ಬೈಕ್ ಟ್ಯಾಕ್ಸಿಗೆ ಮತ್ತೆ ಸಂಕಷ್ಟ?
ಬೆಂಗಳೂರು, ಜನವರಿ 31: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ಹಿನ್ನೆಲೆ ತೀರ್ಪಿನ ವಿರುದ್ಧ ಪ್ರಸ್ತಾವನೆಗೆ SLP ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಮನವಿ ಮಾಡಿದೆ. ಈ ಕುರಿತು ಮಾತನಾಡುತ್ತಿರುವ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ, ಬೈಕ್ ಟ್ಯಾಕ್ಸಿಯವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ರಾಹುಲ್ ಪತ್ರ ಬರೆದು, ಬೈಕ್ ಟ್ಯಾಕ್ಸಿಯವರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದಾರೆ. ಹೀಗಾಗಿ ನಮಗೆ ಭಯ ಆಗುತ್ತಿದೆ, ಹೋರಾಟಕ್ಕೂ ಹಿನ್ನೆಡೆ ಆಗಬಹುದು. ನಮ್ಮ ಮನವಿ ಸ್ವೀಕರಿಸಿ SLP ಸಲ್ಲಿಸಲು ಮುಂದಾಗಬೇಕು ಎಂದು ಅವರು ಸಿಎಂ ಹೇಳಿದ್ದಾರೆ.
ಇನ್ನು ಬೈಕ್ ಟ್ಯಾಕ್ಸಿ ಸುರಕ್ಷತೆಯ ಬಗ್ಗೆ ನಿಮ್ಹಾನ್ಸ್ ವೈದ್ಯರು ಹಾಗೂ ಪೊಲೀಸ್ ಇಲಾಖೆ ಕೂಡ ಆತಂಕ ವ್ಯಕ್ತಪಡಿಸಿದೆ ಎನ್ನಲಾಗಿದ್ದು, ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯಿಂದ ಸಾರ್ವಜನಿಕರಿಗೆ ಸುರಕ್ಷಿತ ಅಪಾಯ ಉಂಟಾಗಬಹುದು. ಅಪಘಾತ ಪ್ರಮಾಣ ಹೆಚ್ಚಿನ ಸಾಧ್ಯತೆಯ ಜೊತೆಗೆ ಪ್ರಯಾಣಿಕರಿಗೆ ಜೀವ ಭದ್ರತೆ ಇಲ್ಲ. ಇನ್ನು ಆಟೋ, ಟ್ಯಾಕ್ಸಿ ಮತ್ತು ಬಸ್‌ಗಳಿಗೆ ಇವು ಹೊಡೆತ ನೀಡಲಿವೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಜೊತೆಗೆ 2022ರಲ್ಲಿ ICRA ಅಂಕಿ ಅಂಶಗಳ ಪ್ರಕಾರವೂ ಬೈಕ್ ಅಪಘಾತ ಹೆಚ್ಚುಗಳೇ ನಡೆದಿರೋದು ಸಾಭೀತಾಗಿದೆ.
ಇದನ್ನೂ ಓದಿ: ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ
| ಅಪಘಾತಗಳ ಅಂಕಿ-ಅಂಶ | |
| ಬೈಕ್ | ಶೇ.40 |
| ಕಾರು, ಟ್ಯಾಕ್ಸಿ, ವ್ಯಾನ್ | ಶೇ.17 |
| ಪಾದಚಾರಿಗಳಿಂದ | ಶೇ.17 |
| ಆಟೋ ರಿಕ್ಷಾ | ಶೇ.4 |
| ಟ್ರಕ್, ಲಾರಿ | ಶೇ.9 |
| ಬಸ್ | ಶೇ.3 |
| ಸೈಕಲ್ | ಶೇ.2 |
| ಇತರೆ | ಶೇ.7 |
ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿಗೆ ಲೈಸೆನ್ಸ್ ನೀಡಿರುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಸಿದ್ಧಪಡಿಸಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗ ಪೀಠ , ಬೈಕ್ ಟ್ಯಾಕ್ಸಿ ಸೇವೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಒಂದು ಭಾಗವಾಗಿದ್ದು, ಕಾನೂನು ಚೌಕಟ್ಟಿನೊಳಗೆ ಅವರನ್ನು ನಿರ್ಬಂಧಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 3:15 pm, ಶನಿ, 31 ಜನವರಿ 26