ಬೆಂಗಳೂರು, (ಫೆಬ್ರವರಿ 26): ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿರುವ ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ-2025 (ಎಸ್‌ಸಿ ಆಂತರಿಕ ಮೀಸಲಾತಿ ಮಸೂದೆ 2025) ಕೊನೆಗೂ ರಾಜ್ಯಪಾಲರು ಅಂಗೀಕರಿಸಿದ್ದಾರೆ. ಕೆಲವು ಗೊಂದಲಗಳ ಮಧ್ಯೆಯೂ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ (ಥಾವರ್ ಚಂದ್ ಗೆಹ್ಲೋಟ್)ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ ಸಹಿ ಹಾಕಿದ್ದಾರೆ. ಮೀಸಲಾತಿ ವಿಚಾರದಲ್ಲಿ ಒಳ ಪಂಗಡಗಳ ನಡುವೆ ಗೊಂದಲ ಏರ್ಪಟ್ಟಿ ವಿಧೇಯಕಕ್ಕೆ ಸಹಿ ಹಾಕದೆ ಪೆಂಡಿಂಗ್ ಇಟ್ಟಿದ್ದರು. ಆದರೆ, ಇಂದು (ಫೆಬ್ರವರಿ 26) ದಲಿತ ಸಮುದಾಯದ ಸಚಿವರು ರಾಜ್ಯಪಾಲರನ್ನು ಭೇಟಿ ಮಾಡಿ, ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿ ವಿಧೇಯಕಕ್ಕೆ ಸಹಿ ಹಾಕುವಂತೆ ಮನವಿ ಮಾಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯಪಾಲರು ಪರಿಶಿಷ್ಟ ಜಾತಿಗಳ ಮೀಸಲಾತಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.
ಒಳಮೀಸಲಾತಿ ವಿಧೇಯಕವನ್ನ ವಾಪಸ್ ಕಳುಹಿಸಿದ ರಾಜ್ಯಪಾಲರು
ಕರ್ನಾಟಕ ಅನುಸೂಚಿತ ಜಾತಿಗಳ ಉಪವರ್ಗೀಕರಣ ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಅಂಕಿತ ಹಾಕಲು ನಿರಾಕರಿಸಿದರು, ಹಲವು ಸ್ಪಷ್ಟನೆಗಳನ್ನು ಕೋರಿ ವಿಧೇಯಕವನ್ನು ಸರ್ಕಾರಕ್ಕೆ ಕಳುಹಿಸಿದ್ದರು. ಪ್ರಾಥಮಿಕ ರಾಜ್ಯ ಸರ್ಕಾರದ ಒಳಮೀಸಲಾತಿ ಜಾರಿಯ ಆಶಯಕ್ಕೆ ತಾತ್ಕಾಲಿಕ ಧಕ್ಕೆ ಉಂಟಾಗಿತ್ತು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಶೇ. 6, 6 ಮತ್ತು 5ರ ಅನುಪಾತದಲ್ಲಿ ಕೋಟಾ ನಿಗದಿಪಡಿಸಲಾಗಿದೆ, ಆದರೆ ರಾಜ್ಯಪಾಲರು ಜನವರಿ 9 ರಂದು ಈ ಫೈಲ್ ಅನ್ನು ಕಳುಹಿಸಿದ್ದರು.
ಇದನ್ನೂ ಓದಿ: ದಲಿತ ಸಮುದಾಯಕ್ಕೆ ಗುಡ್ ನ್ಯೂಸ್: ಒಳ ಮೀಸಲಾತಿ ಫೈನಲ್, 3 ಬೇಡಿಕೆ ಬೇಡಿಕೆ
ಸಿಎಂ ಬಳಿಕ ರಾಜ್ಯಪಾಲರನ್ನ ಭೇಟಿ ಮಾಡಿದ ಸಚಿವರು
ಇದೇ ಮಾರ್ಚ್ 6 ರಂದು ರಾಜ್ಯ ಬಜೆಟ್ ಬೆಂಗಳೂರಿನಲ್ಲಿ (ಫೆಬ್ರವರಿ 26) ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಚಿವರ ಮಹತ್ವದ ಸಭೆ ಇಂದು ನಡೆಯಲಿದೆ. ಸಭೆಯಲ್ಲಿ ರಾಜ್ಯದಲ್ಲಿ ಬಾಕಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಹಾಗೂ ಒಳಮೀಸಲಾತಿ ಜಾರಿ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ಒಳಮೀಸಲಾತಿ ವಿಧೇಯಕಕ್ಕೆ ರಾಜಭವನದಲ್ಲಿ ತಡೆ ಉಂಟಾಗಿರುವ ಚರ್ಚೆ ನಡೆದಿದ್ದು, ಅಂತಿಮವಾಗಿ ಒಳಮೀಸಲಾತಿ ವಿಧೇಯಕಕ್ಕೆ ಅಂಕಿತ ಹಾಕುವಂತೆ ಕೋರಲು ರಾಜ್ಯಪಾಲರ ಬಳಿ ಸಚಿವರ ನಿಯೋಗ ತೆರಳಲು ನಿರ್ಧರಿಸಲಾಗಿದೆ, ಅದರಂತೆ ಪರಿಶಿಷ್ಟ ಜಾತಿ ಸಮಯದ ಸಚಿವರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಖಾಲಿ ಹುದ್ದೆ ನೇಮಕಾತಿಗೆ ತೊಂದರೆಯಾಗುತ್ತಿದೆ. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿ ಒಳಮೀಸಲಾತಿ ವಿಧೇಯಕಕ್ಕೆ ಸಹಿ ಹಾಕುವಂತೆ ಮಾನವಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯಪಾಲರು, ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ-2025 ಸಹಿ ಹಾಕಿದ್ದಾರೆ.
ಈ ವಿಧೇಯಕಕ್ಕೆ ವಿರೋಧ
ಒಳಮೀಸಲಿಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳು (ಉಪ ವರ್ಗೀಕರಣ) ವಿಧೇಯಕ-2025 ರಿಂದ ರಾಜ್ಯಪಾಲರು ತಿರಸ್ಕರಿಸಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಒಳಮೀಸಲಾತಿ ಬಿಟ್ಟು ಹಳೆಯ ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಮತ್ತು ರೋಸ್ಟರ್ ಬಿಂದುವಿನಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಬೇಕು. ಅಲ್ಲಿಯವರೆಗೂ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಬಾರದು ಎಂದು ವಿರೋಧಿಸಿ ಪ್ರತಿಭಟನೆಗಳು ನಡೆದವು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:24 pm, ಗುರುವಾರ, 26 ಫೆಬ್ರವರಿ 26