Headlines

ಪಥಸಂಚಲನದಲ್ಲಿ ಭಾಗಿ: RSS ಕಟ್ಟಾಳುಗೆ ನೀಡಿದ್ದ ಹುದ್ದೆ ವಾಪಸ್ ಪಡೆದ ಸರ್ಕಾರ, ಸಿಎಂಗೆ ಕ್ಷಮೆಯಾಚಿಸಿದ ಕೈ ಶಾಸಕ

ಪಥಸಂಚಲನದಲ್ಲಿ ಭಾಗಿ: RSS ಕಟ್ಟಾಳುಗೆ ನೀಡಿದ್ದ ಹುದ್ದೆ ವಾಪಸ್ ಪಡೆದ ಸರ್ಕಾರ, ಸಿಎಂಗೆ ಕ್ಷಮೆಯಾಚಿಸಿದ ಕೈ ಶಾಸಕ


ತುಮಕೂರು, (ಅಕ್ಟೋಬರ್ 27): ಆರ್‌ಎಸ್‌ಎಸ್‌(ಆರ್‌ಎಸ್‌ಎಸ್) ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿದ್ದ ವೈದ್ಯರು ತಿಪಟೂರಿನ ಶ್ರೀಧರ್ ಹೆಸರನ್ನು ಯಶಸ್ವಿನಿ ಟ್ರಸ್ಟ್‌ನಿಂದ ತೆಗೆದುಹಾಕಲಾಗಿದೆ. ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದ ವೈದ್ಯರಿಗೆ ಸರ್ಕಾರದ ಯಶಸ್ವಿನಿ ಟ್ರಸ್ಟ್‌ ಅನ್ನು ನೇಮಿಸಲಾಯಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ಕಾಂಗ್ರೆಸ್ ಪಕ್ಷವು ಹೊಂದಿರುವ ಕೋಮುವಾದಿ ವಿರೋಧಿ ಮತ್ತು ಸಾಮರಸ್ಯ ನೀತಿಗೆ ವಿರುದ್ಧವಾಗಿದೆ. ತಕ್ಷಣ ಡಾ. ಶ್ರೀಧರ್ ಅವರನ್ನು ಟ್ರಸ್ಟಿಯಾಗಿ ನೇಮಿಸಿ ಆದೇಶ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ ಶಶಿಧರ್ ಒತ್ತಾಯಿಸಿದರು. ತೀವ್ರ ವಿರೋಧಗಳ ಬೆನ್ನಲ್ಲೇ ಯಶಸ್ವಿನಿ ಟ್ರಸ್ಟ್‌ನ ಟ್ರಸ್ಟಿ ಸ್ಥಾನದಿಂದ ವೈದ್ಯ ಶ್ರೀಧರ್ ಹೆಸರನ್ನು ಕೈಬಿಡಲಾಗಿದೆ. ಈ ಸಂಬಂಧ ಸರ್ಕಾರ ಆದೇಶವನ್ನು ಹೊರಡಿಸಿದೆ, ಆಡಳಿತಾತ್ಮಕ ದೃಷ್ಟಿಯಿಂದ ಈ ಹಿಂದಿನ ಆದೇಶವನ್ನು ಮಾರ್ಪಡಿಸಿ, ಡಾ. ಶೀಧರ್ ಅವರ ಹೆಸರನ್ನು ಕೈಬಿಡಲಾಗಿದೆ.

ಈ ಹಿಂದಿನ ಆದೇಶವನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶಶಿಧರ್, “ಅಕ್ಟೋಬರ್ 12ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಆರ್‌ಎಸ್‌ಎಸ್‌ಎಸ್‌ ಪಥಸಂಚಲನವನ್ನು ನೇಮಿಸಿತ್ತು. ಆ ಕಾರ್ಯಕ್ರಮದಲ್ಲಿ ಕುಮಾರ್ ಆಸ್ಪತ್ರೆಯ ಡಾ. ಶಿಫಾರಸಿನಂತೆ ಸರ್ಕಾರವು ಡಾ.ಶ್ರೀಧರ್ ಅವರನ್ನು ನೇಮಿಸಿದೆ. ಇದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಳವಳ ಹುಟ್ಟುಹಾಕಿದೆ” ಎಂದು ತಿಳಿಸಿದ್ದರು.

ಇದನ್ನೂ ಓದಿ: RSS ಕಾರ್ಯಕರ್ತರಿಗೆ ಮಹತ್ವದ ಹುದ್ದೆ: ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಕೈ ಕಾರ್ಯಕರ್ತರು

ಸಿಎಂ ಬಳಿಕ ಕ್ಷಮೆಯಾಚಿಸಿದ ಶಾಸಕ

ಇನ್ನು ಈ ಬಗ್ಗೆ ತಿಪಟೂರಿನಲ್ಲಿ ಶಾಸಕ ಕೆ. ಷಡಾಕ್ಷರಿ ಹೇಳಿಕೆ ನೀಡಿದ್ದು, ಪ್ರಕರಣದಿಂದ ಸಿಎಂಗೆ ಮುಜುಗರವಾದರೂ ಕ್ಷಮೆ ಕೇಳುತ್ತೇನೆ. ಡಾ.ಶ್ರೀಧರ್ ಆರ್.ಎಸ್.ಎಸ್ ನಲ್ಲಿ ಸಕ್ರಿಯವಾಗಿರುವುದು ನನಗೆ ಗೊತ್ತಿರಲಿಲ್ಲ. ಅವರ ಅಭಿಮಾನಿಗಳು ಜನರ ಸೇವೆಗೆ ಅವಕಾಶ ನೀಡಿ ಎಂದು ಪ್ರಸ್ತಾಪಿಸಿದರು. ನೀಡುವ ಆಪರೇಷನ್, ಮಾಹಿತಿ. ಅವರ ಸೇವೆಯನ್ನು ಗುರುತಿಸಿ ಎಂದು ಮನವಿ ಮಾಡಿದರು. ಆರ್.ಎಸ್.ಎಸ್ ನಾವು ಬೆಂಬಲಿಸುವುದಿಲ್ಲ. ನನಗೆ ಆರ್.ಎಸ್.ಎಸ್ ಸಂಪರ್ಕ ಇಲ್ಲ. ಉದ್ದೇಶ ಪೂರಕವಾಗಿ ಆರ್.ಎಸ್.ಎಸ್ ಬೆಂಬಲಿಸುವುದಿಲ್ಲ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *