ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ

ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ


ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಮೊಬೈಲ್ ಸಂಪರ್ಕವಿಲ್ಲ

ಬೆಂಗಳೂರು, ಮಾರ್ಚ್ 13: ಡಿಜಿಟಲ್ ಇಂಡಿಯಾದಂತಹ ಮಹತ್ವಾಕಾಂಕ್ಷಿ ಯೋಜನೆ ನಡೆಸುತ್ತಿರುವ ಭಾರತದಲ್ಲಿ ಬಹಳಷ್ಟು ಹಳ್ಳಿಗಳಿಗೆ ಮೊಬೈಲ್ ನೆಟ್‌ವರ್ಕ್ (ಮೊಬೈಲ್ ನೆಟ್‌ವರ್ಕ್ ಇಲ್ಲವೇ ಇಲ್ಲ. ಲೋಕಸಭೆಯಲ್ಲಿ ದೂರಸಂಪರ್ಕ ಇಲಾಖೆ ಹಂಚಿಕೊಂಡಿರುವ ದತ್ತಾಂಶದ ಪ್ರಕಾರ, 2026ರ ಜನವರಿ 31ರವರೆಗೂ ಮೊಬೈಲ್ ನೆಟ್ವರ್ಕ್ ಇಲ್ಲದ ಹಳ್ಳಿಗಳ ಸಂಖ್ಯೆ 8,985. ಈ ವಿಚಾರದಲ್ಲಿ ಕಳಪೆ ಸಾಧನೆ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಇದೆ.

ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಮೊಬೈಲ್ ನೆಟ್ವರ್ಕ್ ಸ್ಥಾಪನೆಯಾಗಿಲ್ಲ. ದಕ್ಷಿಣ ರಾಜ್ಯಗಳಲ್ಲೇ ಕರ್ನಾಟಕದ್ದು ಹೀನಾಯ ಸಾಧನೆ. ಕೇರಳದಲ್ಲಿ ಪ್ರತೀ ಹಳ್ಳಿಯಲ್ಲೂ ಮೊಬೈಲ್ ನೆಟ್ವರ್ಕ್ ಇದೆ. ತಮಿಳುನಾಡಿನಲ್ಲಿ ಕೇವಲ ಮೂರು ಹಳ್ಳಿಗಳು ನೆಟ್ವರ್ಕ್ನಿಂದ ವಂಚಿತವಾಗಿವೆ. ಕಳಪೆ ಮೊಬೈಲ್ ಕನೆಕ್ಟಿವಿಟಿಯಲ್ಲಿ ದಕ್ಷಿಣ ರಾಜ್ಯಗಳ ಮೇಲೆ ಕರ್ನಾಟಕಕ್ಕೆ ಪೈಪೋಟಿ ನೀಡುತ್ತಿರುವುದು ಆಂಧ್ರ ಮಾತ್ರ. ಅಲ್ಲಿ 394 ಹಳ್ಳಿಗಳಲ್ಲಿ ಮೊಬೈಲ್ ಸಂಪರ್ಕವಿಲ್ಲ. ತೆಲಂಗಾಣದಲ್ಲಿ 228 ಹಳ್ಳಿಗಳಿಗೆ ಈ ನೆಟ್ವರ್ಕ್ ಇಲ್ಲ.

ಇದನ್ನೂ ಓದಿ: 18 ವರ್ಷ ಅಡೋಬ್ ಸಿಐಒ ಆಗಿದ್ದ ಭಾರತ ಮೂಲದ ಶಾಂತನು ನಾರಾಯಣ್ ರಾಜೀನಾಮೆ

ಕರ್ನಾಟಕದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳು ಅರಣ್ಯ ಮತ್ತು ಗುಡ್ಡಗಾಡು ಜಾಗದಲ್ಲಿವೆ. ಉತ್ತರಕನ್ನಡ ಜಿಲ್ಲೆಯೊಂದರಲ್ಲೇ 189 ಇಂಥ ಹಳ್ಳಿಗಳಿವೆ. ಶಿವಮೊಗ್ಗ (75), ಚಿಕ್ಕಮಗಳೂರು (40), ಚಾಮರಾಜನಗರ (25), ಬೆಳಗಾವಿ (19), ಕಲಬುರ್ಗಿ (18) ಜಿಲ್ಲೆಗಳು ನಂತರದ ಸ್ಥಾನ ಪಡೆಯುತ್ತವೆ.

ಮೊಬೈಲ್ ನೆಟ್ವರ್ಕ್ ಇಲ್ಲದ ಅತಿಹೆಚ್ಚು ಹಳ್ಳಿಗಳಿರುವ ರಾಜ್ಯಗಳು

  1. ಒಡಿಶಾ: 1,237
  2. ಅರುಣಾಚಲಪ್ರದೇಶ: 1,185
  3. ಮಧ್ಯಪ್ರದೇಶ: 960
  4. ಮಹಾರಾಷ್ಟ್ರ: 872
  5. ಕರ್ನಾಟಕ: 470

ಇದನ್ನೂ ಓದಿ: ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್‌ಪಿಜಿ ಸಮಸ್ಯೆಗೆ ಎಚ್‌ಸಿಎಲ್‌ನಿಂದ ವರ್ಕ್ ಫ್ರಂ ಹೋಮ್ ಪರಿಹಾರ

ಭಾರತ್‌ನೆಟ್ ಪ್ರಾಜೆಕ್ಟ್‌ನಲ್ಲಿ ಎಲ್ಲೆಡೆ ಕನೆಕ್ಟಿವಿಟಿ

ಸರ್ಕಾರವು ಡಿಜಿಟಲ್ ಇಂಡಿಯಾವನ್ನು ಇನ್ನೂ ಸಮರ್ಪಕವಾಗಿ ಮಾಡಲು ಭಾರತ್ ನೆಟ್ ಪ್ರಾಜೆಟ್ ಜಾರಿಯಲ್ಲಿದೆ. ಈ ಯೋಜನೆ ಅಡಿ ಪ್ರತೀ ಹಳ್ಳಿಗೂ ಬ್ರಾಡ್ಬ್ಯಾಂಡ್ ಕನೆಕ್ಟಿವಿಟಿ ಕೊಡುವ ಗುರಿ ಇದೆ. ಈ ಸ್ಕೀಮ್ ಅಡಿ ಇಲ್ಲಿಯವರೆಗೆ ದೇಶಾದ್ಯಂತ 23,994 ಮೊಬೈಲ್ ಟವರ್ಗಳನ್ನು ಸ್ಥಾಪಿಸಲಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *