Headlines

ಮೆಕ್ಕೆಜೋಳ, ಹೆಸರು ಕಾಳಿಗೆ ಬೆಲೆ ನಿಗದಿಗೆ ಆಗ್ರಹಿಸಿ ಪ್ರಧಾನಿಗೆ ಕರ್ನಾಟಕದಿಂದ ಮನವಿ

ಮೆಕ್ಕೆಜೋಳ, ಹೆಸರು ಕಾಳಿಗೆ ಬೆಲೆ ನಿಗದಿಗೆ ಆಗ್ರಹಿಸಿ ಪ್ರಧಾನಿಗೆ ಕರ್ನಾಟಕದಿಂದ ಮನವಿ


ಮಂಗಳೂರು/ಬೆಂಗಳೂರು, ನವೆಂಬರ್ 28: ಕರ್ನಾಟಕದಲ್ಲಿ ಮೆಕ್ಕೆಜೋಳ, ಹೆಸರು ಕಾಳು ಮತ್ತು ಬೆಳೆಗಳ ದರ ನಿಗದಿಗೆ ಕರ್ನಾಟಕದಿಂದ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಲಾಗಿದೆ. ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಹಿನ್ನಲೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ 2,400 ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ 8,768 ರೂ. ರಂತೆ ಎಂಎಸ್ ಪಿ ಘೋಷಿಸಿದೆ. ಆದರೆ ಕರ್ನಾಟಕದಲ್ಲಿ ಪ್ರಸ್ತುತವಾಗಿ ಮೆಕ್ಕೆಜೋಳಕ್ಕೆ ಮೆಟ್ರಿಕ್ ಟನ್‌ಗೆ 1600-1800 ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ 5,400 ರೂ. ಬೆಲೆ ಇದೆ. ಕರ್ನಾಟಕದಲ್ಲಿ ಪ್ರಸ್ತುತ ಮಾರಾಟವಾಗಲು ಅಂದಾಜು 32 ಲಕ್ಷ ಮೆಟ್ರಿಕ್ ಟನ್ಗಳಷ್ಟು ಮೆಕ್ಕೆಜೋಳಗಳು ಲಭ್ಯವಿದ್ದು, ಈ ಸಮಯದಲ್ಲಿ ಭಾರತ ಸರ್ಕಾರದ ತಕ್ಷಣ ಮಧ್ಯಪ್ರವೇಶ ಮಾಡಿ ದರ ನಿಗದಿಯಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಮ ಮಂದಿರ ಆಂದೋಲನದಲ್ಲಿ ಉಡುಪಿ ಪಾತ್ರವನ್ನು ಸ್ಮರಿಸಿದ ಮೋದಿ

ಪ್ರಧಾನಿ ಬಳಿ ಏನೆಲ್ಲ ಆಗ್ರಹ?

  • ನಾಫೆಡ್, ಎಫ್ ಸಿಸಿಎಫ್ ಮತ್ತು ಎನ್ಎಸ್ಎಸ್ ಪಿಯಲ್ಲಿ ವಿಳಂಬವಿಲ್ಲದೇ ಸಂಗ್ರಹಣೆಯನ್ನು ಪ್ರಾರಂಭಿಸಬೇಕು
  • ಎಥನಾಲ್ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ರೈತರ ನ್ಯಾಯಯುತ ಭಾಗವಹಿಸುವಿಕೆಯನ್ನು ಖಚಿತಪಡಿಸಬೇಕು
  • ಮೆಕ್ಕೆಜೋಳದಿಂದ ಮಾಡುವ ಎಥನಾಲ್‌ಗೆ ಪ್ರೋತ್ಸಾಹಧನ ನೀಡಬೇಕು
  • ಕೇಂದ್ರ ಸರ್ಕಾರವು ಎಥನಾಲ್ ಘಟಕಗಳಿಗೆ ರೈತರಿಂದ ಅಥವಾ ರೈತ ಉತ್ಪಾದಕ ಸಂಸ್ಥೆಗಳಿಂದ ನೇರವಾಗಿ ಮೆಕ್ಕೆಜೋಳವನ್ನು ಸಂಗ್ರಹಿಸಲು ನಿರ್ದೇಶಿಸಬೇಕು
  • ಸಂಗ್ರಹಣೆಯನ್ನು ಖಚಿತಪಡಿಸದಿದ್ದರೆ ಎಥನಾಲ್ ಉತ್ಪಾದಕರಿಗೆ ನೀಡುವ ಪ್ರೋತ್ಸಾಹಕವನ್ನು ಮರು ಪರಿಶೀಲಿಸಬೇಕು
  • ಕರ್ನಾಟಕದ ಎಥನಾಲ್ ಹಂಚಿಕೆಯನ್ನು ಹೆಚ್ಚಿಸಬೇಕು
  • ಮೆಕ್ಕೆಜೋಳದ ಆಮದು ತಕ್ಷಣ ತಡೆಹಿಡಿಯಬೇಕು
  • ಹೆಸರು ಕಾಳು ಸಂಗ್ರಹಣೆಗಾಗಿ ಗುಣಮಟ್ಟದ ಪಟ್ಟಿಗಳನ್ನು ಸಡಿಲಿಕೆ ಮಾಡಬೇಕು
  • ಶೇ. 10ರಷ್ಟು ಬಣ್ಣಗುಂದಿದ ಹೆಸರು ಕಾಳನ್ನು ಎಂಎಸ್ಪಿ ಅಡಿಯಲ್ಲಿ ಸಂಗ್ರಹಿಸಲು ಅವಕಾಶ ನೀಡುವಂತೆ ಆಹಾರ ಮತ್ತು ವಿತರಣಾ ಸಚಿವರಿಗೆ ಸಾರ್ವಜನಿಕ ನಿರ್ದೇಶನ ನೀಡಲಾಗಿದೆ

ಎಮ್ಮೆಗೆ ಸಿಎಂ ಫೋಟೋ ಕಟ್ಟಿ ಆಕ್ರೋಶ

ಮೆಕ್ಕೆ ಜೋಳ ಖರೀದಿ ಕೇಂದ್ರ ಓಪನ್ ಮಾಡದ ಸರ್ಕಾರದ ವಿರುದ್ಧ ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು. ಮಹಾತ್ಮಾ ಗಾಂಧಿ ವೃತ್ತದ ಬಳಿ ಎಮ್ಮೆಗೆ ಸಿಎಂ ಫೋಟೋ ಕಟ್ಟಿ , ಕೃಷಿ ಸಚಿವ ಚಲುವರಾಯಸ್ವಾಮಿ ಭಾವಚಿತ್ರ ಸುತ್ತು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರ ಹಂಚಿಕೆಯಲ್ಲಿ ಮುಳುಗಿರುವ ಸರ್ಕಾರದಿಂದ ರೈತರ ಕಡೆಗಣನೆ ಮಾಡಲಾಗುತ್ತಿದೆ. ಭರವಸೆ ನೀಡಿದಂತೆ ಖರೀದಿ ಕೇಂದ್ರ ಓಪನ್ ಮಾಡುವುದರಿಂದ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *