
ಬೆಂಗಳೂರು, ಮಾರ್ಚ್ 15: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ಅದರಲ್ಲೂ ಹೋಟೆಲ್ ಉದ್ಯಮವಂತೂ ಬಹಳ ಸಮಸ್ಯೆಗೆ ಸಿಲುಕಿದೆ, ಹಲವೆಡೆ ರೆಸ್ಟೋರೆಂಟ್‌ಗಳು ಬಂದ್ ಆಗ, ಇನ್ನು ಕೆಲವು ಹೋಟೆಲ್‌ಗಳ ಮೆನುವಿನಲ್ಲಿ ಭಾರಿ ಕಡಿತ ಮಾಡಿ ಗ್ರಾಹಕರಿಗೆ ಸೇವೆ ಒದಗಿಸಲಾಗಿದೆ. ಇದೆಲ್ಲದರ ಪರಿಣಾಮ ಎಂಬಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 5 ದಿನಗಳಲ್ಲಿ 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ, ಹೋಟೆಲ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಟ್ಯಾಕ್ಸ್ ವಿನಾಯಿತಿಗೆ ಸರ್ಕಾರಕ್ಕೆ ಮನವಿ
ಬೆಂಗಳೂರಿನಲ್ಲಿ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳು, ಈ ಎತ್ತರ 4,500 ಹೋಟೆಲ್‌ಗಳು ರಿಜಿಸ್ಟರ್ ಆಗಿವೆ. ಇವೆಲ್ಲವೂ ಕೂಡ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದ ಸಮಸ್ಯೆಗೆ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ. ಹೀಗಾಗಿ ಟ್ಯಾಕ್ಸ್ ವಿನಯತಿ ನೀಡುವಂತೆ ಹೋಟೆಲ್ ನಮಗೆ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ . ಪ್ರಾಪರ್ಟಿ ತೆರಿಗೆ ಸೇರಿ ಎಲ್ಲ ವಿಧದ ಟ್ಯಾಕ್ಸ್‌ನಿಂದ ಶೇ.20 ರಿಂದ 25ರಷ್ಟು ವಿನಾಯಿತಿ ನೀಡುವಂತೆ ಕೋರಲಾಗಿದೆ. ಇನ್ನು ನಾಳೆಯಿಂದ ರಾಜ್ಯದ ಹೋಟೆಲ್‌ಗಳಿಗೆ ಶೇ.20ರಷ್ಟು ಎಲ್‌ಪಿಜಿ ಸಿಲಿಂಡರ್ ಪೂರೈಕೆಯಾಗಲಿದೆ ಎಂದು ಕೇಂದ್ರದಿಂದ ಸೂಚನೆ ಬಂದಿದ್ದು, ಇದು ನೆರವೇರದಿದ್ದರೆ ಹೋಟೆಲ್ ಉದ್ಯಮ ಕೊಂಚ ಉಸಿರಾಡಬಹುದು ಎಂದು ಆಹಾರೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸರ್ಕಾರದಿಂದ ಎಲ್ ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ
ಹಬ್ಬದ ಹೋಳಿಗೆ ತಯಾರಿಯೂ ಸಿಗ್ತಿಲ್ಲ LPG ಸಿಲಿಂಡರ್
ಇನ್ನೇನು ಯುಗಾದಿ ಹಬ್ಬ ಸಮೀಪಿಸುತ್ತಿದ್ದು ಹೋಳಿಗೆ ಬೇಡಿಕೆ ಹೆಚ್ಚಾಗಬಹುದು. ಆದರೆ ಸಿಲಿಂಡರ್ ಕೊರತೆ ಇವುಗಳ ತಯಾರಿಕೆಯ ಮೇಲೆ ಪ್ರಭಾವ ಬೀರಿದೆ. ವೆರೈಟಿ ಹೋಳಿಗೆ ತಯಾರಿಸುವ ಸಲುವಾಗಿ ಹೋಳಿಗೆ ಮನೆಗಳು ಬಂದ್ ಆಗಿದ್ದು, ಸಂಪಿಗೆ ರಸ್ತೆಯ ಹಳ್ಳಿಮನೆ ಹೋಟೆಲ್ ಹಬ್ಬದ ಹೋಳಿಗೆ ಮತ್ತೊಂದು ಸೌದೆ ಓಲೆ ಮೋರೆ ಹೋಗುತ್ತಿರುವ ದೃಶ್ಯ ಕಂಡುಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.