Headlines

ಕುರ್ಚಿ ಕದನದ ನಡುವೆ ಪೋಸ್ಟ್​ ಕಾಳಗ: ಡಿಕೆಶಿಗೆ ಸಿದ್ದರಾಮಯ್ಯ ನೇರಾನೇರ ಕೌಂಟರ್

ಕುರ್ಚಿ ಕದನದ ನಡುವೆ ಪೋಸ್ಟ್​ ಕಾಳಗ: ಡಿಕೆಶಿಗೆ ಸಿದ್ದರಾಮಯ್ಯ ನೇರಾನೇರ ಕೌಂಟರ್


ಬೆಂಗಳೂರು, ನವೆಂಬರ್ 27: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಕುರ್ಚಿ ಕಾಳಗ ಈಗ ಪೋಸ್ಟ್ ವಾರ್ ತನಕ ತಲುಪಿದೆ. ಕೊಟ್ಟ ಮಾತಿನ ಶಕ್ತಿಯೇ ಶಕ್ತಿ ಎಂಬ ಡಿಕೆಶಿ ಪೋಸ್ಟ್‌ಗೆ ಸಿದ್ದರಾಮಯ್ಯ ನೇರಾ ನೇರ ಕೌಂಟರ್ ಕೊಟ್ಟಿದ್ದಾರೆ. ಆ ಮೂಲಕ ಪಟ್ಟದ ಕದನ ಮತ್ತೊಂದು ಹಂತ ತಲುಪಿದೆ. ಕರ್ನಾಟಕದ ಜನತೆಗೆ ನಾವು ಕೊಟ್ಟ ಮಾತು ಕೇವಲ ತಮ್ಮ ಅಲ್ಲ, ನಾವು ಜನತೆಗೆ ಕೊಟ್ಟ ಮಾತೇ ನಮಗೆ ಜಗತ್ತು ಎಂದು ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರೋದು ಸಂಚಲನ ಮೂಡಿಸಿದೆ.

ಸಿದ್ದರಾಮಯ್ಯ ಪೋಸ್ಟ್‌ನಲ್ಲಿ ಏನಿದೆ?

ಮಾತು ಎಂದರೆ ಶಕ್ತಿ ಅಲ್ಲ, ಅದು ಜನರ ಹಿತಕ್ಕಾಗಿ ಲೋಕವನ್ನು ಉತ್ತಮಗೊಳಿಸಿದಾಗ ಮಾತ್ರ ಶಕ್ತಿಯಾಗುತ್ತದೆ. ನಮ್ಮ ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಪ್ರಯಾಣಗಳನ್ನು ನೀಡುವ ಶಕ್ತಿ ಯೋಜನೆ ಯಶಸ್ಸನ್ನು ಘೋಷಿಸುವ ಹೆಮ್ಮೆ ನನಗಿದೆ. ಸರ್ಕಾರ ರಚಿಸಿದ ಮೊದಲ ತಿಂಗಳಲ್ಲೇ ನಾವು ನಮ್ಮ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ. ನನ್ನ ಮೊದಲ ಅವಧಿಯಲ್ಲಿ (2013–18) ನೀಡಿದ 165 ಭರವಸೆಗಳ ಮೇಲೆ 157, ಅಂದರೆ ಶೇ. 95ಕ್ಕೂ ಹೆಚ್ಚನ್ನು ಸಂಗ್ರಹಿಸಿದ್ದೇವೆ. ಈ ಅವಧಿಯಲ್ಲಿ 593 ಭರವಸೆಗಳಲ್ಲಿ 243 ಹೆಚ್ಚು ಲಭ್ಯವಿದೆ. ಉಳಿದ ಎಲ್ಲ ಭರವಸೆಯನ್ನೂ ಬದ್ಧತೆ, ನಂಬಿಕೆ, ಮತ್ತು ಕಾಳಜಿಯೊಂದಿಗೆ ಖಚಿತವಾಗಿ ಪೂರೈಸದಿದ್ದರೆ ಎಂದು ಸಿಎಂ ಹೇಳಿದ್ದಾರೆ. ಕರ್ನಾಟಕದ ಜನತೆ ಕೊಟ್ಟ ಆದೇಶವು ಒಂದು ಕ್ಷಣಿಕ ವಿಶ್ವಾಸವಲ್ಲ ,ಅದು ಐದು ವರ್ಷಗಳ ಪೂರ್ಣ ಹೊಣೆ. ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವು, ಸಹಾನುಭೂತಿ, ಸತತವಾಗಿ, ಮತ್ತು ಧೈರ್ಯ ಎಂಬ ಮೌಲ್ಯ ಜನರಿಗಾಗಿ ಮಾತಿನಂತೆ ನಡೆದುಕೊಳ್ಳುತ್ತಿದೆ. ಕರ್ನಾಟಕಕ್ಕೆ ನೀಡಿದ ನಮ್ಮ ಮಾತು ಒಂದು ಘೋಷಣೆ ಅಲ್ಲ, ಅದೇ ನಮಗೆ ಜಗತ್ತು ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ ಅಹಿಂದ ನಾಯಕರು

ಡಿಕೆಶಿ ಮಾಡಿದ್ದ ಪೋಸ್ಟ್‌ನಲ್ಲಿ ಏನಿತ್ತು?

ಪಟ್ಟದಾಟದ ನಡುವೆ ಇಂದು ಬೆಳಗ್ಗೆಯಷ್ಟೇ ಡಿಸಿಎಂ ಡಿಕೆಶಿ ಮಾರ್ಮಿಕವಾಗಿ ಪೋಸ್ಟ್ ಮಾಡಲಾಗಿತ್ತು. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿ ದೊಡ್ಡ ಶಕ್ತಿ ಎಂದು ಹೇಳುವ ಮೂಲಕ, ಕೊಟ್ಟ ಮಾತನ್ನು ಮತ್ತೆ ನೆನಪಿಸಿದ್ದರು. ಯಾರೇ ಆಗಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ಜಡ್ಜ್ ಆಗಲಿ, ಅಧ್ಯಕ್ಷರಾಗಲಿ, ಯಾರೇ ಆಗಿರಲಿ. ನನ್ನನ್ನು ಸೇರಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಬರೆದುಕೊಂಡಿದ್ದರು. ಆದರೆ ಈ ವಿಚಾರವಾಗಿ ಮಾಧ್ಯಮಗಳನ್ನು ಪ್ರಶ್ನಿಸಿದಾಗ ನಾನು ಆ ರೀತಿ ಪೋಸ್ಟ್ ಮಾಡಿಲ್ಲ ಎಂದು ಡಿಕೆಶಿ ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:21 pm, ಗುರುವಾರ, 27 ನವೆಂಬರ್ 25





Source link

Leave a Reply

Your email address will not be published. Required fields are marked *