ವೇತನ ಹಿಂಬಾಕಿಗೆ ಡಿಮ್ಯಾಂಡ್​​: ಜ.29ರಂದು ಸಾರಿಗೆ ನೌಕರರ ಪ್ರತಿಭಟನೆ

ವೇತನ ಹಿಂಬಾಕಿಗೆ ಡಿಮ್ಯಾಂಡ್​​: ಜ.29ರಂದು ಸಾರಿಗೆ ನೌಕರರ ಪ್ರತಿಭಟನೆ


ಬೆಂಗಳೂರು, ಜನವರಿ 18: ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಸಿಡಿದೆದ್ದಿದ್ದು, ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಬೆಂಗಳೂರು ಚಲೋಗೆ ಕರೆನೀಡಿದ್ದಾರೆ. ಜನವರಿ 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ, ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜಂಟಿಕ್ರಿಯಾ ಸಮಿತಿ ಪತ್ರ ಬರೆದಿದೆ. 38 ತಿಂಗಳ ವೇತನ ಹಿಂಬಾಕಿ ನೀಡುವಂತೆ ಹಾಗೂ 01.01.2024 ರಿಂದ 4 ವರ್ಷಗಳ ವೇತನಕ್ಕೆ ಬೇಡಿಕೆ ಇಡಲಾಗಿದೆ, ಪ್ರತಿಭಟನೆಯಲ್ಲಿ 4 ಸಾರಿಗೆ ನಿಗಮಗಳ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.ನೌಕರರ ಈ ಪ್ರತಿಭಟನೆ ಎಚ್ಚರಿಕೆಯ ಇಲಾಖೆಯು ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಪ್ರತಿಭಟನೆಯ ಮುನ್ನವೇ ನೌಕರರ ಬೇಡಿಕೆಗಳನ್ನು ತೋರಿಸುತ್ತದೆ ಅಥವಾ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ನೋಡಬೇಕಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *