
ಬೆಂಗಳೂರು, ಏಪ್ರಿಲ್ 10: ರಾಜ್ಯದ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (ಕರ್ನಾಟಕ ಉಪಚುನಾವಣೆ 2026) ಮತದಾನ ಗುರುವಾರ ಮುಕ್ತಾಯಗೊಂಡಿದೆ. ಕಳೆದ 15 ದಿನಗಳಿಂದ ನಡೆದ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದ್ದು, ಮತದಾನವೂ ಮುಗಿದಿದೆ. ಮತದಾರ ಪ್ರಭು ತನ್ನ ನಿರ್ಧಾರವನ್ನು ಮತಯಂತ್ರದಲ್ಲಿ ದಾಖಲಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಸಮಾನ ಪ್ರಮಾಣದ ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.
ಮತದಾನದ ಶೇಕಡಾವಾರು ವಿವರ
- ದಾವಣಗೆರೆ ದಕ್ಷಿಣ: ಶೇ 68.55ರಷ್ಟು ಮತದಾನ ದಾಖಲಾಗಿದೆ.
- ಬಾಗಲಕೋಟೆ: ಶೇ.68.73ರಷ್ಟು ಮತದಾನವಾಗಿದೆ.
ಹಣ ಮತ್ತು ಕೋಳಿ ಹಂಚಿಕೆ ಆರೋಪ
ಮತದಾನದ ನಡುವೆ ಮತದಾರರಿಗೆ ಆಮಿಷ ಒಡ್ಡಿದ ಹಲವು ಪ್ರಕರಣಗಳು ವರದಿಯಾಗಿವೆ. ಬಾಗಲಕೋಟೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಜಾಫರ್ ಬೇಫಾರಿ ಎಂಬ ಹಣ ಹಂಚುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ನವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಾಂಬೆ ಕಾಲೋನಿಯಲ್ಲಿ ಮಹಿಳೆಯೊಬ್ಬರು ತನಗೆ ಕಾಂಗ್ರೆಸ್ನವರು 500 ರೂ. ಎಂದು ಹಣ ಪ್ರದರ್ಶಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಇತ್ತ ಹಳೇಪೇಟೆಯಲ್ಲಿ ಹಣ ಹಂಚಲು ಮನೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ಹಿಂಬದಿಯಿಂದ ಲಾಕ್ ಮಾಡಿದರೂ, ಅವರನ್ನು ಹಿಂಬಾಲಿಸಿಕೊಂಡು ಎಸ್ಕೇಪ್ ಆಗಿದ್ದಾರೆ.
ಇನ್ನು ದಾವಣಗೆರೆಯಲ್ಲಿ ವಿಭಿನ್ನ ಆಮಿಷದ ಆರೋಪ ಕೇಳಿಬಂದಿದೆ. ಎಸ್ಪಿಎಸ್ನಲ್ಲಿ ಹಣ ಹಂಚಿಕೆಯ ವಿಡಿಯೋ ವೈರಲ್ ಆಗಿದೆ, ಮತ್ತೊಂದೆಡೆ ಕಾಂಗ್ರೆಸ್ನವರು ಮತಕ್ಕಾಗಿ ‘ಕೋಳಿ’ ಹಂಚಿದ್ದಾರೆ ಎಂದು ಬಾಲಕರು ಹೇಳುತ್ತಿರುವ ವಿಡಿಯೋವನ್ನು ಬಿಜೆಪಿ ಮುಖಂಡ ವಿನಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ ಉಪಚುನಾವಣೆ: ಮತದಾನ ಮಾಡಲು ಗೋವಾದಿಂದ ಎರಡು ಬಸ್ಗಳಿಗೆ ಬಂದ 80 ಮತದಾರರು!
ಈ ಎಲ್ಲಾ ಜಿದ್ದಾಜಿದ್ದಿಗಳ ನಡುವೆ, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.
ವರದಿ: ಬಸವರಾಜ್ ದೊಡ್ಮನಿ, ರವಿಮೂಕಿ
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ