Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು

Karna Serial:  ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು

Karna Serial:  ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು

ಕರ್ಣ ಸೀರಿಯಲ್​ನಲ್ಲಿ ರಮೇಶ್ ಮಾಡಿದ ಕುತಂತ್ರದಿಂದಾಗಿ, ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ನಿತ್ಯಾ ಮತ್ತು ತೇಜಸ್​ ಮದುವೆ ಮುರಿದುಬಿದ್ದಿದೆ. ತಿರುಚಿದ ಆಡಿಯೋ ನಂಬಿದ ತೇಜಸ್, ನಿತ್ಯಾಳ ಶೀಲ ಶಂಕಿಸಿ ಮಂಟಪದಿಂದ ಹೊರನಡೆದಿದ್ದಾನೆ. ಆದರೆ ವೀಕ್ಷಕರು ಕರ್ಣನ ಬಗ್ಗೆ ಗರಂ ಆಗಿದ್ಯಾಕೆ?

ಕರ್ಣ ಸೀರಿಯಲ್​ನಲ್ಲಿ (Karna Serial) ಸದ್ಯ ಎಲ್ಲವೂ ಅಯೋಮಯವಾಗಿದೆ. ರಮೇಶ್​ ಹಚ್ಚಿದ ಕಿಚ್ಚಿನಿಂದಾಗಿ ನಿತ್ಯಾ ಮತ್ತು ತೇಜಸ್​ ಮದುವೆ ಮುರಿದುಬಿದ್ದಿದೆ. ಕರ್ಣ ಮತ್ತು ನಿಧಿಯ ಕನಸು ಕನಸಾಗಿಯೇ ಉಳಿದುಬಿಟ್ಟಿದೆ.

ಇನ್ನೇನು ನಿತ್ಯಾ ಮತ್ತು ತೇಜಸ್​ ಮದುವೆಯಾಗುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಕರ್ಣನ ಧ್ವನಿಯಲ್ಲಿ ತಿರುಚಿದ ಆಡಿಯೋ ಒಂದನ್ನು ರಮೇಶ್​ ತೇಜಸ್​ ಮೊಬೈಲ್​ಗೆ ಕಳುಹಿಸಿದ್ದ. ಅದರಲ್ಲಿ, ನಿತ್ಯಾಳ ಹೊಟ್ಟೆಯಲ್ಲಿ ಇರುವ ಮಗು ತನ್ನದೇ ಎಂದು ಕರ್ಣ ಹೇಳಿದಂತೆ ಇತ್ತು.

ಇದರಿಂದ ತೇಜಸ್​ ಕೊತಕೊತ ಕುದಿಯುತ್ತಿದ್ದ. ನಿತ್ಯಾಳ ಮೇಲೆ ಸೇಡು ತೀರಿಸಿಕೊಳ್ಳಲು ಮದುವೆಯವರೆಗೂ ಬರುವಂತೆ ನಾಟಕ ಮಾಡಿ, ಕೊನೆಯ ಕ್ಷಣದಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಮದುವೆ ಬೇಡ, ಈ ಮಗು ನನ್ನದಲ್ಲ ಎಂದು ಕರ್ಣ ಮತ್ತು ನಿತ್ಯಾ ಮೇಲೆ ರೇಗಾಡಿದ.

ತನ್ನ ಶೀಲವನ್ನು ಶಂಕಿಸ್ತಿರೋದಕ್ಕೆ ಕೋಪಗೊಂಡ ನಿತ್ಯಾ ತೇಜಸ್​ನನ್ನು ತಳ್ಳಿದಳು. ಮೊದಲೇ ಕುದಿಯುತ್ತಿದ್ದ ಆತ, ಕರ್ಣನನ್ನೇ ದೂಷಿಸಿ, ನಿತ್ಯಾ ಮತ್ತು ಇನ್ನೂ ಹುಟ್ಟದ ಮಗುವಿಗೆ ಶಾಪ ಹಾಕಿ ಹೋದ.

ಆದರೆ, ಇಲ್ಲಿ ವೀಕ್ಷಕರಿಗೆ ಕಂಡದ್ದು ಕರ್ಣನ ತಪ್ಪು. ತೇಜಸ್​ ದುಡುಕಿದ ನಿಜ. ಆದರೆ ಅದೇ ಸಮಯದಲ್ಲಿ ಕರ್ಣ, ತಾನು ನಿಧಿಯನ್ನು ಪ್ರೀತಿಸ್ತಿದ್ದು, ನಿತ್ಯಾಳ ಮೇಲೆ ಕಣ್ಣು ಹಾಕಲು ಸಾಧ್ಯವೇ ಇಲ್ಲ ಎಂದು ಒಂದು ಮಾತು ಹೇಳಿದ್ರೆ ಅಲ್ಲಿಗೆ ತೇಜಸ್​ಗೂ ತಾನು ಹೇಳ್ತಿರೋದು ತಪ್ಪು ಎನ್ನಿಸುತ್ತಿತ್ತು. ಆದರೆ ಕರ್ಣ ಆಗಲೀ, ನಿಧಿ ಆಗಲೀ ಈ ವಿಷಯ ಮುಚ್ಚಿಟ್ಟ ಕಾರಣದಿಂದಲೇ ಇಷ್ಟೊಂದು ಸೀನ್​ ಕ್ರಿಯೇಟ್​ ಆಗಿರೋದು ಎಂದು ಕರ್ಣ ಮತ್ತು ನಿಧಿಯನ್ನೆ ದೂಷಿಸುತ್ತಿದ್ದಾರೆ.

ಇಲ್ಲಿ ನಿತ್ಯಾ ಮತ್ತು ತೇಜಸ್​ ಮದುವೆಯಾಗಿದ್ದರೆ ಸೀರಿಯಲ್​ ಮುಗಿಯುತ್ತಿತ್ತು. ಇದೊಂದು ಸೀರಿಯಲ್​ ಎನ್ನೋದನ್ನೂ ಮರೆತು, ವೀಕ್ಷಕರು ನಿಜ ಜೀವನವೇ ಅಂದುಕೊಂಡು ಪಾತ್ರಧಾರಿಗಳನ್ನು ಬೈಯುವುದು ಹಾಸ್ಯಾಸ್ಪದ ಎನ್ನಿಸಿದರೂ, ಸೀರಿಯಲ್​ಗಳು ಇಂದು ಯಾವ ರೀತಿ ಜನರ ಮನಸ್ಸನ್ನು ಆವರಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಇಂಥ ಕಮೆಂಟ್ಸ್​ ಸಾಕ್ಷಿಯಂತಿವೆ.

Source link

Leave a Reply

Your email address will not be published. Required fields are marked *