ಲೋಕಾಯುಕ್ತ ಭರ್ಜರಿ ಬೇಟೆ: ಸರ್ಕಾರಿ ಅಧಿಕಾರಿಗಳ ಬಳಿ ಸಂಪತ್ತಿನ ಕೋಟೆ ಬಯಲು

ಲೋಕಾಯುಕ್ತ ಭರ್ಜರಿ ಬೇಟೆ: ಸರ್ಕಾರಿ ಅಧಿಕಾರಿಗಳ ಬಳಿ ಸಂಪತ್ತಿನ ಕೋಟೆ ಬಯಲು


ಬೆಂಗಳೂರು, ಮಾರ್ಚ್ 05: ಇಂದು ಕರ್ನಾಟಕ ಲೋಕಾಯುಕ್ತ (ಲೋಕಾಯುಕ್ತ ದಾಳಿ) ಅಧಿಕಾರಿಗಳು ಕರ್ನಾಟಕದ 8 ಜಿಲ್ಲೆಯಲ್ಲಿ 9 ಅಧಿಕಾರಿಗಳು ಮನೆ ಸೇರಿದಂತೆ 50 ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಆದಾಯ ಮೀರಿದ ಆಸ್ತಿಗಳ ಹಿನ್ನೆಲೆ ಇಂದು ಬೆಳ್ಳಂಬೆಳಗ್ಗೆ 9 ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇನ್ನು ದಾಳಿ ವೇಳೆ ಸಂಪತ್ತಿನ ಕೋಟೆ ಬಯಲಾಗಿದೆ.

ಕರ್ನಾಟಕದಲ್ಲಿ ಇಂದು ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ. ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿರುವ ಲೋಕಾಯುಕ್ತ ನ್ಯಾಯಾಲಯ ಬರೋಬ್ಬರಿ 9 ಅಧಿಕಾರಿಗಳು ಸಂಪತ್ತಿನ ಕೋಟೆ ಬಯಲು ಮಾಡಿದ್ದಾರೆ. ಹಾಗಾದರೆ ಇಂದು ಏನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಳಿಗೆ ಒಳಗಾದ ಸರ್ಕಾರಿ ಅಧಿಕಾರಿಗಳು ಯಾರೆಲ್ಲಾ, ಕೆಲಸ ಮಾಡುತ್ತಿದ್ದರು, ಅವರ ಮನೆಯಲ್ಲಿ ಏನೆಲ್ಲಾ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

ಯಾವೆಲ್ಲಾ ಅಧಿಕಾರಿಗಳು: ಏನೆಲ್ಲಾ ಸಿಕ್ತು

1) ಶಶಿಧರ್: ಸಿಐಒ, ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘ ಯಲಹಂಕ, ಬೆಂಗಳೂರು. 5,15,86,000 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆ ಆಗಿದೆ. ಅಸಮತೋಲನ ಆಸ್ತಿ 3,43,86,000 ರೂ.

2) ಹೆಚ್ ಸಿ ಇಂದರೇಶ್ ಗೌಡ: ಸಹಾಯಕ ಪ್ರೊಫೆಸರ್, ವೆಟರ್ನರಿ ಕಾಲೇಜು ಹೆಬ್ಬಾಳ, ಬೆಂಗಳೂರು. 2,53,04,600 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ 1,88,04,600 ರೂ.

ಇದನ್ನೂ ಓದಿ: ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು!

3) ವಸಂತ್ ನಾಯ್ಕ್: ಚೀಫ್ ಇಂಜಿನಿಯರ್ ಕೆ ಆರ್ ಡಿ ಎಲ್, ಬೆಂಗಳೂರು. 6,40,49,680 ರೂ. ಮೌಲ್ಯದ ಚರ, ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ 4,41,00,212 ರೂ.

4) ವಿರೇಶ್ ಹಿರೇಮಠ: ಡೆಪ್ಯೂಟಿ ಇಲೆಕ್ಟಿಕ್ ಇನ್ಸ್ಪೆಕ್ಟರ್, ಇಲಿಟಿಕಲ್ ಡಿಪಾರ್ಟ್ಮೆಂಟ್, ಯಾದಗಿರಿ. 1,54,53,193 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 1,54,53,192 ರೂ.

5) ಎಸ್ ಸತೀಶ್, AEE, PWD ಇಲಾಖೆ, ಮಂಡ್ಯ. 4,46,58,976 ರೂ. ಮೌಲ್ಯದ ಚರ, ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 3,01,58,976 ರೂ.

6) ಎಂ ಕೆ ಸುರಕೋಡ: ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ, ಧಾರವಾಡ. 2,12,33,566 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 1,82,33,566 ರೂ.

7) ಎಂ ಸಿ ಸತ್ಯನಾರಾಯಣ: ಇಐಐ , ಮಹಾನಗರ ಪಾಲಿಕೆ ಹಾಸನ. 7,45,08,390 .ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ಥಿ ಪತ್ತೆ, ಅಸಮತೋಲನ ಆಸ್ತಿ- 6,82,54,406 ರೂ.

8) ಆಶಿಫ್ ಇಕ್ಬಾಲ್: EII ಮತ್ತು II ಜಲಮಂಡಲಿ. ಜಲಭವನ ಮೈಸೂರು. 8,81,31,851 ರೂ. ಮೌಲ್ಯದ ಚರ, ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 6,89,44,806 ರೂ.

9) ಪ್ರಕಾಶ್ ಪಿ ಜಿ: ಜೂನಿಯರ್ ಇಂಜಿನಿಯರ್ ಕೃಷ್ಣ ಭಾಗ್ಯ ಜಲ ನಿಗಮ, ವಿಜಯಪುರ 4,60,97,500 ರೂ. ಮೌಲ್ಯದ ಚರ, ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 4,60,97,500 ರೂ.

ಇದನ್ನೂ ಓದಿ: ಲೋಕಾಯುಕ್ತ ಅಧಿಕಾರಿಗಳನ್ನೇ 4 ಗಂಟೆ ಕಾಯಿಸಿ ಮನೆ ಬಾಗಿಲು ತೆರೆದ ಹಾಸನ ಮಹಾನಗರಪಾಲಿಕೆ ಇಂಜಿನಿಯರ್!

ಸರ್ಕಾರಿ ಅಧಿಕಾರಿಗಳು ಬಳಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕ ನಗದು, ಚಿನ್ನಾಭರಣ, ಐಶಾರಾಮಿ ಮನೆ, ಕಾರು, ನಿವೇಶನಗಳನ್ನು ಜಪ್ತಿ ಮಾಡಿದ್ದಾರೆ. ಅದರಲ್ಲೂ ಹಾಸನದ ಸತ್ಯನಾರಾಯಣ ಮನೆಯಲ್ಲಿ ಇನ್ನೂ ಪರಿಶೀಲನೆ ಮುಂದುವರಿದಿದ್ದು, ಅವರ ಆಸ್ತಿ ಬಗ್ಗೆ ನಾಳೆ ಸಂಪೂರ್ಣ ಮಾಹಿತಿ ಸಿಗಲಿದೆ. ಸದ್ಯ ಈ ಸರ್ಕಾರಿ ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿಯಲ್ಲಿ ಕಂಡು ಬಂದ ಅಸಮತೋಲನ ಆಸ್ತಿ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ, ಕಾನೂನಿ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *