
ಬೆಳಗಾವಿ, ಮಾರ್ಚ್ 30: ಈಜಲು ತೆರಳಿದ್ದ ಇಬ್ಬರು ಬಾಲಕರು (ಹುಡುಗರು) ನೀರುಪಾದ (ಸಾವು) ಘಟನೆ ಜಿಲ್ಲೆ ಹುಕ್ಕೇರಿ ತಾಲೂಕಿನ ಹಳೆಗುಡಗನಟ್ಟಿ ಗ್ರಾಮದ ಬಳಿಯ ಹಿಡಕಲ್ ಡ್ಯಾಮ್ನ ಹಿನ್ನೀರಿನಲ್ಲಿ ನಡೆದಿದೆ. ಕೃಷ್ಣಾ ಖಾನಾಪುರಿ(14) ಮತ್ತು ಪ್ರಜ್ವಲ್ ಗೋಕಾರ್(13) ಮೃತ ಬಾಲಕರು. ಯಮಕನಮರಡಿ ಪೊಲೀಸ್ ಠಾಣಾ ನಿರ್ಮಾಣ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಬಾಲಕರು ಈಜುಲು ತೆರಳಿದ್ದರು. ಈ ವೇಳೆ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಶವಗಳನ್ನು ಸ್ಥಳೀಯರು ಮತ್ತು ಪೊಲೀಸರು ಹೊರತೆಗೆದಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಎತ್ತಿನ ಮೈತೊಳೆಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ದುರ್ಮರಣ
ಎತ್ತಿನ ಮೈತೊಳೆಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ದುರ್ಮರಣ ಹೊಂದಿರುವಂತಹ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ. ಮುತ್ತಪ್ಪ ಮುರ್ಲಾಪುರ(20) ಮೃತ ಯುವಕ. ಗದಗ ಗ್ರಾಮೀಣ ಠಾಣೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಪಾಲಿಗೆ ಮೃತ್ಯುಕೂಪವಾದ ಕೃಷಿಹೊಂಡ: ಈಜಲು ಹೋದ ನಾಲ್ವರು ಜಲಸಮಾಧಿ
ಮನೆಗೆ ಬಂದಿದ್ದ ಮುಳುಗುಂದ ಗ್ರಾಮದ ಮುತ್ತಪ್ಪ ಮುರ್ಲಾಪುರ ಈ ವೇಳೆ ಎತ್ತಿನ ಮೈ ತೊಳೆಯಲು ಕೆರೆಗೆ ಹೋದಾಗ ದುರ್ಘಟನೆ ಸಂಭವಿಸಿದೆ. ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲಿ ಆಕ್ರಂದನ ಮುಗಿಲುಮುಟ್ಟಿತ್ತು.
ಕೃಷಿಹೊಂಡಕ್ಕೆ ಬಿದ್ದು ಬಾಲಕಿ ಸಾವು
ಆಟವಾಡುವ ವೇಳೆ ಆಯತಪ್ಪಿ ಕೃಷಿಹೊಂಡಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿರುವಂತಹ ಘಟನೆ ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿಯಲ್ಲಿ ನಡೆದಿದೆ. ಕೀರ್ತನಾ(10) ಮೃತ ಬಾಲಕಿ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜಲು ಹೋಗಿದ್ದ SSLC ವಿದ್ಯಾರ್ಥಿ ಸಾವು
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಿಯೂರು ಗ್ರಾಮದ ಗೆಳೆಯರೊಂದಿಗೆ ಈಜಲು ಹೋಗಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕುಶಾಲ್ (16) ಮೃತ ವಿದ್ಯಾರ್ಥಿ. ಸದ್ಯ ಅಗ್ನಿಶಾಮಕದಳ ಸಿಬ್ಬಂದಿಯಿಂದ ಮೃತದೇಹಕ್ಕೆ ಶೋಧ ಕಾರ್ಯ ನಡೆದಿದೆ.
ಇದನ್ನೂ ಓದಿ: ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದ ವಿದ್ಯಾರ್ಥಿ ದುರಂತ ಅಂತ್ಯ: 12ನೇ ಮಹಡಿಯಿಂದ ಬಿದ್ದು ಸಾವು
ನಿನ್ನೆ ಶಾಲೆಯ ವಿಶೇಷ ತರಗತಿ ಮುಗಿಸಿಕೊಂಡು ಮನೆಗೆ ತೆರಳಿದ್ದ ವಿದ್ಯಾರ್ಥಿ ಕುಶಾಲ್, ಬಳಿಕ ಸ್ನೇಹಿತರ ಜೊತೆಗೆ ಕೆರೆಗೆ ತೆರಳಿದ್ದು, ಕೆರೆಯ ಆಳದಲ್ಲಿ ಮುಳುಗಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಸ್ನೇಹಿತರು ಹಾಗೂ ಕುರಿಗಾಯಿಯಿಂದ ರಕ್ಷಿಸಲು ಯತ್ನಿಸಲಾಗಿದೆ. ಆದರೆ ಕುಶಾಲ್ ದೇಹ ನಾಪತ್ತೆಯಾಗಿದೆ.
ಪೋಷಕರ ಗಮನಕ್ಕೆ
ಸದ್ಯಕ್ಕೆ ರಜೆ ಆರಂಭವಾಗಿದೆ. ಹೀಗಾಗಿ ತಮ್ಮ ಚಿಕ್ಕ ಮಕ್ಕಳ ಚಲನವಲನಗಳ ಬಗ್ಗೆ ಗಮನಹರಿಸಬೇಕಾಗಿದೆ. ಒಮ್ಮೆ ಹೋದ ಜೀವ ಮತ್ತೆ ವಾಪಸ್ ಬರಲ್ಲ. ಇಲ್ಲ ಮಕ್ಕಳನ್ನ ಬಾವಿ, ಕೆರೆ-ಕಟ್ಟೆಗಳು, ಕೃಷಿ ಹೊಂಡಗಳು, ಸ್ವಿಮ್ಮಿಂಗ್ ಪೂಲ್, ನದಿ ಬಳಿ ಬಿಡದಿರುವುದು ಉತ್ತಮ. ಒಂದು ಸಣ್ಣ ನಿರ್ಲಕ್ಷ್ಯದಿಂದ ಮಕ್ಕಳ ಜೀವವೇ ಹೋಗಬಹುದು ಜಾಗರೂಕರಾಗಿರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.