
ಬೆಂಗಳೂರು, ಏಪ್ರಿಲ್ 10: ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆಯ ಪಲಿತಾಂಶ (2ನೇ ಪಿಯುಸಿ ಫಲಿತಾಂಶ) ಪ್ರಕಟವಾಗಿದೆ. ಹಲವಾರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 600ಕ್ಕೆ 600 ಅಂಕವನ್ನೂ ಪಡೆದಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಅಧಿಕೃತ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಂಕಪಟ್ಟಿಯಲ್ಲಿ ಗಂಭೀರ ಲೋಪವೊಂದು ಕಂಡುಬಂದಿದೆ. 600 ಅಂಕಗಳ ಪರೀಕ್ಷೆಗೆ 683 ಅಂಕಗಳನ್ನು ನೀಡಿದ ಬೋರ್ಡ್‌ನ ಎಡವಟ್ಟು ಬೆಳಕಿಗೆ ಬಂದಿದೆ.
ಆರೂ ವಿಷಯಕ್ಕೆ 100ಕ್ಕೂ ಹೆಚ್ಚು ಅಂಕ!
ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಅನುತ್ತೀರ್ಣರಾಗಿದ್ದ ಕೆಲ ವಿದ್ಯಾರ್ಥಿಗಳು ಈ ವರ್ಷ ಮರು ಪರೀಕ್ಷೆ ಬರೆದಿದ್ದರು. ಈ ವಿದ್ಯಾರ್ಥಿಗಳ ಫಲಿತಾಂಶವೂ ನಿನ್ನೆ ಪ್ರಕಟವಾಗಿದೆ, ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ರೀತಿಯ ಎಡವಟ್ಟು ನಡೆದಿರುವುದು ಮುಜುಗರ ತಂದಿದೆ. ಕೆಲ ಹಂತದ ಆರು ವಿಷಯಗಳಲ್ಲಿ 100ಕ್ಕೂ ಹೆಚ್ಚು ಅಂಕಗಳನ್ನು ನೀಡಲಾಗಿದೆ.
ಇದನ್ನೂ ಓದಿ ತಾಯಿ ಸತ್ತ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ ಈಗ ಟಾಪರ್! ಸಾಧನೆಗೆ ಅಮ್ಮನ ಮಾತುಗಳೇ ಸ್ಪೂರ್ತಿ ಹೇಗೆ?
ಡಿಜಿ ಲಾಕರ್ ನಲ್ಲಿ ಸರಿಯಾಗೇ ಇದೆ ರಿಸಲ್ಟ್!
Karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಈ ಲೋಪ ಕಾಣಿಸುತ್ತದೆ. ಆದರೆ ಡಿಜಿ ಲಾಕರ್‌ನಲ್ಲಿನ ಅದೇ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಯಲ್ಲಿ ಅಂಕಗಳು ಸರಿಯಾಗಿರುವುದು ಗಮನಾರ್ಹವಾಗಿದೆ. ಈ ವೆಬ್‌ಸೈಟ್ ಡೇಟಾ ಅಪ್‌ಲೋಡ್ ವೇಳೆ ತಾಂತ್ರಿಕ ದೋಷ ಸಂಭವಿಸುವ ಸಾಧ್ಯತೆಯಿದೆ. ಈ ಎಡವಟ್ಟಿನಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿದ್ದು, ಫಲಿತಾಂಶದ ಬಗ್ಗೆ ಅನುಮಾನಗಳಿವೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ