ರಾಜ್ಯ ಸರ್ಕಾರದ ಎಡವಟ್ಟು, ನೇರವಾಗಿ ನೇಮಕವಾದ 2017ನ ಡಿವೈಎಸ್ಪಿ ಅಧಿಕಾರಿಗಳಿಗಿಲ್ಲ ಬಡ್ತಿ

ರಾಜ್ಯ ಸರ್ಕಾರದ ಎಡವಟ್ಟು, ನೇರವಾಗಿ ನೇಮಕವಾದ 2017ನ ಡಿವೈಎಸ್ಪಿ ಅಧಿಕಾರಿಗಳಿಗಿಲ್ಲ ಬಡ್ತಿ


ಬೆಂಗಳೂರು, (ನವೆಂಬರ್ 09): ಕರ್ನಾಟಕ ಗೃಹ ಇಲಾಕೆ ನೀಡಬೇಕಿದ್ದ ಬಡ್ತಿ ಪ್ರಕ್ರಿಯೆಯಲ್ಲಿ ತಮಗೆ ನ್ಯಾಯ ಸಿಕ್ಕಿಲ್ಲ. ತಮಗೆ ಸಿಗಬೇಕಿರುವ ಬಡ್ತಿ ನೀಡಿಲ್ಲ. ಇದೆಲ್ಲವೂ ಆಗಿರುವ ಸರ್ಕಾರ ಮಾಡಿರುವ ಸ್ವಯಂ ತಪ್ಪಿನಿಂದ. ಹೀಗಾಗಿ ನಮಗೆ ಬಡ್ತಿ ನೀಡಬೆಕು ಎಂದು 2017ನೇ ಬ್ಯಾಚ್ ನಲ್ಲಿ ನೇರ ನೇಮಕಾತಿ ಪಡೆದಿದ್ದ 35 ಡಿವೈಎಸ್ ಪಿಗಳು ಕಾನೂನು ಹೋರಾಟ ಮಾಡಿದ್ದು, ಈಗ ಈ ಹೋರಾಟಕ್ಕೆ ಆದೇಶ ನೀಡಲಾಗಿದೆ. ಅದೇನು ಅಂದ್ರೆ ಸರ್ಕಾರ ಬಡ್ತಿ ವಿಚಾರದಲ್ಲಿ ಕೆಲ ನ್ಯೂನ್ಯತೆಗಳನ್ನು ಮಾಡಿದ್ದು, ಈಗ ಆ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಸೂಚಿಸಿದೆ.

ದಾಖಲೆಗಳ ಪ್ರಕಾರ ,ಸರ್ಕಾರ 2007 ರಿಂದ ಬಡ್ತಿ ಮತ್ತು ಬಡ್ತಿ ಪಡೆದವರು ಹಾಗೂ ವೆಕೆನ್ಸಿ ಪಟ್ಟಿಯಲ್ಲಿ ಹಲವಾರು ಲೋಪಗಳು ಇವೆಯಂತೆ. ಸರ್ಕಾರದಿಂದ ತಪ್ಪಿನಿಂದ 396 ಖಾಲಿ ನಕಲಿ ಡಿವೈಎಸ್ ಪಿ ವೆಕೆನ್ಸಿಗಳನ್ನು ಸೃಷ್ಟಿಸಿದೆ. ಆ ಜಾಗಕ್ಕೆ ಇನ್ಸ್ಪೆಕ್ಟರ್ ಗಳಿಗೆ ಡಿವೈಎಸ್ಪಿಯಾಗಿ ಬಡ್ತಿ ನೀಡಲಾಗಿದೆ, ಹೀಗಾಗಿ 2015 ರಲ್ಲಿ ಡಿವೈ ಎಸ್ ಪಿ ಆದವರಿಗೆ ಅಡಿಶನಲ್ ಎಸ್ ಪಿಯಾಗಿ ಪ್ರಮೋಷನ್ ನೀಡಿದ್ದಾರೆ. ಇದನ್ನು ನೇರವಾಗಿ 2017ರಲ್ಲಿ ಕೆ ಎಸ್ ಪಿ ಎಸ್ ನೇಮಕ ಮಾಡಲಾಯಿತು ಡಿವೈಎಸ್ಪಿ ಅಧಿಕಾರಿಗಳಿಗೆ ಬಡ್ತಿ ಸಿಗುತ್ತದೆ. ಇದೆಲ್ಲದಕ್ಕೆ ಸರ್ಕಾರ 396 ವೆಕೆನ್ಸಿಗಳನ್ನು ನೀಡಿದ್ದೆ ತಪ್ಪು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಕೈದಿಗಳ ಡ್ಯಾನ್ಸ್ ವಿಡಿಯೋ ವೈರಲ್: ಯಾವ ಜೈಲಿನದ್ದು?

ಅದೇ ಕಾರಣಕ್ಕೆ ಸರ್ಕಾರದಲ್ಲಿ ಬಡ್ತಿ ವಿಚಾರದಲ್ಲಿ ಆಗಿರುವ ನ್ಯೂನತೆಗಳನ್ನು ಪರಿಹರಿಸಿ ಬಡ್ತಿ ಸಮಸ್ಯೆಯನ್ನು ಬಗೆಹರಿಸುವಂತೆ ಕೆಎಟಿ ಮತ್ತು ಆದೇಶ ನೀಡಿದೆ. ಈಗ ಸರ್ಕಾರ ನ್ಯೂನ್ಯತೆ ಸರಿಪಡಿಸಿದೆ 2017 ಬ್ಯಾಚ್ ನ ಅಧಿಕಾರಿಗಳಿಗೆ ಬಡ್ತಿ ಸಿಗಲಿದೆ.

ನಿಯಮದ ಪ್ರಕಾರ ಕೆ ಎಸ್ ಎಸ್ ಪಿ ಎಸ್ ಮೂಲಕ ನೇರ ನೇಮಕಾತಿ ಹೊಂದಿದ್ದ ಅಧಿಕಾರಿಗಳು ಪೊಲೀಸ್ ಇಲಾಖೆಗೆ ನೇಮಕಗೊಂಡ ನಾಲ್ಕು ರಿಂದ ಐದು ವರ್ಷದವರೆಗೆ ಹೆಚ್ಚುವರಿ ದೀಕ್ಷಕರಾಗಲು (ಎಎಸ್ಪಿ) ಅರ್ಹತೆ ಪಡೆಯುತ್ತಾರೆ ಮತ್ತು ಎಎಸ್ಪಿ ಯಾಗಿ ನಾಲ್ಕು ವರ್ಷ ಕೆಲಸ ಮಾಡಿದ ನಂತರ ಐಪಿಎಸ್ ಹುದ್ದೆಗೆ ಅರ್ಹತೆ ಪಡೆಯುತ್ತಾರೆ. ಒಟ್ಟಾರೆ ನೇರ ಕೆಎಸ್ ಎಸ್ ಅಧಿಕಾರಿ ಸಲ್ಲಿಸಿದ ಮೇಲೆ ಎಂಟು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದವರು ಹಿರಿತನ ಆಧಾರದಲ್ಲಿ ಐಪಿಎಸ್ ಪಡೆಯಲು ಅರ್ಹತೆ ಪಡೆದುಕೊಳ್ಳುತ್ತಾರೆ. ಆದರೆ ಈಗ 2017 ಬ್ಯಾಚ್ ನ ಮೂವತೈದು ಅಧಿಕಾರಿಗಳು ಇದುವರೆಗೆ ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿದರೂ ಸಹ ಐಪಿಎಸ್ ಇರಲಿ ಎಸ್ ಪಿ ಹುದ್ದೆಗೂ ಬಡ್ತಿ ಸಿಕ್ಕಿಲ್ಲ.

ಇದುವರೆಗೆ ಒಂದೇ ಬಾರಿಯೂ ಪ್ರಮೋಷನ್ ಸಿಗದ ಕಾರಣ ಸಂಬಳವೂ ಹೆಚ್ಚಾಗಿಲ್ಲ. ಈಗಲಾದರು ಸರ್ಕಾರ ಬಡ್ತಿ ನೀಡತ್ತಾ ಇಲ್ಲಾವ ಎನ್ನುವುದನ್ನು ಕಾದುನೋಡಬೇಕಿದೆ.



Source link

Leave a Reply

Your email address will not be published. Required fields are marked *