BJP-JDS ಮೈತ್ರಿ ಗೊಂದಲಕ್ಕೆ ಶಿಘ್ರವೇ ಇತಿಶ್ರೀ: ಸಮನ್ವಯ ಸಭೆಗೆ ನಾಯಕರ ನಿರ್ಧಾರ

BJP-JDS ಮೈತ್ರಿ ಗೊಂದಲಕ್ಕೆ ಶಿಘ್ರವೇ ಇತಿಶ್ರೀ: ಸಮನ್ವಯ ಸಭೆಗೆ ನಾಯಕರ ನಿರ್ಧಾರ


ಬೆಂಗಳೂರು, ಫೆಬ್ರವರಿ 19: ಮೈತ್ರಿ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರ ಸೇರಿ ಕೆಲ ವಿಷಯಗಳಲ್ಲಿ ಗೊಂದಲ ಉಂಟಾಗಿರುವ ಮದ್ದರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಕುಮಾರಸ್ವಾಮಿ, ಆರ್.ಅಶೋಕ್, ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶೀಘ್ರವೇ ಬೆಂಗಳೂರಿನಲ್ಲಿ ಮೈತ್ರಿ ನಾಯಕರ ಸಮನ್ವಯ ಸಭೆ ನಡೆಸಲು ಸಿದ್ಧತೆ ನಡೆದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ನಾಯಕರ ಗೊಂದಲದ ಹೇಳಿಕೆ ಹಿನ್ನೆಲೆ ಸಭೆ ನಡೆಸಲು ಉದ್ದೇಶಿಸಿರುವ ಮಾಹಿತಿ ಇದೆ.

ಉಭಯ ಪಕ್ಷಗಳ ನಾಯಕರು ಒಂದೊಂದು ರೀತಿ ಹೇಳಿಕೆ ನೀಡುತ್ತಿರುವುದು ಕಾಂಗ್ರೆಸ್ ನಾಯಕರಿಗೆ ಅಸ್ತ್ರವಾಗುವ ಸಾಧ್ಯತೆ ಇದೆ. ಜೊತೆಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಮೇಲೂ ಪರಿಣಾಮ ಬೀರಬುದಾದ ಹಿನ್ನೆಲೆ ಮೈತ್ರಿ ನಾಯಕರಲ್ಲಿ ಏನೇ ಮನಸ್ತಾಪ, ಗೊಂದಲಗಳಿದ್ದರೂ ಅದನ್ನು ಬಗೆಹರಿಸಲು ನಾಯಕರು ತೀರ್ಮಾನಿಸಿದ್ದಾರೆ. ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರ ಸಂಬಂಧ ನಿನ್ನೆಯಷ್ಟೇ ಹೇಳಿದ್ದ ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಜತೆ ಮಾತಾಡಿದ್ದು, ಸುಲಲಿತವಾಗಿ ಜೆಡಿಎಸ್ ಜತೆ ಹೊಂದಾಣಿಕೆ ಆಗಲಿದೆ. ಆದಷ್ಟು ಬೇಗ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಮ್ಮ ನಡುವೆ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ. ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನ ಅಂತಿಮ ಎಂದು ಹೇಳಿದ್ದರು.

ಇದನ್ನೂ ಓದಿ: ದೋಸ್ತಿ ನಾಯಕರ ನಡುವೆ ದಂಗಲ್; ಜಿಬಿಎ ಎಲೆಕ್ಷನ್ ಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ?

ಅತ್ತ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೂಡ ಈ ಬಗ್ಗೆ ಆಗಲೇ ಮಾತನಾಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಮತ್ತು ಲೋಪಗಳಿಲ್ಲ. ವೈಯಕ್ತಿಕವಾಗಿ ಮಾತಾಡುವುದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲ. ರಾಷ್ಟ್ರಮಟ್ಟದಲ್ಲಿ ನಾವು NDA ಸೇರಿಲ್ಲ ಬೇರೆ ವಿಚಾರ ಬರೋದಿಲ್ಲ. ನಾನು ನೂರಾರು ಬಾರಿ ಹೇಳಿದ್ದೀನಿ, ಜನ ಮುಂದಿನ ಸಿಎಂ ಎಂದು ಕೂಗ್ತಾರೆ. ಜನ ಮುಂದಿನ ಸಿಎಂ ಎಂದು ಕೂಗ್ತಾರೆಂದು ಭ್ರಮೆಯಲ್ಲಿ ಹೋಗಬಾರದು. ಜನ ನಮ್ಮ ಮೇಲಿನ ಪ್ರೀತಿಯಿಂದ ಮಾತಾಡ್ತಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಅನ್ನವಾಗಬಾರದು. ಸಿಎಂ ಆಗುತ್ತೇನೆ ಎಂದು ನಾನು ಕನಸು ಕಾಣಲು ಆಗುತ್ತಾ? ನಾನು 2 ಬಾರಿ ಸಿಎಂ ಆಗಿದ್ದೆ. ಯಾರ ಹಣೆಯಲ್ಲಿ ಏನೇ ಬರೆದಿರುತ್ತೋ ಆಗಬಹುದು. ನನ್ನ ಮೊದಲ ಆದ್ಯತೆ ರಾಜ್ಯದಲ್ಲಿ ಕೆಟ್ಟ ಸರ್ಕಾರವನ್ನು ತೆಗೆಯುವುದು. ಕೆಟ್ಟ ಸರ್ಕಾರ ತೆಗೆಯಲು ಬಿಜೆಪಿ, ಜೆಡಿಎಸ್ ಮೈತ್ರಿ ಮುಂದುವರಿಯಬೇಕು ಎಂದು ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *