ಕೋಲಾರ, ಜ.10: ಕೋಲಾರ ಸೇರಿದಂತೆ ರಾಜ್ಯದಲ್ಲಿ ಚಳಿ ಹೆಚ್ಚಾಗುತ್ತಿದೆ. ಶೀತ ವಾತಾವರಣ ಇರುವ ಕಾರಣ ಚಳಿಗೆ ಹೊರಬರಲು ಆಗುತ್ತಿಲ್ಲ. ಕೋಲಾರದಲ್ಲಿ ಈ ಚಳಿ ವಾತಾವರಣಕ್ಕೆ ಮಾಂಸ ಹಾಗೂ ಮೊಟ್ಟೆಯ ಬೆಲೆ ಕೂಡ ಏರಿಕೆಯಾಗಿದೆ. ಚಳಿಯಿಂದ ಕೋಳಿಗಳು ಕೂಡ ಮೊಟ್ಟೆ (ಕೋಳಿ ಮೊಟ್ಟೆಯ ಬೆಲೆಗಳು) ಇಡುತ್ತಿಲ್ಲ, ಇದರಿಂದ ಮೊಟ್ಟೆ ಹಾಗೂ ಕೋಳಿ ಮಾಂಸಕ್ಕೆ ದರ ಏರಿಕೆಯಾಗಿದೆ. ಇದೀಗ ಈ ಬೆಲೆ ಏರಿಕೆ ಬಿಸಿ ಮಾಂಸ ಪ್ರಿಯರಿಗೆ ತಟ್ಟಿದೆ ಎಂದು ಹೇಳಲಾಗಿದೆ. ಕೋಳಿ ಫಾರಂಗಳಲ್ಲಿ ಈ ಚಳಿಗೆ ಕೋಳಿಗಳು ನಡುಗುತ್ತಿವೆ. ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ಚಳಿ ವಾತಾವರಣದಿಂದ ಕೋಳಿಗಳು ಮೊಟ್ಟೆ ಇಡುತ್ತಿಲ್ಲ. ಒಂದು ಕೆಜಿ ಚಿಕನ್ ಬೆಲೆ 280 ರಿಂದ 300 ರೂಪಾಯಿಗೆ ಏರಿಕೆ ಕಂಡಿದೆ, 180 ರಿಂದ 200 ರೂಪಾಯಿ ಇದ್ದ ಚಿಕನ್ ಬೆಲೆ ಈಗ ಏಕಾಏಕಿ ಏರಿಕೆ ಕಂಡಿದೆ. ಈ ಬೆಲೆ ಏರಿಕೆಗೆ ಕಾರಣ ಶೀತ ವಾತಾವರಣ ಎಂದು ಹೇಳಲಾಗಿದೆ. ಈ ವಾತಾವರಣದಿಂದ ಕೋಳಿ ಫಾರಂಗಳಲ್ಲಿ ಕೋಳಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ.
2.2 ಕೆಜಿ ತೂಕ ಬರಬೇಕಿದ್ದ ಕೋಳಿ ಕೇವಲ 1.8 ಕೆಜಿ ತೂಕ ಬರುತ್ತಿದೆ, ಜೊತೆಗೆ ಕೋಳಿ ಮೊಟ್ಟೆ ಕೂಡ ದರ ಏರಿಕೆಯಾಗಿದೆ. ಒಂದು ತಿಂಗಳಿನಲ್ಲಿ 28 ರಿಂದ 30 ಮೊಟ್ಟೆ ಇಡುವ ಕೋಳಿಗಳು ಸದ್ಯದ ವಾತಾವರಣದ ಎಫೆಕ್ಟ್ ನಿಂದಾಗಿ 22 ರಿಂದ 24 ರವರೆಗೆ ಮೊಟ್ಟೆ ಇಡುತ್ತಿದೆ ಎಂದು ಹೇಳಲಾಗಿದೆ. ಇದು ಗ್ರಾಹಕರು ಮತ್ತು ಮಾರಾಟಗಾರರ ಮೇಲೆ ದೊಡ್ಡ ಮಟ್ಟದ ಉಂಟು ಮಾಡಿದೆ. ಚಳಿಯ ವಾತಾವರಣದಿಂದಾಗಿ ಮಾಂಸ ಸೇವೆಯ ಪ್ರಮಾಣವು ಸಹ ಖಂಡಿತವಾಗಿಯೂ ಹೆಚ್ಚು ಬೇಡಿಕೆಯಿಲ್ಲದ ಉತ್ಪಾದನೆ ಸಿಗುತ್ತಿಲ್ಲ. ಈ ಕಾರಣಕ್ಕೆ ಬೆಲೆ ಏರಿಕೆಯಾಗಿದೆ.
ಇದನ್ನೂ ಓದಿ; ರೈಲು ಪ್ರಯಾಣಿಕರಿಗೆ ಮಕರ ಸಂಕ್ರಾಂತಿಗೆ ಸಿಹಿಸುದ್ದಿ: ಬೆಂಗಳೂರಿಗೆ ಹೋಗುವ ವಿಶೇಷ ರೈಲು
ಕೋಳಿ ಬೆಳವಣಿಗೆಗೂ ಏನು ಸಂಬಂಧ:
ಕೋಳಿಯ ಆಹಾರ ಮತ್ತು ಚಳಿಗೂ ಏನು ಎಂಬ ಪ್ರಶ್ನೆ ಮೂಡುವುದು ಸಹಜ, ಇಲ್ಲಿದೆ ನೋಡಿ ಕಾರಣ, ಕೋಳಿಗಳಿಗೆ ಸರಿಯಾದ ಸಮಯಕ್ಕೆ ನೀರು, ಔಷಧ ಎಲ್ಲವೂ ಸರಬರಾಜಾದರೂ ಚಳಿಗಾಲದಲ್ಲಿ ಶೀತದ ವಾತಾವರಣ ಇರುವ ಕಾರಣ ಸೂರ್ಯನ ಬೆಳಕು ಇರುವುದಿಲ್ಲ. ಇದರಿಂದ ಬಿಸಿಲಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರೊಂದಿಗೆ ಸಂಜೆ ಬೇಗ ಕತ್ತಲಾಗುತ್ತಿದೆ. ಬೆಳಿಗ್ಗೆ ತಡವಾಗಿ ಬೆಳಕಾಗೋದರಿಂದ ಸೂರ್ಯನ ಬಿಸಿಲಿಲ್ಲದ ಕಾರಣ ಕೋಳಿಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ಈ ಬೆಲೆ ಏರಿಕೆಯಿಂದ ಗ್ರಾಹಕರು ಮಾಂಸ ಹಾಗೂ ಖರೀದಿ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಹೀಗೆ ಜನರ ಯೋಚನೆ ಬದಲಾಗಿದೆ. 300 ರೂ. ಕೊಟ್ಟ ಕೋಳಿ ಮಾಂಸ ತಿನ್ನುವ ಬದಲು. ಮಟನ್ ತಿನ್ನಬಹುದಲ್ಲ ಎಂದು ಯೋಚಿಸುತ್ತಿದೆ. ಒಟ್ಟಾರೆಯಾಗಿ ಈ ಮೊಟ್ಟೆಯ ಬೆಲೆ ಏರಿಕೆಯಿಂದ ಚಿಕನ್ ಹಾಗೂ ಬೇಡಿಕೆ ಕಡಿಮೆಯಾಗಿದೆ. ಆದರೆ ಅಲ್ಲಿಗೆ ಕೋಳಿ ಫಾರಂಗೆ ಯಾವುದೇ ನಷ್ಟವಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:21 pm, ಶನಿ, 10 ಜನವರಿ 26