Headlines

ಗ್ಯಾಸ್ ಟ್ರಬಲ್: ಹೋಟೆಲ್ ಮಾಲೀಕರು ವಿಲ ವಿಲ; ಸೌದೆ ಒಲೆ ದರ ದುಪ್ಪಟ್ಟು

ಗ್ಯಾಸ್ ಟ್ರಬಲ್: ಹೋಟೆಲ್ ಮಾಲೀಕರು ವಿಲ ವಿಲ; ಸೌದೆ ಒಲೆ ದರ ದುಪ್ಪಟ್ಟು


ಗ್ಯಾಸ್ ಟ್ರಬಲ್: ಹೋಟೆಲ್ ಹೋಟೆಲ್ ವಿಲ ವಿಲ; ಸೌದೆ ಓಲೆ ದರ ದುಪ್ಪಟ್ಟು

ಬೆಂಗಳೂರು, ಮಾರ್ಚ್ 21: ಇಸ್ರೇಲ್-ಇರಾನ್ ಯುದ್ಧದಿಂದ ಭಾರತದಲ್ಲಿ ಗ್ಯಾಸ್ ಸಮಸ್ಯೆ ದಿನೇ ದಿನೇ ಭುಗಿಲೇಳ್ತಿದೆ. ಹೋಟೆಲ್ ಗ್ಯಾಸ್ ಸಿಲಿಂಡರ್ (ಗ್ಯಾಸ್ ಸಿಲಿಂಡರ್) ಸಿಗದೆ ಪರದಾಡುತ್ತಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದ ಉತ್ತರ ಕರ್ನಾಟಕ ಶೈಲಿಯ ಖಾನಾವಳಿಯಲ್ಲಿ ಸಿಲಿಂಡರ್ ಸಂಕಷ್ಟ ಎದುರಾಗಿದೆ. ಕಲಬುರಗಿಯಿಂದ ಬೆಂಗಳೂರಿಗೆ ಸೌದೆ ತರಿಸಿದ್ದಾರೆ. ಸೌದೆ ಒಲೆ ಮೇಲೆ ಅಡುಗೆ ಮಾಡ್ಬೇಡಿ ಅಂತಾ ಬಿಲ್ಡಿಂಗ್ ಕೊಡ್ತಿದ್ದಾರಂತೆ.

ಸೌದೆ ಒಲೆ 4-5 ಸಾವಿರ ರೂ ಏರಿಕೆ

ಬೆಂಗಳೂರಿನ ಆರ್ ಆರ್ ನಗರದ ವಿಷ್ಣು ಭವನ್ ಹೋಟೆಲ್ ನಲ್ಲೂ ಸೌದೆ ಒಲೆಯಲ್ಲೇ ಅಡುಗೆ ಮಾಡಲಾಗುತ್ತಿದೆ. ಗ್ಯಾಸ್ಸ್ಟೌನಲ್ಲಿನ ಗಂಟೆಯಲ್ಲಿ ಆಗ್ತಿದ್ದ ಕೆಲಸವೀಗ, ನಾಲ್ಕೈದು ಗಂಟೆ ತೆಗೆದುಕೊಳ್ಳುತ್ತಿದೆ. ಮೊದಲು 2000ಕ್ಕೆ ಸಿಕ್ತಿದ್ದ ಸೌದೆ ಓಲೆ, ಈಗ 4-5 ಸಾವಿರ ರೂ ಏರಿಕೆಯಾಗಿದೆ. ದುಡ್ಡು ಕೊಟ್ಟರೂ ಸೌದೆ ಓಲೆ ಸಿಗದ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಆರೋಗ್ಯ ಕ್ಷೇತ್ರಕ್ಕೂ ತಟ್ಟಿದ ಯುದ್ಧದ ಬಿಸಿ; ಸಿಲಿಂಡರ್ ಇಲ್ಲದೆ ರೋಗಿಗಳಿಗೂ ಪ್ರಾಬ್ಲಮ್!

ವಾಣಿಜ್ಯ ಸಿಲಿಂಡರ್ ಸಿಗದೆ ಬನಶಂಕರಿಯ ರಾಜೇಶ್ವರಿ ಕೆಫೆಗೆ ಸಂಕಷ್ಟ ಎದುರಾಗಿದೆ. ಸೌದೆ ಒಲೆಯಲ್ಲಿ
ಅಡುಗೆ ಮಾಡ್ತಿದ್ದಾರೆ., ಮೆನುವಿನಲ್ಲಿದ್ದ ಐಟಮ್ ಕಡಿಮೆಯಾಗಿದೆ. 50 ವರ್ಷಗಳ ಇತಿಹಾಸವಿರೋ ಕಾರ್ಪೊರೇಷನ್ ಬಳಿಯ ಪೈ ವಿಹಾರ್‌ಗೂ ಗ್ಯಾಸ್ ಟ್ರಬಲ್ ಆಗಿದೆ. ಸೌದೆ ಒಲೆಯಲ್ಲಿ ಅಡುಗೆ ಮಾಡೋದು ಹೋಟೆಲ್ ಸಿಬ್ಬಂದಿಗೆ ಸವಾಲಾಗಿದೆ. ಶೀಘ್ರ ಬಿಕ್ಕಟ್ಟು ಪರಿಹರಿಸುವಂತೆ ಒತ್ತಾಯಿಸಿದ್ದಾರೆ.

30 ವರ್ಷಗಳಿಂದ ಸೇವೆ ನೀಡುತ್ತಿದ್ದ ಎನ್ ಆರ್ ಕಾಲೋನಿ ಉಪಹಾರ ದರ್ಶಿನಿಯಲ್ಲೂ ಸೌದೆ ಒಲೆಯಲ್ಲೇ ಸೀಮಿತ ಆಹಾರ ಪದಾರ್ಥ ಮಾಡ್ತಿದ್ದಾರೆ. ಕೆಲ ಆಹಾರ ಪದಾರ್ಥದ ದರ ಏರಿಕೆ, ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಸಿಗದೆ ಮೆನುವಿನಲ್ಲಿ ಆಹಾರ ನೀಡಲಾಗದೆ ಪಿಜಿ ಶಿಫಾರಸು ಪರದಾಡ್ತಿದ್ದಾರೆ. ಸಜ್ಜನ್ ರಾವ್ ಸರ್ಕಲ್ ನ ಸಿಂಪೋನಿ ಪಿಜಿಯಲ್ಲಿ ಸಮರ್ಪಕ ಆಹಾರ ಸಿಗುತ್ತಿಲ್ಲ ಎಂದು ಉದ್ಯೋಗಿಗಳು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಪಿಜಿ ಸಿಲಿಂಡರ್‌ಗೆ ಮುಗಿದ ಗ್ರಾಹಕರು

ಬಳ್ಳಾರಿ ಜಿಲ್ಲೆ ಕುರುಗೋಡಿಗೆ ಗ್ಯಾಸ್ ಬಂದಿದೆ ಅನ್ನೋದು ಗೊತ್ತಾಗ್ತಿದ್ದಂತೆ ಗ್ರಾಹಕರು ಮುಗಿಬಿದ್ದಿದ್ದರು. ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದು ಸಿಲಿಂಡರ್ ಆಗಿದ್ದಾರೆ. ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲೂ ಕ್ಯೂನಲ್ಲಿ ನಿಂತು ಗ್ರಾಹಕರು ಗ್ಯಾಸ್ ಖರೀದಿಸಿದ್ದಾರೆ. ಬೀದರ್‌ನಲ್ಲಿ 11 ದಿನದಿಂದಲೂ ಗ್ಯಾಸ್ ಸಿಗ್ತಿಲ್ಲ. ಗ್ಯಾಸ್ ಏಜೆನ್ಸಿ ಮುಂದೆ ಕ್ಯೂ ನಿಂತುಕೊಂಡ ನೂರಕ್ಕೂ ಹೆಚ್ಚು ಜನರು ಗೋಳಾಡಿದ್ದಾರೆ.

ಗ್ಯಾಸ್ ಅಭಾವ: ವೃದ್ಧಾಶ್ರಮದಲ್ಲಿ ಪರದಾಟ

ಕೊಡಗು ಜಿಲ್ಲೆಯ ಮಡಿಕೇರಿಯ ವೃದ್ಧಾಶ್ರಮದಲ್ಲಿ 25ಕ್ಕೂ ಹೆಚ್ಚು ವೃದ್ಧರಿದ್ದಾರೆ. ಆಹಾರ ಬೇಯಿಸೋದಕ್ಕೆ
ಗ್ಯಾಸ್ ಟ್ರಬಲ್ ಎದುರಾಗಿದೆ. ದಾನಿಗಳು ಗ್ಯಾಸ್ ಸಿಲಿಂಡರ್ ಕೊಟ್ಟು ಸಹಕರಿಸುವಂತೆ ಮನವಿ ಮಾಡಿದ್ದಾರೆ. ರಾಯಚೂರು, ಕೋಲಾರ, ಹಾವೇರಿ ಸೇರಿದಂತೆ ರಾಜ್ಯದ ಹಲವೆಡೆ ಎಲ್ಪಿಜಿಜ ಸಿಲಿಂಡರ್ ಸಮಸ್ಯೆ ತಲೆದೂರಿದೆ. ಕೇಂದ್ರ ಸರ್ಕಾರಕ್ಕೆ ಮತ್ತೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಎಲ್ಪಿಜಿ ಕೊರತೆ ನೀಗಿಸುವ ಹಾಗೆ ಮನವಿ ಮಾಡಿದ್ದಾರೆ.

ವರದಿ: ಬ್ಯೂರೋ ರಿಪೋರ್ಟ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *