ಬೆಂಗಳೂರು, (ಜನವರಿ 16): ಕರ್ನಾಟಕದಲ್ಲಿ (ಕರ್ನಾಟಕ) ಮತ್ತೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಚುನಾವಣೆಗಳು (ವಿದ್ಯಾರ್ಥಿಗಳ ಚುನಾವಣೆ) ನಡೆಸುವ ಸಂಬಂಧ ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಮೊದಲ ಸಭೆ ಕೂಡ ಆಗಿದೆ. ಉನ್ನತ ಶಿಕ್ಷಣ ಇಲಾಖೆಯು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಈ ಕಾಲೇಜುಗಳು ಮತ್ತು ವಿವಿಗಳಲ್ಲಿ ಚುನಾವಣೆ ಬೇಕಾ ?ಬೇಡ್ವಾ ಎಂಬ ಬಗ್ಗೆ ಅಭಿಪ್ರಾಯ ಕೇಳಲಾಗಿದೆ.
ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಸಂಬಂಧ ಸಮಿತಿ ರಚನೆಯಾಗಿದೆ. ಆದರೆ ಇದಕ್ಕೆ ಈಗ ಕಾಲೇಜುಗಳು ಮತ್ತು ವಿವಿಗಳಲ್ಲಿ ಚುನಾವಣೆ ಬೇಕಾ? ಈ ವಿದ್ಯಾರ್ಥಿಗಳ ನಡುವೆ ಜಗಳ ಕಿತ್ತಾಟ ಹೊಡೆದಾಟ ರಾಜಕೀಯ ಶುರುವಾಗುತ್ತೆ ಎನ್ನುವ ಪರ ವಿರೋಧ ಅಭಿಪ್ರಾಯ ಕೇಳಿ ಬಂದಿತ್ತು. ಹೀಗಾಗಿ ಸರ್ಕಾರ ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿಗಳ ಚುನಾವಣೆ ಬೇಕಾ ಬೇಡ್ವ ಎಂಬ ಕುರಿತು ಶಿಕ್ಷಣ ತಜ್ಞರು ಸಾರ್ವಜನಿಕರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: CUET PG 2026: CUET PG ಆನ್‌ಲೈನ್ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ; ಜ. 20ರ ವರೆಗೆ ಅವಕಾಶ
ನಿಮ್ಮ ಅಭಿಪ್ರಾಯವನ್ನು ಮೇಲ್ ಮಾಡಿ
ಪೋಷಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಏನು ಎಂಬ ಅಭಿಪ್ರಾಯ ಪಡೆದು ಚುನಾವಣೆ ಅಖಾಡಕ್ಕೆ ತಯಾರಿ ನಡೆಸಿದ್ದಾರೆ. ಹೀಗಾಗಿ ಅಭಿಪ್ರಾಯ ಸಂಗ್ರಹಕ್ಕೆ ಪ್ರತ್ಯೇಕ ಮೇಲ್ ಐಡಿ ಕೂಡ ನೀಡಿ ಪೋಷಕರ ಅಭಿಪ್ರಾಯ ಕೇಳಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ karstudentselections@gmail.com ಇಲ್ಲಿ ಸಲಹೆ ರೂಪದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ.
ಸರ್ಕಾರದ ನಿಲುವು ಏನು?
ಯುವಕರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ತಿಳಿವಳಿಕೆ ಇರಬೇಕು. ನಾಯಕತ್ವ ಗುಣ ಅಳವಡಿಸಿಕೊಳ್ಳೋದಕ್ಕೆ ಇದು ಬುನಾದಿ ಆಗತ್ತೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಬೇಕಾದರೆ ಚುನಾವಣೆ ನಡೆಸುವುದು ಅತ್ಯಗತ್ಯ ಎಂದು ಸರ್ಕಾರದ ಅಭಿಪ್ರಾಯವಾಗಿದೆ.
ಸಮಿತಿ ಮುಖ್ಯಸ್ಥರು ಹೇಳುವುದೇನು?
ಇನ್ನು ಈ ಬಗ್ಗೆ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ರಾಜ್ಯದ ಕಾಲೇಜುಗಳ ಚುನಾವಣೆಗಳು ಆಗಬೇಕು. ಅದರ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ಒಂದು ವರದಿ ಒಪ್ಪಿಸಲಿಕ್ಕೆ ಹೇಳಿದ್ದಾರೆ. ಆ ಸಮಿತಿ ಮುಖ್ಯಸ್ಥನನ್ನಾಗಿ ನನ್ನನ್ನ ನೇಮಕ ಮಾಡಿದ್ದಾರೆ. ಒಂದು ಸಭೆ ಮಾಡಿದ್ದೇವೆ. ಈಗ ಚುನಾವಣೆಗಳನ್ನ ಮಾಡ್ಬೇಕಂದ್ರೆ ಹೇಗೆ ಮಾಡಬೇಕು? ಅದರ ರೂಪುರೇಷೆ ಹೇಗಿರಬೇಕು? ಟರ್ಮ್ಸ್ ಆಫ್ ರೆಫರನ್ಸ್ ಬಗ್ಗೆ ಚರ್ಚೆ ಆಗಿದೆ. ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ತಿವಿ.
ಒಟ್ಟಿನಲ್ಲಿ ಬಳಿಕ ಬ್ಯಾನ್ ಮಾಡಿದ ಎಲೆಕ್ಷನ್ ಈಗ ಮತ್ತೆ ಕಾಲೇಜು ಹಾಗೂ ವಿವಿಗಳಲ್ಲಿ ನಡೆಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕ ವರ್ಷದ ಶಿಕ್ಷಕರೂ ಸೇರಿದಂತೆ ಅನೇಕರ ಅಭಿಪ್ರಾಯಗಳನ್ನು ಸಲಹೆಗಳ ರೂಪದಲ್ಲಿ ಪಡೆಯಲು ಸಮಿತಿ ಮುಂದಾಗಿದೆ, ಈ ಮೂಲಕ ಮತ್ತೆ ಚುನಾವಣೆ ಆಂಭವಾಗುತ್ತಾ ಅಂತ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:21 pm, ಶುಕ್ರ, 16 ಜನವರಿ 26