Headlines

ನಾಯಕತ್ವ ಜಂಜಾಟದ ನಡುವೆ ಸದ್ದು ಮಾಡಿದ ಶಾಸಕರ ಫಾರಿನ್ ಟ್ರಪ್: ಈ ಪ್ರವಾಸದ ಹಿಂದಿನ ಗುಟ್ಟೇನು?

ನಾಯಕತ್ವ ಜಂಜಾಟದ ನಡುವೆ ಸದ್ದು ಮಾಡಿದ ಶಾಸಕರ ಫಾರಿನ್ ಟ್ರಪ್: ಈ ಪ್ರವಾಸದ ಹಿಂದಿನ ಗುಟ್ಟೇನು?


ಬೆಂಗಳೂರು, (ಫೆಬ್ರವರಿ 11): ಕರ್ನಾಟಕ (ಕರ್ನಾಟಕ) ಕಾಂಗ್ರೆಸ್ ಶಾಸಕರಿಗೆ ವಿದೇಶ ಪ್ರವಾಸ (ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ) ಯೋಗ ಬಂದಿದ್ದು, ಅಧ್ಯಯನ ನಿಮಿತ್ತ ಫಾರಿನ್ ಟೂರ್ ಯೋಜನೆ ಮಾಡಲಾಗಿದೆ. ಪಶುಸಂಗೋಪನಾ ಇಲಾಖೆಯಿಂದ ಅಧ್ಯಯನ ಪ್ರವಾಸ ಪ್ರಾರಂಭವಾಯಿತು, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನ ಶಾಸಕರು ಕಳುಹಿಸಲು ತೀರ್ಮಾನಿಸಲಾಗಿದೆ. ಅಧುನಿಕ ಪದ್ಧತಿ ಅಳವಡಿಕೆ ಹಾಗೂ ಪಶುಸಂಗೋಪನ ಇಲಾಖೆ ಉನ್ನತೀಕರಣದ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಈಗ ನಾಯಕತ್ವ ಯುದ್ದ ನಡೆಯುತ್ತಿದೆ. ಇಂತಹ ಸಮಯದಲ್ಲಿ ಶಾಸಕರು ಅವರ ನಾಯಕರ ಪರ ಮಾತು ಕೂಡ ಆಡುತ್ತಿದ್ದಾರೆ.. ಇಂತಹ ಸಮಯದಲ್ಲಿ ಬರೋಬ್ಬರಿ 25 ಶಾಸಕರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಟೂರ್ ನಡೆಸಲು ಸಜ್ಜಾಗಿದ್ದಾರೆ. ಆದರೆ ಇದರ ಹಿಂದಿರೋ ರಾಜಕೀಯ ಕಾರಣದ ಗುಟ್ಟನ್ನ ಶಾಸಕರು ಬಿಟ್ಟು ಕೊಡುತ್ತಿಲ್ಲ.. ಫೆಬ್ರವರಿ 16 ರಂದು ಮಾರ್ಚ್ 3 ರವರೆಗೂ ಟೂರ್ ಗೆ ಪ್ಲಾನ್ ಮಾಡಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ: ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್‌ಗೆ ಬಣಗಳ ಸಿದ್ಧತೆ

ವಿದೇಶ ಪ್ರವಾಸಕ್ಕೆ ಹೋಗುವವರು ಯಾರು?

ಸಿದ್ದರಾಮಯ್ಯ ಆಪ್ತ ಪಶುಸಂಗೋಪನೆ ಸಚಿವ ವೆಂಕಟೇಶ್ ನೇತೃತ್ವದಲ್ಲಿ ಪ್ರವಾಸ ಕೈಗೊಂಡಿದ್ದು, ಫೆ.16ರಂದು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸಕ್ಕೆ ಕಾಂಗ್ರೆಸ್ 25 ಶಾಸಕರಿಗೆ ಟಿಕೆಟ್ ಬುಕ್ ಆಗಿದೆ. ಸಚಿವ ವೆಂಕಟೇಶ್, ಶಾಸಕರಾದ ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು, ರಾಘವೇಂದ್ರ ಹಿಟ್ನಾಳ್, ಯಶವಂತರಾಯಗೌಡ ಪಾಟೀಲ್, ಬಿ.ಎಂ.ನಾಗರಾಜು, ಜೆ.ಟಿ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬಸವನಗೌಡ ದದ್ದಲ್, ಬಸವನಗೌಡ ತುರವಿಹಾಳ್, ಎ.ಆರ್.ಕೃಷ್ಣಮೂರ್ತಿ ಸೇರಿ 25 ಶಾಸಕರು ವಿದೇಶಕ್ಕೆ ಹೋಗುತ್ತಿದ್ದಾರೆ.

ಶಾಸಕರ ಫಾರಿನ್ ಟ್ರಿಪ್ ವಿಚಾರದಲ್ಲಿ ಸಿದ್ದರಾಮಯ್ಯ ಸಿಎಂ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ. ಶಾಸಕರು ಅವರ ಸ್ವಂತ ದುಡ್ಡಿನಲ್ಲಿ ಹೋದ್ರೆ ನಾನು ಬೇಡ ಅನ್ನೋಕೆ ಆಗುತ್ತಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. MLA ಗಳು, MLC ಗಳು ಅವರ ಸ್ವಂತ ದುಡ್ಡಿನಲ್ಲಿ ಹೋಗುತ್ತಿದ್ದಾರೆ. ಶಾಸಕರು ಫಾರಿನ್ ಟ್ರಿಪ್ ಹೋಗುವುದು ನನ್ನ ಗಮನಕ್ಕೆ ಇಲ್ಲ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ನೋಡಿ: ಬಜೆಟ್ ನಡುವೆ ಶಾಸಕರಿಂದ ವಿದೇಶ ಪ್ರವಾಸ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ ಆಪ್ತ

ಈ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಶಾಸಕರು ಯಾವಾಗ ಬೇಕಾದರೂ ಪ್ರವಾಸಕ್ಕೆ ಹೋಗಬಹುದು. ಅದಕ್ಕೆ ಅಡ್ಡಿ ಇಲ್ಲ ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇತ್ತ ಡಿಸಿಎಂ ಡಿಕೆ ಸಹೋದರ ಡಿಕೆ ಸುರೇಶ್ ಅವರಂತೂ, ಡಿಕೆ ಗೂ ಮತ್ತು ಫಾರೇನ್ ಪ್ರವಾಸಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಬದಲಿಗೆ ಬೇಕಂತಲೇ ಡಿಕೆಗೆ ಕೆಟ್ಟ ಹೆಸರು ತರೀ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು

ಇತ್ತ ಡಿಕೆ ಬಣದಲ್ಲಿ ಗುರುತಿಸಿಕೊಂಡಿರೋ ಶಾಸಕ ಬಾಲಕೃಷ್ಣ ಬೇರೆಯದ್ದೇ ರೀತಿ ಮಾತನಾಡಿದ್ದಾರೆ. ನನಗೂ ಕರೆದಿದ್ದರ, ನಾನು ಹೋಗಲ್ಲ ಅಂದೆ. ಪಶುಸಂಗೋಪನೆ ಅಧ್ಯಯನ ಅಂತ’ ಹೋಗ್ತಿದ್ದಾರೆ. ಹಾಲು ಎಷ್ಟು ಕರೆಯುತ್ತೆ ಅನ್ನೋದನ್ನ ನೋಡಿಕೊಂಡು ಬರಲು ಹೋಗ್ತಿದ್ದಾರೆ ಎಂದು ಲೇವಡಿ ಮಾಡಿದರು. ಯಾವುದೇ ವಿದೇಶಿ ಪ್ರವಾಸದಲ್ಲಿ ಯಾವುದೇ ರಾಜಕೀಯ ಕಾರಣವಿಲ್ಲ ಎಂದು ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಅತ್ತ ನಾನು ಯಾವ ಬಣವೂ ಇಲ್ಲ.. ಕಾಂಗ್ರೆಸ್ ನಮ್ಮ ಬಣ, ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಆಗಿದೆ ಅಂತ ಕೋನರೆಡ್ಡಿ ಹೇಳಿದ್ದಾರೆ.

ಇಷ್ಟೆಲ್ಲದರ ನಡುವೆ, ಕಾಂಗ್ರೆಸ್ ಶಾಸಕರ ಫಾರಿನ್ ಟೂರ್, ಬಿಜೆಪಿ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಶಾಸಕರು ಭ್ರಮನಿರಸನ ಆಗಿದ್ದಾರೆ. ಅದಕ್ಕೆ ಫಾರಿನ್ ಟೂರ್ ಹೋಗುತ್ತಿದ್ದಾರೆ. ಈ ಸರ್ಕಾರ ಸ್ವಯಂ ಕೃತಾಪರಾಧದಿಂದ ಕುಸಿದು ಬೀಳುತ್ತದೆ. ಹೀಗಾಗಿ ಫಾರಿನ್ ಟೂರ್ ಗೂ ಹೋಗುತ್ತಾರೆ, ರಾಜಕಾರಣವನ್ನೂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಶಾಸಕರ ವಿದೇಶ ಪ್ರವಾಸಕ್ಕೆ ಎಕ್ಸ್ ಖಾತೆಯಲ್ಲಿ ಜೆಡಿಎಸ್ ಟೀಕೆ ಮಾಡಿದೆ. ಪಟ್ಟಕ್ಕಾಗಿ ದೆಹಲಿ ಯಾತ್ರೆಯಲ್ಲಿರುವ ಡಿಕೆ ಶಿವಕುಮಾರ್ ಹೇಗಾದರೂ ಮಾಡಿ ಕುಳಿತುಕೊಳ್ಳಬೇಕು ಎಂದು ಹೈಕಮಾಂಡ್ ಹಿಂದೆ ಬಿದ್ದಿದ್ದಾರೆ.

ಬಜೆಟ್‌ನಲ್ಲಿ ಸಿಗುವ ಅನುದಾನಕ್ಕಿಂತ ಫಾರಿನ್ ಟೂರ್‌ನಲ್ಲಿ ಸಿಗುವ ‘ಸಮಾಧಾನ’ ದೊಡ್ಡದು ಅಂತ ಕೆಲ ಶಾಸಕರು ವಿಮಾನ ಹತ್ತಲು ರೆಡಿ ಮಾಡಿದ್ದಾರೆ. ಸಿದ್ದರಾಮಯ್ಯ ವರ್ಸಸ್ ಡಿಕೆಶಿ ಬಣಗಳ ರಾಜಕೀಯದ ಮಧ್ಯೆ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಾಗಿದ್ರೆ, ಅಸಲಿ ಆಟವೆಲ್ಲಾ ಶಾಸಕರ ಹೈಜಾಕ್ ರಾಜಕಾರಣವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬರೀ “ಕುರ್ಚಿ ಉಳಿಸಿಕೊಳ್ಳುವ”, “ಕುರ್ಚಿ ಕಿತ್ತುಕೊಳ್ಳುವ” ಬೃಹನ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅಧಿಕಾರಿಗಳು ಲಂಚವಿಲ್ಲದೇ ಯಾವುದೇ ಕೆಲಸ ಕಾರ್ಯಗಳನ್ನು ಮಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದೆ..

ಅದೇನೇ ಹೇಳಿ, ಶಾಸಕರು ಫ್ಯಾಮಿಲಿ ಟ್ರಿಪ್, ಈಗ ಹೊಸ ದಾರಿಯಲ್ಲಿ ರಿಬ್ಬನ್ ಕಟ್ ಮಾಡಿದೆ. ಇದು ಮತ್ತೊಂದು ಕಾಳಗಕ್ಕೆ ಶುಭಾರಂಭನಾ ಎಂಬ ಪ್ರಶ್ನೆಯೂ ಹುಟ್ಟುಹಾಕಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *