
ಬೆಂಗಳೂರು, ಏಪ್ರಿಲ್ 08: ಕರ್ನಾಟಕದಲ್ಲಿ ಗ್ಯಾಸ್ ಸಿಗದೆ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಿದೆ. ದಿನವಿಡಿ ದುಡಿಮೆ ಬಿಟ್ಟು ಬಂಕ್ಗಳ ಬಳಿ ಗಂಟೆಗಟ್ಟಲೆ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಟೋ ಚಾಲಕರು ಹೈರಾಣಾಗಿ ಹೋಗಿದ್ದಾರೆ. ಈ ಮಧ್ಯೆ ಆಟೋ ಗ್ಯಾಸ್ (ಆಟೋ LPG)ಕೊರತೆ ಬಗ್ಗೆ ವಂದತಿಗಳು ಕೂಡ ಹರಿದಾಡಿದ್ದವು. ಸದ್ಯ ಆಟೋ ಎಲ್ಪಿಜಿ ಸರಬರಾಜು ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದರೂ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ.
ಪ್ರತಿದಿನ 83 ರಿಂದ 94 ಮೆಟ್ರಿಕ್ ಟನ್ ವರೆಗೂ ಪೂರೈಕೆ
ಆಟೋ ಎಲ್ಪಿಜಿ ಸರಬರಾಜು ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದರೂ ಯಾವುದೇ ತೊಂದರೆ ಇಲ್ಲ. IOCL, BPC, HPC ಕಂಪನಿಗಳಿಂದ ಗ್ಯಾಸ್ ಪೂರೈಕೆ ನಡೆಯುತ್ತಿದೆ. ಏಪ್ರಿಲ್ 2 ರಿಂದ ಏಪ್ರಿಲ್ 6 ರವರೆಗೆ ದಿನನಿತ್ಯ ಸರಬರಾಜು ಆಗುತ್ತಿದೆ. ಪ್ರತಿದಿನ 83 ರಿಂದ 94 ಮೆಟ್ರಿಕ್ ಟನ್ ವರೆಗೆ ಪೂರೈಕೆಯಾಗಿದೆ. ಏಪ್ರಿಲ್ 5 ರಂದು ಅತಿ ಹೆಚ್ಚು 94.11 MT ಸರಬರಾಜು ಮಾಡಲಾಗಿದೆ. ಆಟೋ ಚಾಲಕರು ಆತಂಕಪಡಬೇಕಾಗಿಲ್ಲ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಆಟೋ ಎಲ್ಪಿಜಿ ಪೂರೈಕೆ ಹೆಚ್ಚಿಸಿದ ಇಂಡಿಯನ್ ಐಲ್! ಡ್ಯುಯಲ್ ಫ್ಯೂಯಲ್ ಬಳಕೆಗೆ ಸಲಹೆ
ಇನ್ನು ಎಲ್ಪಿಜಿ ಪೂರೈಕೆ ವ್ಯವಸ್ಥೆ ಸರ್ಕಾರ ಸಮೀಕ್ಷೆ ಮಾಡುತ್ತಿದೆ. ಅಗತ್ಯ ಕ್ರಮ ಕೈಗೊಳ್ಳದಿದ್ದರೆ. ಏಪ್ರಿಲ್ 5 ರಂದು ಗರಿಷ್ಠ 94.11 MT ಪೂರೈಕೆಯಾಗಿದೆ. ಆಟೋ ಚಾಲಕರಿಗೆ ಆತಂಕ ಬೇಡ, ಪೂರೈಕೆ ಮೇಲೆ ಸರ್ಕಾರದ ನಿಗಾ ಇದೆ.
- ದಿನಾಂಕ ಆಟೋ ಎಲ್ಪಿಜಿ ಸರಬರಾಜು (ಮೆಟ್ರಿಕ್ ಟನ್ ನಲ್ಲಿ)
- ಏಪ್ರಿಲ್ 2 ರಂದು 87.78
- ಏಪ್ರಿಲ್ 3 ರಂದು 86.05
- ಏಪ್ರಿಲ್ 4 ರಂದು 84.80
- ಏಪ್ರಿಲ್ 5 ರಂದು 94.11
- ಏಪ್ರಿಲ್ 6 ರಂದು 83.58
ಇನ್ನೂ ಓದಿ: ಸಚಿವ ಕೆ. ಹೆಚ್ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ಆಟೋ ಚಾಲಕರು ! ಸಚಿವ ಹೇಳಿದ್ದೇನು?
ಸದ್ಯದ ಆಟೋ ಚಾಲಕರು ಮತ್ತು ಚಾಲಕರು ಆತಂಕ ಪಡದೇ ಯಾವುದೇ ವದಂತಿಗಳಿಗೆ ಕಿವಿ ಕೊಡದೇ ಸಹಕರಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.