
ಬೆಂಗಳೂರು, (ಏಪ್ರಿಲ್ 09): ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ಹಾಗೂ ಬಿಪಿಎಲ್ ಕಾರ್ಡ್ ಗೆ (ಬಿಪಿಎಲ್ ಕಾರ್ಡ್) ಅರ್ಜಿ ಹಾಕಿದವರಿಗೆ ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ (ಸಚಿವ ಕೆ.ಎಚ್. ಮುನಿಯಪ್ಪ)ಗುಡ್ ನ್ಯೂಸ್. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿಲ್ಲ. ಈ ಬಗ್ಗೆ ಸದನದಲ್ಲಿ ಕೂಡ ಉತ್ತರ ನೀಡಿದ್ದೇನೆ.ಒಂದು ವೇಳೆ ಕಾರ್ಡ್ ರದ್ದಾಗಿದ್ರೆ ತಹಶೀಲ್ದಾರರಿಗೆ ಅರ್ಜಿ ಹಾಕಬೇಕು. 15 ದಿನದೊಳಗೆ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಪಿಎಲ್ ಕಾರ್ಡ್ ಗೆ ನಾವು ಏನು ಮಾಡುತ್ತಿಲ್ಲ. ಎಪಿಎಲ್ ಗೆ ಸಾಕಷ್ಟು ಜನರು ಅರ್ಜಿ ಹಾಕಿದ್ದಾರೆ. ಹೀಗಾಗಿ ಸರ್ಕಾರ ಹೇಳಿದಂತೆ ಪರಿಷ್ಕರಣೆ ಕೇಂದ್ರವಾಗಿದೆ. ಬಿಪಿಎಲ್ ಅರ್ಹರಲ್ಲದವರು ಎಪಿಎಲ್ ಪಡೆಯಲಿ. ಏಳು ಲಕ್ಷ ಕಾರ್ಡುಗಳು ಅರ್ಹತೆ ಮಿರಿ ಎಪಿಎಲ್ ನವರು ಇದ್ದಾರೆ. ಸುಮಾರು 14 ಲಕ್ಷ ಕಾರ್ಡುಗಳು ಎಪಿಎಲ್ ನವರು ಬಿಪಿಎಲ್ ನಲ್ಲಿದ್ದಾರೆ. ನಿಧಾನವಾಗಿ ಬಿಪಿಎಲ್ ಗೆ ತೊಂದರೆಯಾಗದಂತೆ ಪರಿಷ್ಕರಣೆ ಮಾಡಬೇಕಿದ್ದು, ಹಂತ ಹಂತವಾಗಿ ಪರಿಷ್ಕರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.