ಬೆಂಗಳೂರು, ಡಿಸೆಂಬರ್ 01): ಇ-ಸ್ಟ್ಯಾಂಪಿಂಗ್ (ಇ-ಸ್ಟ್ಯಾಂಪ್) ವ್ಯವಸ್ಥೆಗೆ ರಾಜ್ಯ ಸರ್ಕಾರ ಗುಡ್ ಬೈ ಹೇಳಿದ್ದು, ಇ-ಸ್ಟ್ಯಾಂಪ್‌ನಲ್ಲಿ ಕಾಗದಕ್ಕೆ ಡಿಜಿಟಲ್ ಸ್ಪರ್ಶ ನೀಡಿದೆ. ಕಳೆದ ಅಕ್ಟೋಬರ್‌ನಿಂದಲೇ ಕರ್ನಾಟಕದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್ (ಡಿಜಿಟಲ್ ಇ-ಸ್ಟಾಂಪಿಂಗ್) ಜಾರಿಗೆ ಬಂದಿದೆ. ಇ-ಸ್ಟ್ಯಾಂಪ್ ಬದಲಿಗೆ ಇನ್ಮುಂದೆ ಡಿಜಿಟಲ್ ಇ-ಸ್ಟ್ಯಾಂಪ್ ಬಳಕೆಗೆ ಸೂಚಿಸಲಾಗಿದೆ. ಆದರೆ, ಜನರಲ್ಲಿ ಅರಿವು ಮೂಡುವವರೆಗೆ ಹಳೆಯ ಇ-ಸ್ಟ್ಯಾಂಪ್ ಬಳಕೆಯಲ್ಲಿರುತ್ತೆ. ಈ ಬಗ್ಗೆ ಕಲಾವಿದ ಕೃಷ್ಣಬೈರೇಗೌಡ (ಕೃಷ್ಣ ಬೈರೇಗೌಡ) ಮಾಹಿತಿ.
ವಿಕಾಸಸೌಧದಲ್ಲಿ ಇಂದು (ಡಿಸೆಂಬರ್ 01) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಇನ್ನು ಮುಂದೆ ಡಿಜಿಟಲ್ ಛಾಪಾ ಕಾಗದಗಳ ಬಳಕೆಗೆ ಹೆಚ್ಚು ಒತ್ತು ಕೊಡಬೇಡಿ. ಹಂತಹಂತವಾಗಿ ಇ-ಸ್ಟ್ಯಾಂಪ್‌ಗಳನ್ನು ನಿಲ್ಲಿಸಲಾಯಿತು. ಡಿಜಿಟಲ್ ಇ ಛಾಪಾಕ್ಕೆ ಮತ್ತಷ್ಟು ಬಲ ತುಂಬಲು ಡಿಜಿಟಲ್ ಸಹಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಅದಕ್ಕಾಗಿ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ-2025 ಜಾರಿಯಾಗಿದೆ.
ಇದನ್ನೂ ಓದಿ: ಹಳ್ಳಿ ಹಳ್ಳಿಗೂ ಬಂತು ಈ-ಸ್ವತ್ತು; ಸುಲಭವಾಗಿ ಇ-ಖಾತಾ ಮಾಡುವುದು ಹೇಗೆ?
ಆಧಾರ್ ದೃಢೀಕರಣ ಕಡ್ಡಾಯ
ಇನ್ನು ಮಂದೆ ಇ-ಸ್ಟ್ಯಾಂಪ್ ಬದಲಿಗೆ ಡಿಜಿಟಲ್ ಆಯ್ಕೆ-ಇಸ್ಟ್ಯಾಂಪ್ ವಿತರಿಸಲಾಗಿದೆ. ಸ್ಟಾಂಪಿಂಗ್ ದುರ್ಬಳಕೆ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ. ನಕಲಿ ಚಲನ್ ಕೊಟ್ಟು ಉಪ ನೋಂದಣಾಧಿಕಾರಿಗಳಿಂದ ಛಾಪಾ ಪಡೆಯುವುದಕ್ಕೆ ಕಡಿವಾಣ ಹಾಕಲು, ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಮತ್ತು ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬಲ ನೀಡಲಾಗುತ್ತಿದೆ. ಇದಕ್ಕೆ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲಾಗಿದೆ ಎಂದು ಸ್ಥಾಪಿಸಲಾಗಿದೆ.
ಮನೆಯಲ್ಲಿ ಕೂತು ಡಿಜಿಟಲ್ ಇಸ್ಟ್ಯಾಂಪ್ ಖರೀದಿಸಬಹುದು
ನೋಂದಣಿಯಾಗದ ಅಗ್ರಿಮೆಂಟ್‌ಗಳಿಗೆ ಡಿಜಿಟಲ್ ಇ ಸ್ಟ್ಯಾಂಪ್ ಅನ್ವಯಿಸಲಿದೆ. ಛಾಪಾ ಕಾಗದ ಅವುಗಳನ್ನು ಮಾರಾಟ ಮಾಡುವ ಸ್ಥಳಗಳಿಗೆ ಜನ ಹೋಗಬೇಕಾಗಿತ್ತು. ಈಗ ಮನೆಯಲ್ಲಿ ಕೂತು ಛಾಪಾ ಕಾಗದ ಖರೀದಿ ಮಾಡಬಹುದು. ಮಧ್ಯವರ್ತಿಗಳ ಮೇಲೆ ಅವಲಂಬಿತವಾಗಬೇಕಿಲ್ಲ. ಇದು ಪೂರ್ತಿ ಆನ್‌ಲೈನ್‌ನಲ್ಲಿ ಭದ್ರತೆಯಲ್ಲಿರುತ್ತೆ. ಈ ಮೊದಲು ಕಳೆದು ಹೋದರೆ ದಾಖಲೆ ಇರಲಿದೆ. ಈಗ ಒಂದು ಬಾರಿ ಅಗ್ರಿಮೆಂಟ್ ಮಾಡಿಕೊಂಡ್ರೆ ಡಿಜಿಟಲ್ ಮೂಲಕ ದಾಖಲೆ ಭದ್ರವಾಗಿ ಇರಲಿದೆ. ಬೇಕಾದಾಗ ಇದನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ಎಲ್ಲಾ ಸ್ವರೂಪದ ಡಿಜಿಟಲ್ ಅಗ್ರಿಮೆಂಟ್ ಮಾಡಲು ಅವಕಾಶವಿದೆ. ನಂಬರ್, ಕ್ಯೂರ್ ಕೋಡ್ ಇರುತ್ತದೆ. ಡಿಜಿಟಲ್ ಚಾಪಾಕಾಗದ ಫೀಸ್ ಕೂಡ ಹೆಚ್ಚಾಗುವುದಿಲ್ಲ. ಆಧಾರ್ ಕೊಟ್ಟು ಒಟಿಪಿ ಬಂದ ನಂತರ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಯಾರ ನಡುವೆ ಅಗ್ರಿಮೆಂಟ್ ಆಗುತ್ತೆ ಅವರು ಆಧಾರ್ ಕೊಟ್ಟು ಒಟಿಪಿ ಬಂದ್ಮೇಲೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ.
ಈ ಸ್ಟ್ಯಾಂಪ್ ಹೇಗೆ ದುರುಪಯೋಗವಾಗ್ತಿತ್ತು?
ಛಾಪಾ ಕಾಗದದ ಹಿಂದೆ ದೊಡ್ಡ ಹಗರಣವಾಗಿತ್ತು. ಹೀಗಾಗಿ ಈ ಸ್ಟ್ಯಾಂಪ್ ಚಲಾವಣೆಗೆ ಬಂತು. ಈ ಸ್ಟ್ಯಾಂಪ್‌ನಲ್ಲೂ ದುರುಪಯೋಗ ಕಂಡುಬಂದಿದೆ. ಕಳೆದ ಎರಡು ವರ್ಷಗಳಿಂದ ಯಾವ ರೀತಿ ದುರುಪಯೋಗ ಆಗುತ್ತಿದೆ ಎಂದು ಹೇಳಿದ್ದಾರೆ. ಕಲರ್ ಜೆರಾಕ್ಸ್ , ಕಲರ್ ಪ್ರಿಂಟ್ ಮೂಲಕ ದುರುಪಯೋಗವಾಗಿದೆ. ಛಾಪಾ ಕಾಗದವನ್ನ ಸುಮಾರು 54 ವಿಷಯಗಳಲ್ಲಿ ಬಳಸಲಾಗ್ತಿದೆ. ಕೆಲ ಛಾಪಾ ಕಾಗದಕ್ಕೆ 100ರೂ., 500 ರೂ. ಹಾಗೆ ಸ್ವತ್ತಿನ ಮೌಲ್ಯ ಇರುತ್ತದೆ. ಇದರಲ್ಲಿ 100 ರೂ. ಈ ಸ್ಟ್ಯಾಂಪ್ ತಗೊಂಡು 1 ಸಾವಿರ ರೂ. ಮೌಲ್ಯದ ಕೆಲಸಗಳಿಗೆ ಬಳಕೆ ಆಗುತ್ತಿದೆ. ಈ ರೀತಿಯ ದುರುಪಯೋಗಕ್ಕೆ ಕಡಿವಾಣ ಹಾಕಬೇಕಾಗಿದೆ.
ಈ ಸ್ಟ್ಯಾಂಪ್ ನಿಲ್ಲಿಸಲು ಜನರಿಗೆ ಅರಿವು ಮೂಡುವವರೆಗೆ ಇಸ್ಟ್ಯಾಂಪ್ ಇರಲಿದೆ, ನಾಗರಿಕರ ಆದ್ಯತೆಗೆ ಹೆಚ್ಚಿನ ಒತ್ತುನೀಡಬೇಕಾಗಿದೆ. ಹೀಗಾಗಿ ಡಿಜಿಟಲ್ ಇಸ್ಟ್ಯಾಂಪ್ ಜಾರಿ ಮಾಡಿದ್ದೇವೆ. ಸರ್ಕಾರಿ ಉದ್ಯೋಗ ಸೇರಿ ಅನೇಕ ವಿಚಾರಗಳಿಗೆ ಅಫಿಡೆವಿಟ್ ಕೇಳ್ತಾರೆ.. ಮನೆ ಬಾಡಿಗೆ ಅಗ್ರಿಮೆಂಟ್ ಗೂ ಬಳಕೆಯಾಗ್ತಿದೆ ಎಂದು ಹೇಳಿದರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.