ಮದ್ಯದ ದರ ಹೆಚ್ಚಿಸಿದ ಸರ್ಕಾರ; ಹೊಸ ವರ್ಷಕ್ಕೆ ಮದ್ಯ ಪ್ರಿಯರಲ್ಲ ಕ್ರೇಜ್
ಚಾಮರಾಜನಗರ, ಡಿಸೆಂಬರ್ 15: ಹೊಸ ವರ್ಷವನ್ನು (ಹೊಸ ವರ್ಷ 2026) ಜೋಶ್ನಿಂದ ಸ್ವಾಗತಿಸಲು ಅನೇಕ ಮಂದಿ ಸಿದ್ಧರಾಗಿರುತ್ತಾರೆ. ಗುಂಡು, ತುಂಡು , ಡಿಜೆ , ಪಬ್ಬು ಎಂದೆಲ್ಲಾ ಭರ್ಜರಿ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ. ಆದರೆ ಸರ್ಕಾರ ಮದ್ಯದ ದರ ಹೆಚ್ಚಿಸಿದೆ ಈ ಬಾರಿ ಚಾಮರಾಜನಗರದಲ್ಲಿ ಮದ್ಯ ಮಾರಾಟ ಭಾರೀ ಕುಂಠಿತ ಕಂಡಿದೆ. ಜಿಲ್ಲೆಯಲ್ಲಿ ಮೊದಲು ನೀರಿನಂತೆ ಮಾರಾಟವಾಗುತ್ತಿದ್ದ ಬಿಯರ್ ಅನ್ನು ಈಗ ಜನ ತಿರುಗಿಯೂ ನೋಡುತ್ತಿಲ್ಲ.
ಬಿಯರ್ ಕಡೆ ಜನ ಮುಖಾನೂ ಹಾಕ್ತಿಲ್ಲ
ರಾಜ್ಯದಲ್ಲಿ ಕಡಿಮೆ ಬೆಲೆಗೆ ಅತಿ ಹೆಚ್ಚು ಬಿಯರ್ ಮಾರಾಟವಾಗುವ ಜಿಲ್ಲೆಗಳಲ್ಲಿ ಚಾಮರಾಜನಗರ 2ನೇ ಸ್ಥಾನ ಪಡೆದಿತ್ತು. ಕಳೆದ ವರ್ಷಕ್ಕೆ ಈ ವರ್ಷ ಚಾಮರಾಜನಗರ ಚೀಪರ್ ಬಿಯರ್ ಮಾರಾಟದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯಲಿದೆ ಎಂದು ಅಂದಾಜಿಸಲಾಯಿತು. ಇದೀಗ ಈ ಅಂದಾಜಿಗೆ ತೆರೆ ಬಿದ್ದಿದೆ. ರಾಜ್ಯಸರ್ಕಾರ ಮದ್ಯದ ದರ ಹೆಚ್ಚಿಸಿದ್ದು, ಅಬಕಾರಿ ಇಲಾಖೆ ಭಾರೀ ನಷ್ಟಕ್ಕೆ ಗುರಿಯಾಗಿದೆ. ಮೊದಲೆಲ್ಲಾ ಜಿಲ್ಲೆಯ ನೀರಿನ ಬಾಟೆಲ್ಗಳ ರೀತಿಯಲ್ಲಿ ಬಿಯರ್ ಸೇಲ್ ಆಗುತ್ತಿದೆ, ದರ ಏರಿಕೆಯ ನಂತರ ಮದ್ಯದಂಗಡಿ ಕಡೆ ಜನ ಮುಖವನ್ನೂ ಹಾಕುತ್ತಿಲ್ಲ. ರಾಜ್ಯ ಸರ್ಕಾರ ಅಬಕಾರಿ ಇಲಾಖೆಯ ಮೇಲೆ ಅತಿ ಹೆಚ್ಚು ಸುಂಕ ವಿಧಿಸಲು ಪ್ರಾರಂಭಿಸಿದೆ, ದರದಿಂದ ಜನ ಮದ್ಯಪಾನ ಮಾಡುವುದನ್ನೇ ಕೈ ಬಿಟ್ಟಿದ್ದಾರೆ ಎಂದು ಅಬಕಾರಿ ಇನ್ಸ್ಪೆಕ್ಟರ್ ತನ್ವೀರ್ ಹೇಳಿದ್ದಾರೆ.
ಇದನ್ನೂ ಓದಿ ಹೊಸ ವರ್ಷ: ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ತಯಾರಿ ಜೋರು, ನಗರದಾದ್ಯಂತ ಹೈ ಅಲರ್ಟ್
ಅಬಕಾರಿ ಇಲಾಖೆಗೆ ಬಿಗ್ ಲಾಸ್
ಕಳೆದ 6 ತಿಂಗಳಿನಲ್ಲಿ ಸ್ಲ್ಯಾಬ್ 1 ಚೀಪರ್ ವಿಸ್ಕಿಗಳಲ್ಲಿ ಶೇಕಡ 14.38ರಷ್ಟು ಮಾರಾಟವಾಗದ ನಷ್ಟದಿಂದಾಗಿ, 28798 ಕೇಸ್ ವಿಸ್ಕಿ ಮಾರಾಟವಾಗದೆ ಉಳಿದಿದೆ. ಕಳೆದ ವರ್ಷ ಇನ್ನಿಲ್ಲದೆ ಬಿಕರಿಯಾಗುತ್ತಿದ್ದ ಬಿಯರ್ಗಳು ಕಳೆದ 6 ತಿಂಗಳಿನಲ್ಲಿ 70642 ಕೇಸ್ನಷ್ಟು ಬಿಯರ್ ಮಾರಾಟವಾಗದೆ ಭಾರೀ ನಷ್ಟಕ್ಕೆ ಗುರಿಯಾಗಿದೆ. ಮದ್ಯದ ದರ ದಿನ ಕಳೆದಂತೆ ರಾಕೆಟ್ ವೇಗದಲ್ಲಿ ಏರುತ್ತಿರುವ ಕಾರಣ ಗಡಿ ನಾಡ ಮದ್ಯ ಪ್ರಿಯರು ಮದ್ಯವನ್ನು ತ್ಯಜಿಸಿದ್ದು, ವ್ಯಾಪಾರ ಕುಂಠಿತಗೊಂಡು ಅಬಕಾರಿ ಇಲಾಖೆ ನಷ್ಟ ಅನುಭವಿಸುತ್ತಿದೆ ಎಂದು ತನ್ವೀರ್ ಹೇಳಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.