ಬೆಂಗಳೂರು, ಅಕ್ಟೋಬರ್ 16: ತೀವ್ರ ಆಕ್ಷೇಪದ ನಡುವೆಯೂ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಆರ್.ಎಸ್.ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವ ವಿಚಾರ ಸಂಬಂಧ ಹೊಸ ವಿಧೇಯಕ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಕಾನೂನು ಇಲಾಖೆಯಿಂದ ರೆಗ್ಯುಲೇಷನ್ ಆಫ್ ಯೂಸ್ ಆಫ್ ಗವರ್ನಮೆಂಟ್ ಪ್ರಿಮಿಸಿಸ್ ಆಯಂಡ್ ಪ್ರಾಪರ್ಟೀಸ್ ಬಿಲ್ – 2025ರಫ್ಟ್ ಡ್ರಾಫ್ಟ್ ಸಿದ್ಧವಾಗಿದ್ದು, ನಿಯಮ ಮೀರಿ RSS ಚಟುವಟಿಕೆಗಳನ್ನು ನಡೆಸಿದರೆ ಶಿಕ್ಷೆ ವಿಧಿಸಲು ಚಿಂತನೆ ನಡೆದಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಲಿದೆ.
ಹೊಸ ವಿಧೇಯಕದಲ್ಲಿ ಏನಿದೆ?
- ಯಾವುದೇ ಧಾರ್ಮಿಕ, ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂಬ ನಿಯಮ
- ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿಗೆ ಅನುಮತಿ ನೀಡುವ ಅಧಿಕಾರ
- ನಿಯಮ ಮೀರಿ ಚಟುವಟಿಕೆ ನಡೆಸಿದರೆ ಎರಡು ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ
- ಎರಡನೇ ಬಾರಿ ನಿಯಮ ಮೀರಿದ್ರೆ ಮೂರು ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ
- ಇದಕ್ಕೂ ಮೀರಿ ಮುಂದುವರೆದರೆ ಪ್ರತೀ ದಿನ 5 ಸಾವಿರ ರೂ. ದಂಡ ವಿಧಿಸುವ ನಿಯಮ
ಇದನ್ನೂ ಓದಿ: ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ನೌಕರರಿಗೆ ಕಡಿವಾಣ ಹಾಕಿ: ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ
‘ಪ್ರಿಯಾಂಕ್ ಖರ್ಗೆ ಬಲಿಪಶು’
RSS ಚಟುವಟಿಕೆಯಲ್ಲಿ ಭಾಗವಹಿಸುವ ನೌಕರರಿಗೆ ಕಡಿವಾಣ ವಿಚಾರವಾಗಿ ವಿಪಕ್ಷ ನಾಯಕ .ಅಶೋಕ್ ಕಿಡಿ ಕಾರಿದ್ದಾರೆ. ಈ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆಯನ್ನು ಬಲಿಪಶು ಮಾಡಲಾಗುತ್ತಿದ್ದು, ಇದು ಸಿಎಂ ಸಿದ್ದರಾಮಯ್ಯ ಹೇಳಿ ಮಾಡಿದ ನಾಟಕ. ಪ್ರಿಯಾಂಕ್ ಪತ್ರದ ಆಧಾರದಲ್ಲಿ ನಾನು ಕೂಡ ಸರ್ಕಾರಿ ನೌಕರ. ಮೊನ್ನೆಯಷ್ಟೇ ನಾನು ಗಣವೇಷಧಾರಿಯಾಗಿ ಹೋಗಿದ್ದೇನೆ. ನನ್ನನ್ನು ಯಾವಾಗ ಕಳುಹಿಸುತ್ತೀಯಪ್ಪ, ಆ ತಾಕತ್ತು ಇದೆಯಾ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
‘ಐ ಲವ್ RSS’ ಅಭಿಯಾನ
ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗೆ ನಿರ್ಬಂಧ ವಿಧಿಸುವ ಸರ್ಕಾರದ ಚಿಂತನೆಯನ್ನು ವಿರೋಧಿಸಿ ಹಿಂದೂ ಪರ ಕಾರ್ಯಕರ್ತರಿಂದ ಮೈಸೂರಿನ ಚೆಲುವಾಂಬ ಪಾರ್ಕ್‌ನಲ್ಲಿ ‘ಐ ಲವ್ RSS’ ಅಭಿಯಾನವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 12:58 pm, ಗುರು, 16 ಅಕ್ಟೋಬರ್ 25