ಬೆಂಗಳೂರು, ಅಕ್ಟೋಬರ್ 28: ವಿಧಾನ ಪರಿಷತ್ ನ 4 ಸ್ಥಾನಗಳ ಚುನಾವಣೆಗೆ ರಾಜ್ಯ ಬಿಜೆಪಿ (ಬಿಜೆಪಿ) ಸಿದ್ಧತೆ ಆರಂಭಿಸಿದೆ. ಎಲೆಕ್ಷನ್ ಸಂಬಂಧ ಸಂಚಾಲಕರು, ಸಹ ಸಂಚಾಲಕರನ್ನು ನೇಮಿಸಲಾಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರ-ಸಂಚಾಲಕರಾಗಿ ಅಮರನಾಥ್ ಪಾಟೀಲ್, ಸಹ ಸಂಚಾಲಕರಾಗಿ ನವೀನ್ ಗುಳಗಣ್ಣನವರ್ ನೇಮಕವಾಗಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರ-ಸಂಚಾಲಕರಾಗಿ ಅರುಣ್ ಶಹಾಪುರ, ಸಹ ಸಂಚಾಲಕರಾಗಿ ಸಂತೋಷ್ ದೇವರೆಡ್ಡಿ ಆಯ್ಕೆಯಾಗಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರ-ಸಂಚಾಲಕರಾಗಿ ವೈ.ಎ.ನಾರಾಯಣಸ್ವಾಮಿ, ಸಹ ಸಂಚಾಲಕರಾಗಿ ಚಿದಾನಂದ ಎಂ.ಗೌಡಗೆ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ-ಸಂಚಾಲಕರಾಗಿ ಕೇಶವ ಪ್ರಸಾದ್ ಮತ್ತು ಸಹ ಸಂಚಾಲಕರಾಗಿ ಎಸ್.ಎನ್.ರಾಜಣ್ಣ ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ನಿಯೋಜಿಸಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಹೊಸ ಮುಖ?
ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯ ಹುಡುಕಾಟ ನಡೆದಿದೆ. MLC ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಚಿದಾನಂದಗೌಡ ತಿಳಿಸಿರುವ ಕಾರಣ ಹೊಸ ಅಭ್ಯರ್ಥಿ ಕಣಕ್ಕಿಳಿಸಲು ಪಕ್ಷ ಮುಂದಾಗಿದೆ. ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತಕುಮಾರ್ ಮತ್ತು ಮಾಜಿ MLC ವೈ.ಎ.ನಾರಾಯಣಸ್ವಾಮಿ ಹೆಸರು ಚರ್ಚೆಯಲ್ಲಿದ್ದು, ನಾರಾಯಣಸ್ವಾಮಿ ಕಳೆದ ಬಾರಿಯೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈ ಬಾರಿಯೂ ಅವರ ಟಿಕೆಟ್ ಆಕಾಂಕ್ಷಿ ಯಾವುದು.
ಇದನ್ನೂ ಓದಿ: ‘ಟನಲ್ ರೋಡ್ ಬಿಡಿ ಸ್ವಾಮಿ, ಶಿಕ್ಷಕರ ಪಾಲಿಗೆ ಮೊದಲು ಸಂಬಳ ಕೊಡಿ’: ಡಿಕೆ ಶಿವಕುಮಾರ್ ಕಾಲೆಳೆದ ಆರ್ ಅಶೋಕ್
ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನ ಜೆಡಿಎಸ್ ಪಾಲು?
ಇನ್ನು ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ತಯಾರಿ ನಡೆಸಿದ್ದು, 2 ಕ್ಷೇತ್ರಗಳಲ್ಲಿ ಆರ್.ಅಶೋಕ್ ನೇತೃತ್ವದಲ್ಲಿ ಸಭೆ ನಡೆದಿದೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಹಾಲಿ ಎಂಎಲ್ಸಿ ಶಶೀಲ್ ನಮೋಶಿಗೆ ಮತ್ತೊಂದು ಬಾರಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿಯೂ ಹಾಲಿ ಎಂಎಲ್ಸಿ ಎಸ್.ವಿ.ಸಂಕನೂರ್ಗೆ ಟಿಕೆಟ್ ಸಾಧ್ಯತೆ ಇದೆ. ಆದರೆ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.
ಮತ್ತಷ್ಟು ರಾಜಕೀಯ ಸಂಬಂಧಿತ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.