Headlines

ಎರಡನೇ ಬೆಳೆಗೆ ತುಂಗಭದ್ರಾ ನೀರು ಹರಿಸುವ ಬಗ್ಗೆ ಡಿಕೆ ಶಿವಕುಮಾರ್ ಹೀಗ್ಯಾಕಂದ್ರು?

ಎರಡನೇ ಬೆಳೆಗೆ ತುಂಗಭದ್ರಾ ನೀರು ಹರಿಸುವ ಬಗ್ಗೆ ಡಿಕೆ ಶಿವಕುಮಾರ್ ಹೀಗ್ಯಾಕಂದ್ರು?


ಬಳ್ಳಾರಿ, (ನವೆಂಬರ್ 09): ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ಎರಡನೇ ಬೆಳೆಗೆ ನೀರು ಹರಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ. ತುಂಗಭದ್ರಾ ಜಲಾಶಯದ ಎಲ್ಲಾ ಗೇಟುಗಳನ್ನು ಬದಲಾಯಿಸಬೇಕಾಗಿದೆ. ಟೆಂಡರ್ ಮುಗಿದಿದ್ದು, ಕೆಲಸ ಕಾರ್ಯಾರಂಭವಾಗಬೇಕಿದೆ. ಹೀಗಾಗಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಎರಡನೇ ಬೆಳೆಗೆ ನೀರಿಲ್ಲ ಎಂದು ಹೇಳಿದ್ದಾರೆ. ಆದರೆ, ಕೊಪ್ಪಳಚೂರು, ಕೊಪ್ಪಳ, ಬಳ್ಳಾರಿಯಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಎಂದು ಎರಡನೇ ಬೆಳೆಗೆ ನೀರು ಹರಿಸುತ್ತಿದ್ದಾರೆ. ಈ ಸಂಬಂಧ ಬಳ್ಳಾರಿಯಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್, ತುಂಗಾಭದ್ರ ಅಣೆಕಟ್ಟು ಮುಖ್ಯವೋ? ಬೆಳೆ ಮುಖ್ಯವೋ? ಇದರ ಬಗ್ಗೆ ಯೋಚಿಸಬೇಕು ಎಂದು ರೈತರ ತೀರ್ಮಾನಕ್ಕೆ ಬಿಟ್ಟಿದ್ದಾರೆ.

“ತುಂಗಭದ್ರಾ ಡ್ಯಾಂನ ಎಲ್ಲಾ ಕ್ರೆಸ್ಟ್ ಗೇಟ್ ಮಾಡಲಾಗುತ್ತಿದೆ. ಈಗ ಕೆಲಸವೂ ನಡೆಯುತ್ತಿದೆ. ಎರಡನೇ ಬೆಳೆ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ. ನಾವೇನೂ ರೈತರಿಗೆ ನೀರು ಕೊಡಬಾರದು. ಆದರೆ ಅಣೆಕಟ್ಟು ಮುಖ್ಯವೋ? ಬೆಳೆ ಮುಖ್ಯವೋ ರೈತರು ಆಲೋಚಿಸಬೇಕು.ಯಾರ ಒತ್ತಡಕ್ಕೂ ರೈತರು ಮಣಿಯಬಾರದು. ಕೇಂದ್ರ ಸರ್ಕಾರ ರಚನೆ ಮಾಡಿರುವ ತುಂಗಭದ್ರಾ ಸಮಿತಿಯು ನೀರು ಹರಿಸುವ ಬಗ್ಗೆ ತೀರ್ಮಾನಿಸಿದೆ” ಎಂದು ಹೇಳಿದರು.



Source link

Leave a Reply

Your email address will not be published. Required fields are marked *