Headlines

Karna Serial: ವಿಲನ್​ಗಳು ತೋಡಿದ ಗುಂಡಿಗೆ ಬಿದ್ದ ಗರ್ಭಿಣಿ ನಿತ್ಯಾ: ಮುಂದಾದದ್ದು ಭಾರಿ ದುರಂತ!

Karna Serial: ವಿಲನ್​ಗಳು ತೋಡಿದ ಗುಂಡಿಗೆ ಬಿದ್ದ ಗರ್ಭಿಣಿ ನಿತ್ಯಾ: ಮುಂದಾದದ್ದು ಭಾರಿ ದುರಂತ!

Karna Serial: ವಿಲನ್​ಗಳು ತೋಡಿದ ಗುಂಡಿಗೆ ಬಿದ್ದ ಗರ್ಭಿಣಿ ನಿತ್ಯಾ: ಮುಂದಾದದ್ದು ಭಾರಿ ದುರಂತ!

ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಮತ್ತು ತೇಜಸ್ ಮದುವೆಗೆ ಸಿದ್ಧತೆ ನಡೆಯುತ್ತಿರುವಾಗ, ವಿಲನ್‌ಗಳು ನಿತ್ಯಾಳನ್ನು ಅಪಾಯಕ್ಕೆ ಸಿಲುಕಿಸಲು ಸಂಚು ರೂಪಿಸುತ್ತಾರೆ. ಅವರು ತೋಡಿದ ಗುಂಡಿಗೆ ನಿತ್ಯಾ ಬಿದ್ದರೂ, ಕರ್ಣ ಆಕೆಯನ್ನು ರಕ್ಷಿಸುತ್ತಾನೆ.

ಕರ್ಣ ಸೀರಿಯಲ್​ (Karna Serial)ನಲ್ಲಿ ನಿತ್ಯಾ ಮತ್ತು ತೇಜಸ್​ ಒಂದಾಗಿದ್ದು, ನಿಧಿ ಮತ್ತು ಕರ್ಣ ಲವ್​ಸ್ಟೋರಿ ಶುರು ಮಾಡಿಕೊಂಡಿದ್ದಾರೆ ಎಂದುಕೊಂಡರೂ ಎಲ್ಲವೂ ಅಂದುಕೊಂಡಂತೆ ಆಗುತ್ತಿಲ್ಲ.

ನಿಧಿ ಮತ್ತು ಕರ್ಣ ಇನ್ನೂ ತಮ್ಮ ಪ್ರೀತಿಯ ವಿಷಯವನ್ನು ಯಾರ ಮುಂದೂ ಹೇಳಿಕೊಂಡಿಲ್ಲ. ತೇಜಸ್​ ಮತ್ತು ನಿತ್ಯಾರ ಮದುವೆ ಮಾಡಿದ ಬಳಿಕ ಹೇಳುವ ಪ್ಲ್ಯಾನ್​ ಮಾಡಿದ್ದಾರೆ. ಆದರೆ, ಮದುವೆಗೆ ಸಿದ್ಧತೆ ನಡೆಸಿದ್ದರೂ ಅದ್ಯಾಕೋ ಸುಸೂತ್ರವಾಗಿ ನಡೆಯುವಂತೆ ಕಾಣುತ್ತಿಲ್ಲ. ಅದಕ್ಕೆ ಕಾರಣ ವಿಲನ್​ಗಳಾದ ರಮೇಶ್​, ಸಂಜಯ್​.

ಇದೀಗ ಈ ವಿಲನ್​ಗಳು ಸೇರಿ ನಿತ್ಯಾಳ ಕಥೆ ಫಿನಿಷ್​ ಮಾಡಲು ಪಣ ತೊಟ್ಟಿದ್ದಾರೆ. ಇದೇ ಕಾರಣಕ್ಕೆ ಸುಪಾರಿ ನೀಡಲಾಗಿದೆ. ಬಾಲಕಿಯೊಬ್ಬಳು ಬಂದು ನಿತ್ಯಾಳ ಸಹಾಯ ಕೇಳಿದ್ದಾಳೆ. ಅಮ್ಮನಿಗೆ ಏನೋ ಆಗಿದೆ ಎಂದಿದ್ದಾಳೆ.

ಅದನ್ನು ಕೇಳಿ ಎಲ್ಲರೂ ಬಂದಿದ್ದಾರೆ. ಆದರೆ ನಿತ್ಯಾ ಮುಂದೆ ಬಂದಿದ್ದಾಳೆ. ಅಲ್ಲಿ ವಿಲನ್​ಗಳು ಗುಂಡಿ ತೋಡಿ ಎಲೆ ಹಾಕಿಟ್ಟಿದ್ದಾರೆ. ಅದನ್ನು ನಿತ್ಯಾ ಗಮನಿಸಲಿಲ್ಲ. ಆಕೆ ಹೋಗುತ್ತಿರುವುದನ್ನು ನೋಡಿದ ಕರ್ಣನಿಗೆ ಅನುಮಾನ ಬಂದು ಹಿಂದೆಯೇ ಹೋಗಿದ್ದಾನೆ.

ಅಷ್ಟರಲ್ಲಿ ನಿತ್ಯಾ ಅದರ ಮೇಲೆ ಕಾಲಿಟ್ಟು ಜಾರಿಬಿದ್ದುಬಿಟ್ಟಿದ್ದಾಳೆ. ಓಡಿ ಬಂದ ಕರ್ಣ ಆಕೆಯನ್ನು ಕೈಹಿಡಿದು ಕಾಪಾಡಲು ಪ್ರಯತ್ನಿಸಿದ್ದಾನೆ. ಕೊನೆಗೆ ತೇಜಸ್ ಮತ್ತು ನಿಧಿ ಕೂಡ ಓಡಿಬಂದಿದ್ದಾರೆ.

ತುಂಬಾ ಕಷ್ಟಪಟ್ಟ ಬಳಿಕ ನಿತ್ಯಾ ಮೇಲಕ್ಕೆ ಬಂದಿದ್ದಾಳೆ. ಇದನ್ನು ಕಂಡು ಸುಪಾರಿ ಕೊಟ್ಟಾತ ಶಾಕ್​ ಆಗಿದ್ದಾನೆ. ಆದರೆ ಪ್ರಪಾತಕ್ಕೆ ಬಿದ್ದ ಭಯದಲ್ಲಿ ನಿತ್ಯಾ ತತ್ತರಿಸಿಹೋಗಿದ್ದಾಳೆ.

ಈ ಜಾಗ ಸೇಫ್​ ಅಲ್ಲ ಎಂದು ನಿಧಿ ಹೇಳಿದ್ದರಿಂದ ಅಲ್ಲಿಗೆ ಮದುವೆಗೆ ವಿಘ್ನ ಬಂದಂತೆ ಆಗಿದೆ. ಅಲ್ಲಿಂದ ಎಲ್ಲರೂ ಜಾಗ ಖಾಲಿ ಮಾಡುತ್ತಾರೆ. ಮದುವೆಯ ಕನಸು ಸದ್ಯ ಕನಸಾಗಿಯೇ ಉಳಿದಿದೆ. ನಿತ್ಯಾ ಭಾರಿ ದುರಂತದಿಂದ ಪಾರಾಗಿದ್ದರೂ ಮದುವೆಯೆನ್ನುವುದು ಮಾತ್ರ ಮರೀಚಿಕೆಯಾಗಿದೆ. ಮುಂದೇನಾಗುತ್ತೋ ನೋಡಬೇಕಿದೆ.

Source link

Leave a Reply

Your email address will not be published. Required fields are marked *