Headlines

ಸರ್ಕಾರದಿಂದ ಹೊರಬಿತ್ತು ಅಧಿಕೃತ ಆದೇಶ: RSS ಸೇರಿ ಇತರೆ ಸಂಘಟನೆಗಳಿಗೆ ಬಿತ್ತು ಮೂಗುದಾರ

ಸರ್ಕಾರದಿಂದ ಹೊರಬಿತ್ತು ಅಧಿಕೃತ ಆದೇಶ: RSS ಸೇರಿ ಇತರೆ ಸಂಘಟನೆಗಳಿಗೆ ಬಿತ್ತು ಮೂಗುದಾರ


ಬೆಂಗಳೂರು, (ಅಕ್ಟೋಬರ್ 18): ಆರ್ ಎಸ್ ಎಸ್ ಸೇರಿದಂತೆ ಇತರೆ ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವುದಕ್ಕೆ ಪೂರ್ವಾನುಮತಿ ಕಡ್ಡಾಯವಾಗಿದೆ. ಮೊನ್ನೆ ಸಚಿವ ಸಂಪುಟದ ನಿರ್ಧಾರದಂತೆ ಸಕ್ಷಮ ಸಭೆ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಇಂದು (ಅಕ್ಟೋಬರ್ 18) ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರಿ ಮತ್ತು ಸರ್ಕಾರಿ ಸ್ವಾಯತ್ತ ಶಾಲಾ-ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಂದ ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ, ಉದ್ಯಾನವನಗಳು, ಆಟದ ಮೈದಾನಗಳು, ಇತರ ತೆರೆದ ಸ್ಥಳಗಳಲ್ಲಿ ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ, ಸಾರ್ವಜನಿಕ ರಸ್ತೆಗಳು, ಸರ್ಕಾರದ ಇತರ ಆಸ್ತಿ ಮತ್ತು ಸ್ಥಳಗಳಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸಂವಿಧಾನ ಬದ್ಧ ನಾಗರಿಕರಿಗೆ ಚ್ಯುತಿ ಉಂಟಾಗದಂತೆ ಮಾರ್ಗಸೂಚಿ ಹೊರಡಿಸಬೇಕು. ಯಾವುದೇ ಚಟುವಟಿಕೆ ಸಾರ್ವಜನಿಕರಿಗೆ ಅಹಿತಕರ ಮತ್ತು ಸಂಸ್ಥೆಗಳ ಮೂಲ ಧ್ಯೇಯಕ್ಕೆ ಧಕ್ಕೆ ಉಂಟಾದಾಗ ಸಕ್ಷಮ ಪ್ರಾಧಿಕಾರಗಳು ನಿರಾಕರಿಸಬೇಕು ಎಂದು ಇಲಾಖೆಗಳಿಗೆ ಒಳಾಡಳಿತ ಇಲಾಖೆ ಸೂಚನೆ ನೀಡಿದೆ.



Source link

Leave a Reply

Your email address will not be published. Required fields are marked *