Headlines

ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವು: IAS ಅಧಿಕಾರಿ ಕುಟುಂಬಕ್ಕೆ ಸಿಗುತ್ತಾ ಅನುಕಂಪದ ನೌಕರಿ?

ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವು: IAS ಅಧಿಕಾರಿ ಕುಟುಂಬಕ್ಕೆ ಸಿಗುತ್ತಾ ಅನುಕಂಪದ ನೌಕರಿ?


ಬೆಂಗಳೂರು, (ನವೆಂಬರ್ 27): ಕಾರು ಅಪಘಾತದಲ್ಲಿ (ಕಾರು ಅಪಘಾತ) ಸಾವನ್ನಪ್ಪಿರುವ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (ಮಹಾಂತೇಶ ಬಿಳಗಿ) ಕುಟುಂಬಕ್ಕೆ ಅನುಕಂಪದ ಸರ್ಕಾರಿ ನೌಕರಿ ನೀಡಬೇಕೆಂಬ ಕೂಗು ಕೇಳಿಬಂದಿದೆ. ಮಹಾಂತೇಶ್ ಬೀಳಗಿ 2012ರ ಕರ್ನಾಟಕ ಕೇಡರ್ನ ಐಇಎಸ್ ಅಧಿಕಾರಿ. ಅವರ ಸರ್ಕಾರಿ ಸೇವೆ ಇನ್ನೂ ಸಹ ಬಾಕಿ ಇತ್ತು. ಅವರ ಅಕಾಲೀನ ಸಾವಿನ ಹಿನ್ನಲೆಯಲ್ಲಿ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ.

ಈ ಸಂಬಂಧ ಕರ್ನಾಟಕ ಬಿಜೆಪಿ ಅಧ್ಯಕ್ಷ, ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿಯವರ ಅಕಾಲಿಕ ನಿಧನದಿಂದ ನೊಂದ ಕುಟುಂಬದ ಕಣ್ಣೀರು ಒರೆಸಿ, ಸಾಂತ್ವನ ಹೇಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ಹಿಂದೆ ಇಂತಹ ವಿಸ್ತೃತ ಅಧಿಕಾರಿಗಳ ಕುಟುಂಬ ವರ್ಗದವರಿಗೆ ಅಧಿಕಾರಿ ಹುದ್ದೆಗಳನ್ನು ನೀಡಿ ಹಲವು ನಿದರ್ಶನಗಳಿದ್ದು, ಅದಕ್ಕೆ ಅನುಗುಣವಾಗಿ ಶ್ರೀಯುತ ಬೀಳಗಿಯವರ ಕುಟುಂಬದ ಸದಸ್ಯರೊಬ್ಬರಿಗೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡುವಂತೆ ಪತ್ರದ ಮೂಲಕ ಬರೆದಿದ್ದಾರೆ.

ಇದನ್ನೂ ಓದಿ: ಮೂವರು ಸಹೋದರರು ದುರಂತ ಸಾವು: ಐಎಎಸ್ ಅಧಿಕಾರಿ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ರೂ ಉಳಿಯಲಿಲ್ಲ

ದಿ.ಮಹಾಂತೇಶ್ ಬೀಳಗಿಯವರ ಆದರ್ಶಪ್ರಾಯ ಕಾರ್ಯನಿರ್ವಹಣೆ, ಸೇವೆಗಳ ಹಿನ್ನಲೆಯಲ್ಲಿ, ಇದನ್ನು ವಿಶೇಷ ಪ್ರಕರಣವೆಂದು ರಾಜ್ಯ ಸರ್ಕಾರ ಪರಿಗಣಿಸಬೇಕು. ರಾಜ್ಯ ಸರ್ಕಾರ ಶೀಘ್ರದಲ್ಲಿ ಪೂರಕವಾಗಿ ಮಾನವೀಯ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸುತ್ತೇನೆ ಎಂದು ವಿಜಯೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಜಯೇಂದ್ರ ಪತ್ರದ ವಿವರ

ಬಿ.ವೈ.ವಿಜಯೇಂದ್ರ ಬರೆದಿರುವ ಪತ್ರವು ದಿ. ಶ್ರೀ ಮಹಾಂತೇಶ ಬೀಳಗಿ, ಐಇಎಸ್ ಅಧಿಕಾರಿಯವರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಕ್ಲಾಸ್ -1 ಅಧಿಕಾರಿ ಹುದ್ದೆಯನ್ನು ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದುವುದು ತಮಗೆ ಗೊತ್ತಿರುವ ವಿಚಾರ.

ಒಬ್ಬ ಸರ್ಕಾರಿ ಅಧಿಕಾರಿಯಾಗಿ ಕೇವಲ ಸರ್ಕಾರಿ ಕೆಲಸ ಎಂದು ಪರಿಗಣಿಸಲಾಗಿದೆ ಬಡವರ ಅಶಕ್ತರ ಅಭಿವೃದ್ಧಿಗಾಗಿ ಅಂತಕರಣದಿಂದ ಕೆಲಸ ಮಾಡಿದ ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟು ಜನಸೇವೆಗೈದ ಮಹಾಂತೇಶ್ ಬೀಳಗಿಯವರು ಒಬ್ಬ ಆದರ್ಶ ಅಧಿಕಾರಿಯಾಗಿದ್ದರು. ಅವರ ಆಕಾಲಿಕ ನಿಧನವು ಕೇವಲ ಅವರ ಕುಟುಂಬಕ್ಕೆ ಇಡೀ ಸಮಾಜಕ್ಕೆ ನಷ್ಟವನ್ನುಂಟು ಮಾಡಿದೆ.

ಹಿಂದೆ ಅಧಿಕಾರಿಗಳು ಅಕಾಲಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರಿಗೆ ಕ್ಲಾಸ್-1 ಅಧಿಕಾರಿ ಹುದ್ದೆಗಳಿಗೆ ಹಲವು ನಿದರ್ಶನಗಳಿವೆ. ಅದರಂತೆ ಶ್ರೀ ಮಹಾಂತೇಶ್ ಬೀಳಗಿ ಅವರ ಅಕಾಲಿಕ ನಿಧನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಅವರ ಪತ್ನಿ ಅಥವಾ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಕ್ಲಾಸ್ -1 ಅಧಿಕಾರಿ ಹುದ್ದೆಯನ್ನು ನೀಡುವಂತೆ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಇದಕ್ಕೆ ಸರ್ಕಾರ ಸ್ಪಂದಿಸುತ್ತಾ ಎನ್ನುವುದನ್ನು ಕಾದುಬೋಡಬೇಕಿದೆ.





Source link

Leave a Reply

Your email address will not be published. Required fields are marked *