
ಬೆಂಗಳೂರು, (ಏಪ್ರಿಲ್ 09): 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ (ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026) ಹೊರಬಿದ್ದಿದೆ. ಆನ್‌ಲೈನ್‌ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಬಳಿಕ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಇಂದು (ಏಪ್ರಿಲ್ 09) ಸಂಜೆ 6ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಇದಕ್ಕೂ ಮೊದಲು ಆನ್‌ಲೈನ್‌ನಲ್ಲಿ https://karresults.nic.in ವೆಬ್ ಸೈಟ್ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. ಒಂದು ವೇಳೆ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ ಮೂಲಕವೂ ರಿಸ್ಟಲ್ ಚೆಕ್ ಮಾಡಬಹುದಾಗಿದ್ದರೆ ಈ ಕೆಳಗಿನಂತಿದೆ ನೋಡಿ.
ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳ ಸಂಖ್ಯೆ
ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆ-1 ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯಾದ್ಯಂತ ಒಟ್ಟು 1217 ಕೇಂದ್ರಗಳಲ್ಲಿ ನಡೆದಿದ್ದು, 5174 ಕಾಲೇಜುಗಳಲ್ಲಿ ಒಟ್ಟು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದಾರೆ. ಈ ಹೊರಗಿನ ಸೈನ್ಸ್ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.
ಇದನ್ನೂ ಓದಿ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026: ಸರ್ವರ್ ಕಿರಿಕಿರಿಗೆ ಬೈ ಹೇಳಿ, ವೆಬ್‌ಸೈಟ್‌ನಿಂದ ಮೊದಲೇ ದ್ವಿತೀಯ ಪಿಯುಸಿ ರಿಸಲ್ಟ್ ನೋಡಿ
ನಿಮ್ಮ ರಿಸಲ್ಟ್ ಹೀಗೆ ಚೆಕ್ ಮಾಡಿ
ದ್ವಿತೀಯ ಪಿಯುಸಿ ಫಲಿತಾಂಶದ ಮಾಹಿತಿ ಅಧಿಕೃತ ವೆಬ್‌ಸೈಟ್ https://karresults.nic.in
ಲಿಂಕ್ ಮೂಲಕ ರಿಸಲ್ಟ್ ವೀಕ್ಷಿಸಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ, ‘ಸಲ್ಲಿಸು’ ಬಟನ್ ಒತ್ತಿದ ತಕ್ಷಣ ಅಂಕಪಟ್ಟಿ ಪರದೆ ಓಪನ್ ಆಗಲಿದೆ.
ಈ ಬಾರಿ ಡಿಜಿಲಾಕರ್‌ನಲ್ಲೂ ಫಲಿತಾಂಶ ಲಭ್ಯ
ಇನ್ನುಳಿದಂತೆ ಕರ್ನಾಟಕ ಒನ್ ಮೊಬೈಲ್ ಆಯಪ್ ನಲ್ಲಿ ಸಿಗಲಿದೆ. ವಿದ್ಯಾರ್ಥಿಗಳ ಮೊಬೈಲ್‌ಗೆ SMS ಮೂಲಕ ಫಲಿತಾಂಶದ ಮಾಹಿತಿ ರವಾನೆಯಾಗಿದೆ. ಇನ್ನು ಈ ವರ್ಷ ಪ್ರಥಮ ಬಾರಿಗೆ ಡಿಜಿಲಾಕರ್‌ನಲ್ಲೂ https://www.digilocker.govt.in ನಲ್ಲೂ ರಿಸಲ್ಟ್ ವೀಕ್ಷಿಸಲಾಗಿದೆ.
ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯು ಡಿಜಿಲಾಕರ್ ಮೂಲಕ ಲಭ್ಯ. ಒಂದು ವೇಳೆ ವೆಬ್ ಸೈಟ್ ನಲ್ಲಿ ರಿಸಲ್ಟ್ ನೋಡುವಾಗ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ ಮೂಲಕವೇ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು ಒಮ್ಮೆಗೆ ಅಧಿಕೃತ ವೆಬ್‌ಸೈಟ್‌ಗಳ ಮೇಲೆ ಮುಗಿಬೀಳುತ್ತಾರೆ. ಇದರಿಂದ ಸರ್ವರ್ ಸಮಸ್ಯೆ ಅಥವಾ ಪೇಜ್ ಲೋಡ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮಾಮೂಲಿ. ಆದರೆ ಈ ಬಾರಿ ನೀವು ವೆಬ್‌ಸೈಟ್ ಓಪನ್ ಆಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ. ಡಿಜಿಲಾಕರ್ ಮೂಲಕವೇ ನೇರವಾಗಿ ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಫಲಿತಾಂಶ ಪಡೆಯಬಹುದು. ವೆಬ್‌ಸೈಟ್‌ನಿಂದ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನಿಮ್ಮ ಮೊಬೈಲ್‌ನಲ್ಲಿ ‘ಡಿಜಿಲಾಕರ್’ ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು.
ಶಿಕ್ಷಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ