ಆಸ್ತಿ ನೋಂದಣಿಗೆ ಜನರ ಅಲೆದಾಟ ತಪ್ಪಿಸಲು ಬಜೆಟ್​ನಲ್ಲಿ ಮಹತ್ವದ ಘೋಷಣೆ

ಆಸ್ತಿ ನೋಂದಣಿಗೆ ಜನರ ಅಲೆದಾಟ ತಪ್ಪಿಸಲು ಬಜೆಟ್​ನಲ್ಲಿ ಮಹತ್ವದ ಘೋಷಣೆ


ಆಸ್ತಿ ನೋಂದಣಿಗೆ ಜನರ ಅಲೆದಾಟ ತಪ್ಪಿಸಲು ಬಜೆಟ್ನಲ್ಲಿ ಮಹತ್ವದ ಘೋಷಣೆ

ಬೆಂಗಳೂರು, ಮಾರ್ಚ್ 6: ಆಸ್ತಿ ನೋಂದಣಿ ಸುಧಾರಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕರ್ನಾಟಕ ಸರ್ಕಾರವು 2026ರ ಬಜೆಟ್‌ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದೆ. ಕಚೇರಿಗಳಲ್ಲಿ 72 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಜಿಟಲ್ ಸ್ಟಾಂಪಿಂಗ್ ಘಟಕಗಳನ್ನು ಸ್ಥಾಪಿಸಲಾಗಿದೆ. 50 ಲಕ್ಷಕ್ಕೂ ಹೆಚ್ಚು ಇರುವ ಟಿಪ್ಪಣಿಗಳು ಮತ್ತು ಒಂದು ಕೋಟಿಗೂ ಹೆಚ್ಚು ಅಟ್ಲಾಸ್‌ಗಳನ್ನು ಜಿಐಎಸ್ ತಂತ್ರಾಂಶದ ಮೂಲಕ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ದಿನಾಂಕ.

ತಂತ್ರಾಂಶದಲ್ಲಿನ ತೊಡಕುಗಳನ್ನು ನಿವಾರಿಸಿ, ನೊಂದಣಿ ವ್ಯವಸ್ಥೆಗಳನ್ನು ಇನ್ನಷ್ಟು ಸುಗಮಗೊಳಿಸಲು 65 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ವ್ಯವಸ್ಥೆಯನ್ನು ಕಾಯ್ದಿರಿಸಲಾಗಿದೆ. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಾಗದರಹಿತ ನೊಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಉಪನೊಂದಣಾಧಿಕಾರಿಗಳ ಕಚೇರಿಗಳಿಗೆ ಜನರ ಓಡಾಟವನ್ನು ಕಡಿಮೆ ಮಾಡಲು ‘ನೊಂದಣಿ ಕಾಯ್ದೆ 2025’ಕ್ಕೆ ತಿದ್ದುಪಡಿ ತರಲಾಗಿದೆ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ರಿಮೋಟ್ ನೊಂದಾಣಿ ಮಾಡಲು ಅನುಮತಿಸಲಾಗಿದೆ. ರೇರಾ ಅನುಮೋದಿತ ಯೋಜನೆಗಳ ಖಾಸಗಿ ಸಂಸ್ಥೆಗಳ ರಿಮೋಟ್ ನೊಂದಣಿಗೆ ತಿದ್ದುಪಡಿ ಜಾರಿಗೆ ಅನುಮೋದನೆಗೆ ಕಳುಹಿಸಲಾಗಿದೆ. ಡಿಜಿಟಲ್ ಇ-ಸ್ಟ್ಯಾಂಪಿಂಗ್ ಮತ್ತು ಸಂಪೂರ್ಣ ಕಾಗದರಹಿತ ನೊಂದಣಿಗಾಗಿ ನವೀನ ಪ್ಲಾಟ್‌ಫಾರ್ಮ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ನೊಂದಣಿ ಇಲಾಖೆಯಲ್ಲಿ 2003ಕ್ಕೂ ಹಿಂದಿನ ಲೆಗಸಿ ದಾಖಲೆಗಳನ್ನು ಸಂರಕ್ಷಿಸಲು 207 ಉಪನೊಂದಣಿ ಕಚೇರಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ನಾಗರಿಕರಿಗೆ ಉತ್ತಮ ಅನುಭವ ನೀಡಲು ಪ್ರತಿ ಜಿಲ್ಲೆಯಲ್ಲಿ ಒಂದು ಕಚೇರಿಯನ್ನು ನೊಂದಣಿ ಖಾತರಿ ಕೇಂದ್ರವಾಗಿ ನವೀಕರಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಪ್ರಕಟಿಸಿದ್ದಾರೆ.

ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *