲು ಬಿಡದೇ ತಾನೇ ಅದರ ಅಪ್ಪ ಎಂದು ಹೇಳಿದರೂ ಅಚ್ಚರಿಯೇನಿಲ್ಲ. ಏಕೆಂದರೆ ಆತ ಕರ್ಣ ಅಲ್ವಾ?

Source link

Leave a Reply

Your email address will not be published. Required fields are marked *