Headlines

ಮಾಲೂರು ಕ್ಷೇತ್ರದ ಮರು ಮತಎಣಿಕೆಗೆ ದಿನಾಂಕ ನಿಗದಿಪಡಿಸಿದ ಚುನಾವಣಾ ಆಯೋಗ!

ಮಾಲೂರು ಕ್ಷೇತ್ರದ ಮರು ಮತಎಣಿಕೆಗೆ ದಿನಾಂಕ ನಿಗದಿಪಡಿಸಿದ ಚುನಾವಣಾ ಆಯೋಗ!


ಬೆಂಗಳೂರು/ಕೋಲಾರ, (ನವೆಂಬರ್ 04): ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಮಾಲೂರು ವಿಧಾನಸಭೆ ಕ್ಷೇತ್ರದ (ಮಾಲೂರು ವಿಧಾನಸಭಾ ಕ್ಷೇತ್ರ)ಮರು ಮತ ಎಣಿಕೆಗೆ (ಮತಗಳ ಮರು ಎಣಿಕೆ) ದಿನಾಂಕ ನಿಗದಿ ಮಾಡಿ ಕರ್ನಾಟಕ ಚುನಾವಣಾ ಆಯೋಗ ಪತ್ರ ಬರೆದಿದೆ. ಇದೇ ನವೆಂಬರ್ 11 ರಂದು ಮಾಲೂರು ವಿಧಾನಸಭಾ ಕ್ಷೇತ್ರದ ಮತದಾರರ ಮರು ಮತಗಳಿಗೆ ದಿನಾಂಕ ನಿಗದಿಪಡಿಸಿರುವ ಕರ್ನಾಟಕ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಕೋಲಾರ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆ ನೀಡಲಾಗಿದೆ.

ಮಾಲೂರು ವಿಧಾನಸಭೆ ಕ್ಷೇತ್ರದ ಮತದಾರರ ಮರು ಮತ ಎಣಿಕೆಗೆ ನ್ಯಾಯಾಲಯ ಕೋರ್ಟ್ ಮೆಟ್ಟಿಲೇರಿದ್ದ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ, ತಹಶೀಲ್ದಾರ್ ಕೆಲ ಚುನಾವಣಾ ಸಾಮಗ್ರಿಗಳು ಅಕ್ರಮವಾಗಿ ವಶಕ್ಕೆ ಪಡೆದಿರುವ ಧ್ವನಿ ಎತ್ತಿದ್ದರು. ಈ ಬಗ್ಗೆ ಪತ್ರ ಬರೆದ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರು. ಇದರ ಬೆನ್ನಲ್ಲೇ ಇದೀಗ ಚುನಾವಣಾ ಆಯೋಗವು ಸಹ ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ನವೆಂಬರ್ 11 ರಂದು ಮರ ಮತ ಎಣಿಕೆ ಮಾಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಮಾಲೂರು ಕ್ಷೇತ್ರದ ಮರು ಮತ ಎಣಿಕೆ: ಪರಾಜಿತ ಅಭ್ಯರ್ಥಿಯಿಂದ ಚುನಾವಣಾ ಆಯೋಗಕ್ಕೆ ಮಹತ್ವದ ಪತ್ರ

ರಂದು ಪ್ರಕಟಿಸಲಾಗಿದೆ – 6:47 pm, ಮಂಗಳವಾರ, 4 ನವೆಂಬರ್ 25



Source link

Leave a Reply

Your email address will not be published. Required fields are marked *