ಬೆಂಗಳೂರು, ಬೆಳಗಾವಿಯಲ್ಲಿ ‘ಅನಾರೋಗ್ಯಕರ’ ಗಾಳಿಮಟ್ಟ: ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ

ಬೆಂಗಳೂರು, ಬೆಳಗಾವಿಯಲ್ಲಿ ‘ಅನಾರೋಗ್ಯಕರ’ ಗಾಳಿಮಟ್ಟ: ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ


ಬೆಂಗಳೂರು, ಫೆ.19: ಇಂದು (ಫೆ. 19) ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ (ವಾಯು ಗುಣಮಟ್ಟ ಸೂಚ್ಯಂಕ) ಹದಗೆಟ್ಟಿದ್ದು, ವಿಶೇಷವಾಗಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ನಗರದ ಸರಾಸರಿ ಗಾಳಿಯ ಮಟ್ಟ 117 ರಿಂದ 157 ರ ನಡುವೆ ದಾಖಲಾಗಿದ್ದು, ಇದು ‘ಕಳಪೆ’ ಮತ್ತು ಕೆಲವು ಭಾಗಗಳಲ್ಲಿ ‘ಅನಾರೋಗ್ಯಕರ’ ಮಟ್ಟಕ್ಕೆ ತಲುಪಿದೆ. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಮತ್ತು ಬಿಟಿಎಂ ಲೇಔಟ್‌ನಂತಹ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿದೆ.

ಇನ್ನು ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಾಯು ಗುಣಮಟ್ಟ ಕಳಪೆ, ಗಾಳಿಯ ಮಟ್ಟ 277 ದಾಖಲಾಗಿದೆ. ಇದು ‘ಅನಾರೋಗ್ಯಕರ’ ಹಂತ ಎಂದು ಹೇಳಲಾಗಿದೆ. ಶ್ವಾಸಕೋಶದ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಿದೆ. ಕರಾವಳಿ ಭಾಗದಲ್ಲೂ ವಾಯು ಗುಣಮಟ್ಟ ಕುಸಿತ ಕಂಡಿದ್ದು, ವಾಹನ ದಟ್ಟಣೆ ಮತ್ತು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳಿನ ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ತಾಪಮಾನದ ಏರಿಳಿತ (ಬೆಳಿಗ್ಗೆ ಚಳಿ, ಮಧ್ಯಾಹ್ನ ಬಿಸಿಲು) ಮತ್ತು ವಾಯು ಮಾಲಿನ್ಯದ ಕೆಮ್ಮು, ನೆಗಡಿ ಮತ್ತು ಗಾಳಿಯಲ್ಲಿ ತೊಂದರೆಗಳು ಉಂಟಾಗುತ್ತವೆ ಎಂದು ವೈದ್ಯರು ಸೂಚಿಸಿದ್ದಾರೆ.

ಮಾಲಿನ್ಯವು ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಸಂಚರಿಸುವಾಗ N95 ಮಾಸ್ಕ್ ಉತ್ತಮವಾಗಿದೆ.ಉಸಿರಾಟದ ತೊಂದರೆ ಇರುವವರು ಮತ್ತು ಮಕ್ಕಳು ಬೆಳಿಗ್ಗೆ ಅಥವಾ ಸಂಜೆ ಹೊರಗೆ ಹೋಗುವುದನ್ನು ಕಡಿಮೆ ಮಾಡುವುದು ಸೂಕ್ತ ಹಾಗೂ ಒಣ ಹವೆಯ ಮೇಲೆ ಸಾಕಷ್ಟು ನೀರು ಕುಡಿಯಿರಿ ಎಂದು ಸಲಹೆ ನೀಡಿದರು. ಈ ಗಾಳಿ ಗುಣಮಟ್ಟ ಮಧ್ಯಾಹ್ನ ಅಥವಾ ಸಂಜೆಯ ಹೊತ್ತಿಗೆ ಬದಲಾಗಬಹುದು ಎಂದು ಹೇಳಲಾಗಿದೆ. ಗಾಳಿಯಲ್ಲಿ ಪ್ರಮುಖವಾಗಿ PM2.5 ಮತ್ತು PM10 ಕಣಗಳ ಪ್ರಮಾಣ, ಇದು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳು ಸುಲಭವಾಗಿ ಹರಡುತ್ತದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಈ ಜಿಲ್ಲೆಗಳಲ್ಲಿ ಶಾಖದ ತೀವ್ರತೆ ಹೆಚ್ಚಾಗಲಿದೆ, ದೇಹದ ಚರ್ಮದ ಬಗ್ಗೆ ಎಚ್ಚರವಿರಲಿ

ಪ್ರಮುಖ ಜಿಲ್ಲೆಗಳಲ್ಲಿ ವಾಯುಗುಣ ಮಟ್ಟ:

ಬೆಂಗಳೂರು-157

ಮಂಗಳೂರು-178

ಬೆಳಗಾವಿ-277

ಮೈಸೂರು-85

ಚಾಮರಾಜನಗರ – 45

ಶಿವಮೊಗ್ಗ – 187

ಬಳ್ಳಾರಿ -146

ಹಬ್ಬಳ್ಳಿ-160

ಉಡುಪಿ – 185

ವಿಜಯಪುರ -144

ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *