ಆರ್ ಎಸ್ ಎಸ್ ಪಥಸಂಚಲನ (ಸಾಂದರ್ಭಿಕ ಚಿತ್ರ)
ಬೆಳಗಾವಿ, ಡಿಸೆಂಬರ್ 10: ಸರ್ಕಾರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮ ಹಾಗೂ ಪಥಸಂಚಲನಕ್ಕೆ ಅವಕಾಶ ನೀಡಬಾರದು. ಆರ್ ಎಸ್ ಎಸ್ (ಆರ್ಎಸ್ಎಸ್) ಸಂವಿಧಾನ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರ ಕೋರ್ಟ್ ಮೆಟ್ಟಿಲೇರಿ, ಕೊನೆಗೂ ಪಥಸಂಚಲನ ನಡೆದಿದ್ದು ಈಗ ಇತಿಹಾಸ. ಅಂಥದ್ದರಲ್ಲಿ, ಈ ವರ್ಷ ಕರ್ನಾಟಕದಾದ್ಯಂತ 518 ಕಡೆ ಆರ್ ಎಸ್ ಎಸ್ ಕಾರ್ಯಕ್ರಮ, ಪಥಸಂಚಲನ ನಡೆದಿದೆ. ಎಲ್ಲಿಯೂ ಗಲಾಟೆ, ದೊಂಬಿ ಆಗಿಲ್ಲ ಎಂದು ಕಾಂಗ್ರೆಸ್ (ಕಾಂಗ್ರೆಸ್) ಸರ್ಕಾರವೇ ಹೇಳಿದೆ!
ಆರ್ ಎಸ್ ಕಾರ್ಯಕ್ರಮಗಳ ಬಗ್ಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ, ಕರ್ನಾಟಕಾದ್ಯಂತ ಒಟ್ಟು 518 ಕಡೆಗಳಲ್ಲಿ ಎಸ್ ಎಸ್ ಎಸ್ ಪಥ ಸಂಚಲನ ನಡೆದಿದೆ. ಅಂದಾಜು 2 ಲಕ್ಷಕ್ಕೂ ಅಧಿಕ ಸ್ವಯಂ ಸೇವಕರು ಇದ್ದರು. ಯಾವುದೇ ಗಲಾಟೆ, ದೊಂಬಿ ಅಥವಾ ಕೋಮು ಗಲಭೆಗಳು ನಡೆದಿಲ್ಲ ಎಂದು ಲಿಖಿತ ಉತ್ತರದಲ್ಲಿ.
ಆರ್ ಎಸ್ ಎಸ್ ಪಥಸಂಚಲನದಿಂದ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಿಲ್ಲವೆಂದ ಸರ್ಕಾರ
ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದಾಗ ಕಲಬುರಗಿ ಸಾರ್ವಜನಿಕ ಕಾನೂನು ಸುವ್ಯವಸ್ಥೆಯ ಕಾರಣ ನೀಡಿತ್ತು. ಆದರೆ, ಇಡೀ ರಾಜ್ಯದಲ್ಲೇ ಆರ್ ಎಸ್ ಎಸ್ ಎಸ್ ಕಾರ್ಯಕ್ರಮಗಳಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸಿಲ್ಲ ಎಂದು ಖುದ್ದು ಈಗ ವಿಧಾನಮಂಡಲ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದಾರೆ.
ಕಲಬುರಗಿ, ಬೆಂಗಳೂರಿನಲ್ಲೇ ಅತಿಹೆಚ್ಚು ಆರ್‌ಎಸ್‌ಎಸ್ ಪಥಸಂಚಲನ
ವಿಶೇಷವೆಂದರೆ, ಗೃಹ ಸಚಿವರ ಉತ್ತರ ಪ್ರಕಾರ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಎರಡನೇ ಅತಿ ಹೆಚ್ಚು (51) ಪಥ ಸಂಚಲನಗಳು ನಡೆದಿವೆ. 6ರಿಂದ ಸಾವಿರಸ್ವಯಂ ಸೇವಕರು7 ಇದ್ದಾರೆ. ಅತಿ ಹೆಚ್ಚು (97) ಪಥಸಂಚಲನಗಳು ಬೆಂಗಳೂರಿನಲ್ಲಿ ನಡೆದಿವೆ. 27 ರಿಂದ 30 ಸಾವಿರ ಸ್ವಯಂ ಸೇವಕರು ಇದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 45 ಪಥಸಂಚಲನಗಳು, ಬಾಗಲಕೋಟೆ ಜಿಲ್ಲೆಯಲ್ಲಿ 33 ಪಥಸಂಚಲನಗಳು, ಬೀದರ್ ಜಿಲ್ಲೆಯಲ್ಲಿ 41 ಪಥಸಂಚಲನಗಳು, ಶಿವಮೊಗ್ಗ ಜಿಲ್ಲೆಯಲ್ಲಿ 19 ಪಥಸಂಚಲನಗಳು, ವಿಜಯಪುರ ಜಿಲ್ಲೆಯಲ್ಲಿ 18 ಪಥಸಂಚಲನಗಳು ನಡೆದಿವೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ತಹಶೀಲ್ದಾರ್
ಉಳಿದಂತೆ ಬೆಳಗಾವಿ 17, ತುಮಕೂರು ಜಿಲ್ಲೆಯಲ್ಲಿ 11, ಚಿತ್ರದುರ್ಗ ಜಿಲ್ಲೆ 11, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10, ಉಡುಪಿ ಜಿಲ್ಲೆಯಲ್ಲಿ 10, ಚಿಕ್ಕಗಳೂರು ಜಿಲ್ಲೆಯಲ್ಲಿ 11, ಯಾದಗಿರಿ ಜಿಲ್ಲೆಯಲ್ಲಿ 12, ರಾಯಚೂರು ಜಿಲ್ಲೆಯಲ್ಲಿ 10 ಪಥಸಂಚಲನಗಳು ನಡೆದಿವೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ