ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ: ಸುರೇಶ್ ಕುಮಾರ್ ಮಾತಿಗೆ ಕಲಾಪದಲ್ಲಿ ಭಾರೀ ಗದ್ದಲ

ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ: ಸುರೇಶ್ ಕುಮಾರ್ ಮಾತಿಗೆ ಕಲಾಪದಲ್ಲಿ ಭಾರೀ ಗದ್ದಲ


ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ: ಸುರೇಶ್ ಕುಮಾರ್ ಮಾತಿಗೆ ಕಲಾಪದಲ್ಲಿ ಭಾರೀ ಗದ್ದಲ

ಬೆಂಗಳೂರು, ಜ.23: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ(ಕರ್ನಾಟಕ ವಿಧಾನಸಭೆ) ನಡೆದ ಘಟನೆಯೊಂದು ಸದನದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಏಳು ತಿಂಗಳಿಗೆ ಹುಟ್ಟಿದವರಂತೆ ಆಡಬೇಡಿ ಎಂಬ ಹೇಳಿಕೆಯು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಸಚಿವ ಭೈರತಿ ಸುರೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್ ಅವರು ಮಧ್ಯಪ್ರವೇಶಿಸಿದರೆ ಸುರೇಶ್ ಕುಮಾರ್ “ಒಂದು ತಿಂಗಳಿಗೆ ಹುಟ್ಟಿದರೆ ಸರಿಯಾಗುತ್ತಿದ್ದಾರೆ, ಏಳು ತಿಂಗಳಿಗೆ ಹುಟ್ಟಿದ್ದೀರಾ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಸುರೇಶ್ ಕುಮಾರ್ ಅವರ ಈ ಮಾತು ಸದನದಲ್ಲಿ ಆಕ್ರೋಶದ ಅಲೆಯ್ನುಎಬ್ಬಿಸಿದೆ. ಹಲವಾರು ಸದಸ್ಯರು, ಅದರಲ್ಲಿಯೂ ಪ್ರಿಯಾಂಕಾ ಮತ್ತು ಭೈರತಿ ಅವರು ತೀವ್ರವಾಗಿ ವಿರೋಧಿಸಿದರು, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಕ್ಷಣವೇ ಕ್ಷಮೆ ಕೇಳಿದರು. ಈ ಹೇಳಿಕೆ ಅನ್ ಪಾರ್ಲಿಮೆಂಟರಿ (ಅಸಂಸದೀಯ) ಎಂದು ಹೇಳಿದರು. “ನೀವು ಹೆಲ್ತ್ ಮಿನಿಸ್ಟರ್ ಆಗಿದ್ದೀರಾ. ಏಳು ತಿಂಗಳಲ್ಲಿ ಯಾರೂ ಹುಟ್ಟೋದೇ ಇಲ್ವಾ? ಪ್ರೀ ಮೆಚ್ಯೂರ್ ಬೇಬಿ ಹುಟ್ಟಲ್ವಾ? ಏಳು ತಿಂಗಳಲ್ಲಿ ಹುಟ್ಟೋರಿಗೆ ಮರ್ಯಾದೆ ಇಲ್ವಾ?” ಸದನದಲ್ಲಿ ಶಾಸಕ ಹೇಳಿದ್ದಾರೆ. ಈ ಮಾತಿನಿಂದ ಏಳು ತಿಂಗಳಲ್ಲಿ ಜನಿಸಿದವರ ಕುರಿತು ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಾಗ್ವಾದ ತಾರಕಕ್ಕೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ಸುರೇಶ್ ಕುಮಾರ್ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಅವರು ಮಾತನ್ನು ಕಡತದಿಂದ ತೆಗೆದು ಎಂದು ಹೇಳಿದ ಸ್ಪೀಕರ್ ಗೆ ಹೇಳಿದ್ರು, ತಕ್ಷಣ ಎದ್ದು ನಿಂತು ಸುರೇಶ್ ಕುಮಾರ್ ಅವರು ತಾವು ಏಳು ತಿಂಗಳು, ಒಂದು ತಿಂಗಳು ಎಂದು ಹೇಳಿದ ಮಾತನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *