ಕರ್ನಾಟಕ ಹವಾಮಾನ: ಮುಂದಿನ 3 ದಿನಗಳ ಕಾಲ ಹೇಗಿರಲಿದೆ ವಾತಾವರಣ?

ಕರ್ನಾಟಕ ಹವಾಮಾನ: ಮುಂದಿನ 3 ದಿನಗಳ ಕಾಲ ಹೇಗಿರಲಿದೆ ವಾತಾವರಣ?


ಕರ್ನಾಟಕ ಹವಾಮಾನ: ಮುಂದಿನ 3 ದಿನಗಳ ಕಾಲ ಹೇಗಿರಲಿದೆ ವಾತಾವರಣ?

ಬೆಂಗಳೂರು, ಮಾ.11: ರಾಜ್ಯಾದ್ಯಂತ ಮಾರ್ಚ್ ತಿಂಗಳ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ, ಜನಜೀವನ ಕಂಗೆಟ್ಟಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನವು ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಇಂದು ಕೂಡ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜಧಾನಿಯಲ್ಲಿ ಒಣ ಹವಾಮಾನ ಮುಂದುವರಿಯಲಿದೆ, ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ ತಾಪಮಾನ 21°C ದಾಖಲಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಹೆಚ್ಚಾಗಲಿದೆ. ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲು ಕಡು ತೀವ್ರವಾಗಿರಲಿದೆ, ತಾಪಮಾನವು 38°C ರಿಂದ 40°C ಗಡಿ ತಲುಪುವ ಸಾಧ್ಯತೆ ಇದೆ. ಹೀಗಾಗಿ ‘ಹೀಟ್ ವೆವ್’ (ಹೀಟ್ ವೇವ್) ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಹವಾಮಾನವು ಆರ್ದ್ರತೆಯಿಂದ ಕೂಡಿದ್ದು (ಹ್ಯೂಮಿಡ್), ಸೆಖೆ ಹೆಚ್ಚಲಿದೆ.ದಕ್ಷಿಣ ಒಳನಾಡಿನ ಕೊಡಗು ಮತ್ತು ಚಿಕ್ಕಮಗಳೂರುಗಳಲ್ಲಿ ಕೆಲವು ಕಡೆ ಸಂಜೆ ಅಥವಾ ರಾತ್ರಿ ವೇಳೆಗೆ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಾಗಿದೆ.

ಇದನ್ನೂ ಓದಿ: ಗುಡ್ ನ್ಯೂಸ್: ಬಿಎಂಟಿಸಿ,ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್ ಸಾಕು

ಬಿಸಿಲಿನ ತಾಪದಿಂದ ರಕ್ಷಿಸಲು ಸಾರ್ವಜನಿಕರು ಮಧ್ಯಾಹ್ನ 12 ರಿಂದ 4 ಗಂಟೆಗಳವರೆಗೆ ನೇರ ಬಿಸಿಲಿಗೆ ಒಡ್ಡಿಕೊಳ್ಳಬಾರದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹುಬ್ಬಳ್ಳಿ, ಬೆಳಗಾವಿ ಮತ್ತು ಉಡುಪಿ ನಗರಗಳು ಮುಂದಿನ 3 ದಿನಗಳು (ಮಾರ್ಚ್ 12 – ಮಾರ್ಚ್ 14) ಕಾಲ ವಾತಾವರಣದಲ್ಲಿ ತುಂಬಾ ಬದಲಾವಣೆಗಳು ಆಗಲಿವೆ. ಹೆಚ್ಚು ಬಿಸಿಲಿನ ವಾತಾವರಣದಿಂದ ಭಾಗದಲ್ಲಿ ಇರಲಿದೆ. ಉತ್ತರ ಕರ್ನಾಟಕ (ಹುಬ್ಬಳ್ಳಿ/ಬೆಳಗಾವಿ)ದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದರೆ, ಮಧ್ಯಾಹ್ನದ ಮನೆಯಿಂದ ಹೊರಬರುವಾಗ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *