ವಿದೇಶಕ್ಕೆ ಹೋಗುವುದನ್ನು ನಾವು ಸಿಎಂಗೇ ಹೇಳಿಲ್ಲ, ಇನ್ನು ಡಿಸಿಎಂಗೆ ಹೇಳ್ತೇವಾ: ಕಾಂಗ್ರೆಸ್​ ಶಾಸಕ ಪುಟ್ಟರಂಗಶೆಟ್ಟಿ

ವಿದೇಶಕ್ಕೆ ಹೋಗುವುದನ್ನು ನಾವು ಸಿಎಂಗೇ ಹೇಳಿಲ್ಲ, ಇನ್ನು ಡಿಸಿಎಂಗೆ ಹೇಳ್ತೇವಾ: ಕಾಂಗ್ರೆಸ್​ ಶಾಸಕ ಪುಟ್ಟರಂಗಶೆಟ್ಟಿ


ಬೆಂಗಳೂರು, ಫೆ.18: ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಹೋಗಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿದ್ದಾರೆ. “ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿದ್ದೇನೆ, ನನ್ನೊಂದಿಗೆ ಯಾರು ಬರುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ, ನಾನಾ ಹೊಯ್ತೀನಿ” ಎಂದು ಹೇಳಿದರು.” ನಾನು ಮೋಜು ಮಾಡುತ್ತಿದ್ದೇನೆ. ಬಜೆಟ್ ಸಂದರ್ಭದಲ್ಲಿ ಈ ಪ್ರವಾಸ ಅನಿವಾರ್ಯವೇ ಎಂಬ ಮಾಧ್ಯಮಗಳ ಪ್ರಶ್ನೆಗೆ, “ಬಜೆಟ್ ನಾನೇನು ಆಯ್ತು, ಸಿದ್ದರಾಮಯ್ಯನವರು ಮಂಡಿಸುತ್ತಾರೆ. ಮಂಡಿಸಿದ ನಂತರ ಬಂದುಬಿಡುತ್ತೇನೆ” ಎಂದು ಹೇಳಿದರು. ಈ ಪ್ರವಾಸಕ್ಕೆ ಹೈಕಮಾಂಡ್ ಅನುಮತಿ ನೀಡಿದ್ದೀಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅದೆಲ್ಲ ಯಾತಕ್ಕೆ ಬೇಕು ನಾವು ಹೋಗೋದಕ್ಕೆ?” ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರಶ್ನಿಸಿದಾಗ, “ಅದು ನನಗೆ ಗೊತ್ತಿಲ್ಲ. ಎಂದು ಹೇಳಿದ್ದಾರೆ. ಇದು ನನ್ನ ವೈಯಕ್ತಿಕ ಪ್ರವಾಸ. ಖರ್ಚು ಎಲ್ಲ ನನ್ನದೇ” ಎಂದು ಶಾಸಕರು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *