ಕುರ್ಚಿ ಕದನದ ಮಧ್ಯೆ ಸಚಿವ ಸಂಪುಟ ಪುನಾರಚನೆಗೆ ಕೂಗು: ಡಿಕೆ ಶಿವಕುಮಾರ್ ದೆಹಲಿ ಟೂರ್‌, ಇತ್ತ ಹೋಟೆಲ್‌ನಲ್ಲಿ ಶಾಸಕರಿಂದ ಡಿನ್ನರ್‌!

ಕುರ್ಚಿ ಕದನದ ಮಧ್ಯೆ ಸಚಿವ ಸಂಪುಟ ಪುನಾರಚನೆಗೆ ಕೂಗು: ಡಿಕೆ ಶಿವಕುಮಾರ್ ದೆಹಲಿ ಟೂರ್‌, ಇತ್ತ ಹೋಟೆಲ್‌ನಲ್ಲಿ ಶಾಸಕರಿಂದ ಡಿನ್ನರ್‌!


ಕುರ್ಚಿ ಕದನದ ಮಧ್ಯೆ ಸಚಿವ ಸಂಪುಟ ಪುನಾರಚನೆಗೆ ಕೂಗು: ಡಿಕೆ ಶಿವಕುಮಾರ್ ದೆಹಲಿ ಟೂರ್‌, ಇತ್ತ ಹೋಟೆಲ್‌ನಲ್ಲಿ ಶಾಸಕರಿಂದ ಡಿನ್ನರ್‌!

ಬೆಂಗಳೂರು, ಮಾರ್ಚ್ 18: ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್ ಸಭೆಗಳ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಕಾಂಗ್ರೆಸ್‌ ಕುರ್ಚಿ ಕದನದ ಮಧ್ಯೆ ಸೈಲೆಂಟಾಗಿ ತೆರೆಮರೆಯಲ್ಲಿ ತಂತ್ರಗಾರಿಕೆ ನಿಲ್ಲುತ್ತಿಲ್ಲ. ಒಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ರೆ ಇತ್ತ ಶಾಸಕರ ಡಿನ್ನರ್ ಸಭೆ ಸರಣಿ ಮುಂದುವರಿದಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಮೊದಲ ಬಾರಿಗೆ ಮತ್ತು 2ನೇ ಬಾರಿಗೆ ಆಯ್ಕೆಯಾದ ಶಾಸಕರು ಮಂಗಳವಾರ ರಾತ್ರಿ ಡಿನ್ನರ್‌ ಸಭೆ ಸೇರಿದ್ರು. ಕಳೆದ ವಾರವಷ್ಟೇ ಮೂರ್ನಾಲ್ಕು ಬಾರಿ ಆಯ್ಕೆಯಾದ ಹಿರಿಯ ಶಾಸಕರ ಸಭೆ ನಡೆದಿತ್ತು. ಇದರ ಭಾಗವಾಗಿ ಶಾಸಕರ ಮತ್ತೊಂದು ಡಿನ್ನರ್‌ ಮೀಟಿಂಗ್‌ ನಡೆದಿದೆ. ಅಚ್ಚರಿಯೆಂದರೆ, ಈ ಸಭೆಯಲ್ಲಿ ಸಿಎಂ ಮತ್ತು ಡಿಸಿಎಂ ಎರಡೂ ಬಣದ ಶಾಸಕರಿದ್ದರು. ಸಭೆಯಲ್ಲಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಒತ್ತಡ ಹೇರುವ ಚರ್ಚೆ ನಡೆದಿದೆ.

ಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆಯಿತು. ಈ ಕುರಿತು ಸಹಿ ಮಾಡಿದ ಪತ್ರವನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಮತ್ತು ಡಿಸಿಎಂ ಎರಡೂ ಬಣಗಳ ಶಾಸಕರು ಈ ಸಭೆಗೆ ಹಾಜರಾಗಲಿಲ್ಲ ಸಿಎಂ ಡಿಕೆ ಶಿವಕುಮಾರ್ ಬೆಂಬಲಿಗ ಶಾಸಕರ ಸಂಖ್ಯೆ ಹೆಚ್ಚಾಗಿತ್ತು. ನಾಯಕತ್ವ ಬದಲಾವಣೆಯ ವಿಷಯದಲ್ಲಿಯೂ ಹೈಕಮಾಂಡ್ ಮಧ್ಯಪ್ರವೇಶಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಕು ಎಂದು ಡಿಕೆಶಿ ಬೆಂಬಲಿಗ ಶಾಸಕರು ನಿರ್ಧರಿಸಿದ್ದಾರೆ. ಕಳೆದ ವಾರ ಹಿರಿಯ ಶಾಸಕರ ಸಭೆ ನಡೆದಿತ್ತು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *