ಸಿಎಂ ಕುರ್ಚಿ ಕದನ: ಅಖಾಡಕ್ಕಿಳಿದ ಡಿಕೆ ಬ್ರದರ್ಸ್​; ಕೊಟ್ಟ ಮಾತಿನ ವಿಚಾರ ಮತ್ತೆ ಮುನ್ನೆಲೆಗೆ

ಸಿಎಂ ಕುರ್ಚಿ ಕದನ: ಅಖಾಡಕ್ಕಿಳಿದ ಡಿಕೆ ಬ್ರದರ್ಸ್​; ಕೊಟ್ಟ ಮಾತಿನ ವಿಚಾರ ಮತ್ತೆ ಮುನ್ನೆಲೆಗೆ


ಸಿಎಂ ಕುರ್ಚಿ ಕದನ ಮತ್ತೆ ಮುನ್ನೆಲೆಗೆಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ಬೆಂಗಳೂರು, ಫೆಬ್ರವರಿ 11: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಫೈಟ್ ಮತ್ತೆ ಮುನ್ನೆಲೆಗೆ ಬಂದಿದ್ದು ಅತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಹಾರಿದ್ದಾರೆ, ಇತ್ತ ಡಿ.ಕೆ. ಸುರೇಶ್ ಸಹೋದರನ ಪರ ಅಖಾಡಕ್ಕಿಳಿದಿದ್ದಾರೆ. ಕೊಟ್ಟ ಮಾತಿನ ವಿಚಾರವನ್ನು ಮತ್ತೆ ಕೊಟ್ಟಿರುವ ಮಾಜಿ ಸಂಸದ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ನಿಧಾನವಾದರೂ ಪರವಾಗಿಲ್ಲ ಮಾತನ್ನು ಉಳಿಸಿಕೊಳ್ತಾರೆ. ಆ ಬಗ್ಗೆ ನನಗೆ ಭರವಸೆ ಇದೆ.

ಡಿಕೆಶಿ ಪರ ಸಹೋದರನ ಬ್ಯಾಟಿಂಗ್


ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಕಾಂಗ್ರೆಸ್ ಎಲ್ಸಿ ಯತೀಂದ್ರ ಹೇಳಿಕೆ ಸಂಬಂಧವೂ ವ್ಯಂಗ್ಯವಾಡಿರುವ ಸುರೇಶ್, ಅವರು ಅದೇ ವೇದ ವಾಕ್ಯವನ್ನು ಹೇಳಿದರು. ಕಾಂಗ್ರೆಸ್ ಪಕ್ಷದ ಕೆಲವರಿಗೆ ಡಿಕೆಶಿ ವಿದೇಶ ಪ್ರವಾಸ ನಡೆಸಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿದೇಶಕ್ಕೂ ಪ್ರವಾಸ ಡಿ.ಕೆ.ಶಿವಕುಮಾರ್ ಅವರಿಗೂ ಸಂಬಂಧವಿಲ್ಲ. ಯಾರು ವಿದೇಶ ಪ್ರವಾಸ ಹೋಗ್ತಿದ್ದಾರೆ ಅವರನ್ನೇ ನೀವು ಕೇಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ; ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್ ಗೆ ಬಣಗಳ ಸಿದ್ಧತೆ

‘ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ’

ನಿಗಮ ಮಂಡಳಿಯಲ್ಲಿ ಬಿಜೆಪಿ ಮುಖಂಡನಿಗೆ ಸ್ಥಾನ ನೀಡಿದ ವಿಚಾರವಾಗಿಯೂ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಗೌರವಿಸುತ್ತದೆ ಅಂತಾಯ್ತಲ್ಲ. ರಾಜ್ಯ ಸರ್ಕಾರ ಎಲ್ಲರನ್ನೂ ಕೂಡ ಸೇರಿಸಬೇಕು. ಕಾಂಗ್ರೆಸ್ ಪಕ್ಷದ್ದು ಸರ್ವಧರ್ಮ ಪಾಲಿಸಿ ಅಲ್ವಾ? ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ನಮ್ಮ ಪಕ್ಷದಲ್ಲೇ ಇದ್ದಾರೆ. ಹೀಗಾಗಿ ಎಲ್ಲ ವಿಚಾರದಲ್ಲೂ ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇ ಆದ್ಯತೆ ನೀಡಲಾಗುವುದು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *