ಬರೋಬ್ಬರಿ 11 ವರ್ಷಗಳ ಬಳಿಕ ಕರ್ನಾಟಕ ತಂಡ ರಣಜಿ ಪದವಿಯ ಫೈನಲ್‌ಗೇರಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಉತ್ತರಾಖಂಡ್ ಮತ್ತು ಕರ್ನಾಟಕ ನಡುವಣ ಸೆಮಿಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೂ ಮೊದಲ ಇನಿಂಗ್ಸ್‌ನಲ್ಲಿ 503 ರನ್‌ಗಳ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ.
ಇದಕ್ಕೂ ಮುನ್ನ ಈ ಆಯ್ದ ಟಾಸ್ ಗೆದ್ದ ಉತ್ತರಾಖಂಡ್ ತಂಡದ ನಾಯಕ ಕುನಾಲ್ ಚಂಡೆಲಾ ಬೌಲಿಂಗ್‌ಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಕೆಎಲ್ ರಾಹುಲ್ (141) ಶತಕ ಬಾರಿಸಿದರೆ, ನಾಯಕ ದೇವದತ್ ಪಡಿಕ್ಕಲ್ (232) ದ್ವಿಶತಕ ಸಿಡಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಮರಣ್ ರವಿಚಂದ್ರನ್ 135 ರನ್ಗಳ ಇನಿಂಗ್ಸ್ ಆಡಿದರು. ಕೃತಿಕ್ ಕೃಷ್ಣ 60 ರನ್ ಗಳಿಸಿದರೆ, ಕೆಳ ಕ್ರಮಾಂಕದಲ್ಲಿ ವಿದ್ಯಾಧರ್ ಪಾಟೀಲ್ 54 ರನ್ಗಳ ಕೊಡುಗೆ ನೀಡಿದ್ದಾರೆ. ಈ ಮೂಲಕ ಕರ್ನಾಟಕ ತಂಡವು 194. 4 ಪಂದ್ಯಗಳಲ್ಲಿ ಬರೋಬ್ಬರಿ 736 ರನ್ ಗಳಿಸಿ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಉತ್ತರಾಖಂಡ್ ತಂಡವು ಕೇವಲ 233 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 503 ರನ್ ಗಳಿಸಿದೆ.
ಫಾಲೋಆನ್ ಹೇರದ ಕರ್ನಾಟಕ:
ಮೊದಲ ಇನಿಂಗ್ಸ್‌ನಲ್ಲಿ 503 ರನ್‌ಗಳ ಮುನ್ನಡೆ ಪಡೆದರೂ ಕರ್ನಾಟಕ ತಂಡ ಫಾಲೋ ಹೇರದೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು. ಅದರಂತೆ ದ್ವಿತೀಯ ಇನಿಂಗ್ಸ್‌ನಲ್ಲಿ ಕರ್ನಾಟಕ ಪರ ಕೃತಿಕ್ ಕೃಷ್ಣ 52, ಸ್ಮರಣ್ ರವಿಚಂದ್ರನ್ 127 ಹಾಗೂ ಕೆಎಲ್ ರಾಹುಲ್ 86 ರನ್ ಬಾರಿಸಿದರು. ಈ ಮೂಲಕ ಸೆಕೆಂಡ್ ಇನಿಂಗ್ಸ್ ನಲ್ಲಿ 323 ರನ್ ಗಳಿಸಿ ಆಲೌಟ್ ಆಗಿದೆ.
827 ರನ್‌ಗಳ ಗುರಿ:
ಮೊದಲ ಇನಿಂಗ್ಸ್‌ನಲ್ಲಿನ ಹಿನ್ನಡೆಯಲ್ಲಿ ದ್ವಿತೀಯ ಇನಿಂಗ್ಸ್‌ನಲ್ಲಿ 827 ರನ್‌ಗಳ ಗುರಿ ಪಡೆದ ಉತ್ತರಾಖಂಡ ತಂಡವು 5ನೇ ಕೊನೆಯ ದಿನದಾಟದ ಅಂತ್ಯಕ್ಕೆ ಕಲೆಹಾಕಿದ್ದು 260 ರನ್‌ಗಳು ಮಾತ್ರ. ಇದರೊಂದಿಗೆ ಕರ್ನಾಟಕ-ಉತ್ತರಾಖಂಡ್ ನಡುವಣ ಸೆಮಿಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ.
ಅತ್ತ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್‌ಗೆ ಅರ್ಹತೆ ಹೊಂದಿದೆ. ಅದರಂತೆ ಫೆಬ್ರವರಿ 24 ರಿಂದ ಶುರುವಾಗಲಿರುವ ಫೈನಲ್ ಫ್ಯಾಶನ್ ಕರ್ನಾಟಕ ಮತ್ತು ಜುಮ್ಮುಕಾಶ್ಮೀರ ತಂಡಗಳು ಮುಖಾಮುಖಿಯಾಗಲಿದೆ.
ಉತ್ತರಾಖಂಡ್ ಪ್ಲೇಯಿಂಗ್ 11: ಪ್ರಶಾಂತ್ ಚೋಪ್ರಾ , ಅವನೀಶ್ ಸುಧಾ , ಭೂಪೇನ್ ಲಾಲ್ವಾನಿ , ಕುನಾಲ್ ಚಂಡೆಲಾ (ನಾಯಕ) , ಲಕ್ಷ್ಯ ರಾಜೇಶ್ ರಾಯ್ ಚಂದಾನಿ , ಜಗದೀಶ ಸುಚಿತ್ , ಸೌರಭ್ ರಾವತ್ (ವಿಕೆಟ್ ಕೀಪರ್) , ಅಭಯ್ ನೇಗಿ , ಮಾಯಾಂಕ್ ಮಿಶ್ರಾ , ಆದಿತ್ಯ ರಾವತ್ , ಜನಮೇಜಯ್ ಜೋಶಿ.
ಇದನ್ನೂ ಓದಿ: ಈ ಒಂದು ತಪ್ಪು ಸರಿಪಡಿಸದಿದ್ದರೆ ಟೀಮ್ ಇಂಡಿಯಾಗೆ ಅಪಾಯ ಕಟ್ಟಿಟ್ಟ ಬುತ್ತಿ!
ಕರ್ನಾಟಕ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಮಾಯಾಂಕ್ ಅಗರ್ವಾಲ್ , ದೇವದತ್ ಪಡಿಕ್ಕಲ್ (ನಾಯಕ) , ಕರುಣ್ ನಾಯರ್ , ಸ್ಮರಣ್ ರವಿಚಂದ್ರನ್ , ಶ್ರೇಯಸ್ ಗೋಪಾಲ್ , ಕೃತಿಕ್ ಕೃಷ್ಣ (ವಿಕೆಟ್ ಕೀಪರ್ ), ವಿದ್ಯಾಧರ ಪಾಟೀಲ್ , ವಿಜಯಕುಮಾರ್ ವೈಶಾಕ್ , ಶಿಖರ್ ಶೆಟ್ಟಿ , ಪ್ರಸಿದ್ಧ್ ಕೃಷ್ಣ.