Headlines

Karna Serial: ಯಾರೂ ಊಹಿಸದ ಟ್ವಿಸ್ಟ್​! ಅಪ್ಪ ಆಗ್ತಿರೋ ಸತ್ಯ ತಿಳಿದ್ರೂ ಮದ್ವೆಗೆ ನಿರಾಕರಿಸ್ತಾನಾ ತೇಜಸ್​?

Karna Serial: ಯಾರೂ ಊಹಿಸದ ಟ್ವಿಸ್ಟ್​! ಅಪ್ಪ ಆಗ್ತಿರೋ ಸತ್ಯ ತಿಳಿದ್ರೂ ಮದ್ವೆಗೆ ನಿರಾಕರಿಸ್ತಾನಾ ತೇಜಸ್​?

Karna Serial: ಯಾರೂ ಊಹಿಸದ ಟ್ವಿಸ್ಟ್​! ಅಪ್ಪ ಆಗ್ತಿರೋ ಸತ್ಯ ತಿಳಿದ್ರೂ ಮದ್ವೆಗೆ ನಿರಾಕರಿಸ್ತಾನಾ ತೇಜಸ್​?
ತೇಜಸ್​ ಕಿಡ್ನ್ಯಾಪ್​ ಹಿಂದಿನ ಸತ್ಯ ಬಯಲಾಗಿದ್ದು, ಕರ್ಣ ನಿರಪರಾಧಿ ಎಂದು ಸಾಬೀತಾಗಿದೆ. ನಿತ್ಯಾ ಮತ್ತು ತೇಜಸ್​ ಮದುವೆ ಮಾಡಿಸಲು ಕರ್ಣ ಮುಂದಾಗಿದ್ದು, ಈ ಪ್ರಸ್ತಾಪ ಕೇಳಿ ತೇಜಸ್​ ಶಾಕ್​ ಆಗಿದ್ದಾನೆ. ತೆರೆಮರೆಯಲ್ಲಿ ರಮೇಶ್​ ನಕ್ಕಿರುವುದು ಕಥೆಗೆ ಹೊಸ ತಿರುವು ನೀಡಿದೆ.
ಕರ್ಣ ಸೀರಿಯಲ್​ (Karna Serial Update) ಇದೀಗ ಕುತೂಹಲದ ಹಂತವನ್ನು ತಲುಪಿದೆ. ತೇಜಸ್​​ ಆಗಮನವಾಗಿದೆ. ಕರ್ಣನೇ ತನ್ನನ್ನು ಕಿಡ್​ನ್ಯಾಪ್​ ಮಾಡಿದ್ದು ಎಂದು ಅವನು ಅಂದುಕೊಂಡಿದ್ದ. ಏಕೆಂದರೆ ರಮೇಶ್​ ಮತ್ತು ಸಂಜಯ್​ ಸೇರಿ ಅದೇ ರೀತಿ ಪ್ಲ್ಯಾನ್​ ಮಾಡಿದ್ದರು.

ಇದೀಗ ಕರ್ಣನ ಮೇಲೆಯೇ ತೇಜಸ್​ ಆರೋಪ ಹೊರಿಸಿದಾಗ ನಿತ್ಯಾ ಎಲ್ಲಾ ಸತ್ಯವನ್ನೂ ಹೇಳಿದ್ದಾಳೆ. ತಾನು ಗರ್ಭಿಣಿ ಎನ್ನುವ ವಿಷಯವನ್ನು ಕೂಡ ಅವಳು ಬಹಿರಂಗಪಡಿಸಿದ್ದಾಳೆ. ಆದರೆ ಇದನ್ನೆಲ್ಲಾ ಮರೆಯಲ್ಲಿಯೇ ನಿಂತು ರಮೇಶ್​, ಸಂಜಯ್​ ಗ್ಯಾಂಗ್​ ಕೇಳಿಸಿಕೊಂಡಿದೆ.

ಅಸಲಿ ವಿಷಯ ತಿಳಿಯುತ್ತಲೇ ಕರ್ಣನ ಬಳಿ ಕ್ಷಮೆ ಕೋರಿದ್ದಾನೆ ತೇಜಸ್​​. ನಿತ್ಯಾಳಿಗೆ ಮಾಡಿರುವ ಸಹಾಯದ ಬಗ್ಗೆ ಅವನು ಕರ್ಣನ ಋಣಿಯಾಗಿದ್ದಾನೆ.

ಈಗ ಎಲ್ಲವೂ ಸರಿಯಾಗಿದೆ ಎನ್ನಿಸುತ್ತಿದೆ. ಆದ್ದರಿಂದ ಕರ್ಣ ನಾಳೆ ಎಲ್ಲರೂ ಹೋಗೋಣ. ನಿತ್ಯಾ ಮತ್ತು ತೇಜಸ್​ ಮದುವೆ ಮಾಡಿಸೋಣ ಎಂದಿದ್ದಾನೆ. ಅಲ್ಲಿಗೆ ನಿಧಿ ಮತ್ತು ಕರ್ಣ ಒಂದಾಗೋದು ಗ್ಯಾರೆಂಟಿ ಎಂದಾಗಿದೆ.

ಆದರೆ ಇದನ್ನು ಕೇಳುತ್ತಲೇ ತೇಜಸ್​ ಶಾಕ್​ ಆಗಿದ್ದಾನೆ. ಮಾತ್ರವಲ್ಲದೇ, ಇದನ್ನು ತೆರೆಮರೆಯಲ್ಲಿ ಕೇಳಿಸಿಕೊಳ್ತಿರೋ ರಮೇಶ್​ ಮಾತ್ರ ನಕ್ಕಿದ್ದಾನೆ.

ಇದರ ಅರ್ಥ ಏನೋ ಎಡವಟ್ಟು ಆದಂತಿದೆ. ತೇಜಸ್​ ನಿತ್ಯಾಳ ಜೊತೆ ಮದುವೆಯ ವಿಷಯ ಕೇಳುತ್ತಲೇ ಶಾಕ್​ ಆಗಿದ್ದು ಯಾಕೆ? ನಿತ್ಯಾ ಮತ್ತು ತೇಜಸ್​ ಮದುವೆ ಸಾಧ್ಯವಿಲ್ಲ ಎನ್ನುವಂತೆ ತೆರೆಮರೆಯಲ್ಲಿದ್ದ ರಮೇಶ್​ ವ್ಯಂಗ್ಯವಾಗಿ ನಕ್ಕಿದ್ದು ಏಕೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

Source link

Leave a Reply

Your email address will not be published. Required fields are marked *